80 ವರ್ಷ ಆಯ್ತು ಈ ತಾತ ತನ್ನ ಕೂದಲು ತೊಳೆದು, ಪುಣ್ಯಾತ್ಮ ಬಾಚಿಕೊಂಡೂ ಇಲ್ಲ!
ನಿಮ್ಮ ಕೂದಲನ್ನು ಸದೃಢ ಹಾಗೂ ಬಲಶಾಲಿಯಾಗಿಸಲು ಈ ಹೇರ್ ಆಯಿಲ್ ಬಳಸಿ ಅಥವಾ ನಿಮ್ಮ ಕೇಶವು ಸುಂದರವಾಗಿ ಕಾಣಲು ಈ ಶಾಂಪೂ ಬಳಿಸ ಅಂತಾ ಟಿವಿಯಲ್ಲಿ, ರೇಡಿಯೋದಲ್ಲಿ ಕೇಳಿರುತ್ತೀರ. ಆದರೆ, ಇಲ್ಲೊಬ್ಬ 92 ವರ್ಷದ ವೃದ್ಧ ಇವೆಲ್ಲದಕ್ಕೂ ಡೋಂಟ್ ಕೇರ್ ಎಂಬಂತೆ ಕಳೆದ 80 ವರ್ಷಗಳಿಂದ ತನ್ನ ಕೂದಲನ್ನೇ ತೊಳೆದಿಲ್ಲವಂತೆ. ಅಷ್ಟೇ ಅಲ್ಲ, ತನ್ನ ಕೂದಲಿಗೆ ಬಾಚಣಿಗೆ ಸಹ ಬಳಸಿಲ್ಲ ಮತ್ತು ಕಟ್ಟಿಂಗ್ ಅಂತೂ ಮಾಡಿಸಿಕೊಂಡಿಲ್ಲವಂತೆ. ಅಜ್ಜನ ಕೂದಲು 80 ವರ್ಷದಲ್ಲಿ ಎಷ್ಟು ಮೀಟರ್ ಉದ್ದ ಬೆಳೆದಿದೆ!? […]
ನಿಮ್ಮ ಕೂದಲನ್ನು ಸದೃಢ ಹಾಗೂ ಬಲಶಾಲಿಯಾಗಿಸಲು ಈ ಹೇರ್ ಆಯಿಲ್ ಬಳಸಿ ಅಥವಾ ನಿಮ್ಮ ಕೇಶವು ಸುಂದರವಾಗಿ ಕಾಣಲು ಈ ಶಾಂಪೂ ಬಳಿಸ ಅಂತಾ ಟಿವಿಯಲ್ಲಿ, ರೇಡಿಯೋದಲ್ಲಿ ಕೇಳಿರುತ್ತೀರ.
ಆದರೆ, ಇಲ್ಲೊಬ್ಬ 92 ವರ್ಷದ ವೃದ್ಧ ಇವೆಲ್ಲದಕ್ಕೂ ಡೋಂಟ್ ಕೇರ್ ಎಂಬಂತೆ ಕಳೆದ 80 ವರ್ಷಗಳಿಂದ ತನ್ನ ಕೂದಲನ್ನೇ ತೊಳೆದಿಲ್ಲವಂತೆ. ಅಷ್ಟೇ ಅಲ್ಲ, ತನ್ನ ಕೂದಲಿಗೆ ಬಾಚಣಿಗೆ ಸಹ ಬಳಸಿಲ್ಲ ಮತ್ತು ಕಟ್ಟಿಂಗ್ ಅಂತೂ ಮಾಡಿಸಿಕೊಂಡಿಲ್ಲವಂತೆ.
ಅಜ್ಜನ ಕೂದಲು 80 ವರ್ಷದಲ್ಲಿ ಎಷ್ಟು ಮೀಟರ್ ಉದ್ದ ಬೆಳೆದಿದೆ!? ಅಂದ ಹಾಗೆ, ಈ ಕೇಶಕುಮಾರ ತಾತನ ಹೆಸರು ನುಯ್ಯೆನ್ ವಾನ್ ಚಿಯೆನ್. ವಿಯೆಟ್ನಾಂ ದೇಶದ ಈ ಅಜ್ಜಯ್ಯನ ಕೇಶ ರಾಶಿ ಇದೀಗ ಒಂದಲ್ಲ ಎರಡಲ್ಲ ಬರೋಬ್ಬರಿ 5 ಮೀಟರ್ನಷ್ಟು ಉದ್ದ ಬೆಳೆದು ನಿಂತಿದೆ.
ಆದರೆ, ತಾತನಿಗೆ ಈ ಬಗ್ಗೆ ಚಿಂತೆಯೇ ಇಲ್ಲವಂತೆ. ಯಾಕೆ ಅಜ್ಜ ನಿನ್ನ ಕೂದಲು ಕತ್ತರಿಸಿಲ್ಲ ಎಂದು ಯಾರೋ ಕೇಳಿದ್ದಕ್ಕೆ ಅಯ್ಯಯ್ಯೋ ನನ್ನ ಕೂದಲನ್ನು ಕತ್ತರಿಸಿಕೊಂಡ ಮರುದಿನವೇ ನಾನು ಸತ್ತುಹೋಗ್ತೀನಿ. ಇಲ್ಲಪ್ಪಾ ನಾನು ನನ್ನ ಕೂದಲನ್ನು ಕತ್ತಿರಿಸೋಲ್ಲ. ಅದನ್ನು ತೊಳೆಯುವುದಿಲ್ಲ ಅಥವಾ ಬಾಚುವುದೂ ಇಲ್ಲ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.
Published On - 2:53 pm, Thu, 27 August 20