ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಟೈಮ್ ನಿಯತಕಾಲಿಕೆಯ ವರ್ಷದ ವ್ಯಕ್ತಿಯಾಗಿ (person of the year) ಆಯ್ಕೆ ಮಾಡಲಾಗಿದೆ ಎಂದು ಎಎಫ್ಪಿ ಶುಕ್ರವಾರ ವರದಿ ಮಾಡಿದೆ.
ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಟೈಮ್ ನಿಯತಕಾಲಿಕೆ ವರ್ಷದ ವ್ಯಕ್ತಿಗಳಾಗಿ ಆಯ್ಕೆ ಮಾಡಿದೆ. ಕೋವಿಡ್-19ವಿರುದ್ಧ ಹೊರಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಂಚೂಣಿ ಆರೋಗ್ಯ ಕಾರ್ಯಕರ್ತ ಆಂಥೋನಿ ಫೌಸಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ 2020ರ ವರ್ಷದ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
1997ರಿಂದ ಟೈಮ್ ನಿಯತಕಾಲಿಕೆ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡುತ್ತಿದೆ. ಸಾಮಾನ್ಯವಾಗಿ ದೇಶದ ಮೇಲೆ ಹೆಚ್ಚು ಪ್ರಭಾವ ಬೀರಿದ ಓರ್ವ ಅಥವಾ ಹಲವರನ್ನು ಆಯ್ಕೆ ಮಾಡಲಾಗುತ್ತದೆ. 2019ರಲ್ಲಿ ಟೈಮ್ನ ವರ್ಷದ ವ್ಯಕ್ತಿಯಾಗಿ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ರನ್ನು ಆಯ್ಕೆ ಮಾಡಲಾಗಿತ್ತು.
2020ರ ವರ್ಷದಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಟೈಮ್ ನಿಯತಕಾಲಿಕೆಯ ಓದುಗರ ಅಭಿಪ್ರಾಯ ಕೇಳಿತ್ತು. 80 ಲಕ್ಷಕ್ಕೂ ಹೆಚ್ಚು ಜನರು ಅಭಿಪ್ರಾಯ ಹಂಚಿಕೊಂಡಿದ್ದರು.
ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?
Published On - 4:27 pm, Fri, 11 December 20