ಜಪಾನ್: ಕೊರೊನಾ ಮಹಾ ಮಾರಿ ಒಬ್ಬೊಬ್ಬರಿಗೆ ಒಂದೊಂದು ಸಂಕಷ್ಟವನ್ನು ತಂದೊಡ್ಡುತ್ತಿದ್ದು, ಜಪಾನ್‌ನಲ್ಲಿ ಈಗ ಕ್ರೆಡಿಟ್ ಕಾರ್ಡ್‌ಗಳ ನಂಬರ್ ಸಮಸ್ಯೆ ಎದುರಾಗಿದೆ.
ಹೌದು ಕೊರೊನಾ ಸಾಂಕ್ರಾಮಿಕ ಪಿಡುಗು ಜಗತ್ತಿಗೆ ಆವರಿಸಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿವೆ. ಆದ್ರೆ ಜಪಾನ್‌ನಲ್ಲಿ ಮಾತ್ರ ಬೆರೆಯದೇ ಸಮಸ್ಯೆ. ಡಿಜಿಟಲ್ ಕ್ಯಾಶ್ ವ್ಯವಹಾರ ಉತ್ತೇಜಿಸಲು ಜಪಾನ್ ಸರ್ಕಾರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳ ಬಳಕೆಗೆ ಪ್ರೇರಣೆ ನೀಡುತ್ತಿದೆ.
ಆದ್ರೆ ಈ ಡಿಜಿಟಲ್ ವ್ಯವಹಾರವೇ ಜಪಾನ್‌ಗೆ ಸಮಸ್ಯೆ ತಂದೊಡ್ಡಿದೆ. ಯಾಕಂದ್ರೆ ಜಪಾನೀಯರು ಸಿಕ್ಕಾಪಟ್ಟೆ ಕ್ರೆಡಿಟ್ ಕಾರ್ಟ್ ಬಳಸಲು ಆರಂಭಿಸಿದ್ದಾರೆ. ಪರಿಣಾಮ 16 ಡಿಜಿಟ್‌ಗಳ ನಂಬರ್‌ಗಳೂ ಈಗ ಬಳಸಲು ಸಾಕಾಗುತ್ತಿಲ್ಲ.
ಪರಿಣಾಮ ಜಪಾನ್ ಸರ್ಕಾರ ಈಗ ಇಕ್ಕಟ್ಟಿಗೆ ಸಿಲುಕಿದೆ. ಖಾಸಗಿ ಕಂಪನಿಗಳು ಮತ್ತು ತಜ್ಞರು ಜಪಾನ್ ಸರ್ಕಾರಕ್ಕೆ ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ತುಂಬಾ ಇಕ್ಕಟ್ಟಿನ ದಿನಗಳು ಬರಲಿವೆ ಎಂದು ಎಚ್ಚರಿಸಿದ್ದಾರೆ.