AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಗೆ ಆಯಕಟ್ಟಿನ ಸ್ಥಾನ ನೀಡಿದ ಬೈಡನ್! ಯಾರವರು?

ವೇದಾಂತ್​ ಪಟೇಲ್​ ಇಷ್ಟು ದಿನ ಬೈಡನ್​ ಉದ್ಘಾಟನಾ ಸಮಿತಿಯ ವಕ್ತಾರ ಆಗಿದ್ದರು. ಹಾಗೇ ಬೈಡನ್​ ಚುನಾವಣಾ ಪ್ರಚಾರದ ವೇಳೆ ಪ್ರಾದೇಶಿಕ ಸಂವಹನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಗೆ ಆಯಕಟ್ಟಿನ ಸ್ಥಾನ ನೀಡಿದ ಬೈಡನ್! ಯಾರವರು?
ವೇದಾಂತ್ ಪಟೇಲ್​
Lakshmi Hegde
|

Updated on:Dec 19, 2020 | 12:02 PM

Share

ವಾಷಿಂಗ್ಟನ್: ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್​ ತಮ್ಮ ಕಾರ್ಯಾಂಗ ವ್ಯಾಪ್ತಿಯಲ್ಲಿ ಭಾರತೀಯ ಮೂಲದ ಅಮೆರಿಕನ್ನರಿಗೆ ಹೆಚ್ಚಿನ ಸ್ಥಾನ-ಮಾನ ನೀಡುತ್ತಿದ್ದಾರೆ. ಅಮೆರಿಕದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭಾರತೀಯ ಮೂಲದವರು ಎಂಬುದೇ ಒಂದು ವಿಶೇಷ ಆಗಿರುವಾಗ, ಇತ್ತೀಚೆಗೆ ಜೋ ಬೈಡನ್​ ಹೊಸದಾಗಿ ರಚಿಸಿದ್ದ ಏಜೆನ್ಸಿ ಪರಿಶೀಲನಾ ತಂಡದಲ್ಲೂ 20 ಮಂದಿ ಭಾರತೀಯ ಮೂಲದವರಿಗೆ ಸ್ಥಾನ ನೀಡಿದ್ದರು.

ಇದೀಗ ಇನ್ನೋರ್ವ ಭಾರತೀಯನಿಗೆ ಜೋ ಬೈಡನ್​ ಮನ್ನಣೆ ನೀಡಿದ್ದಾರೆ. ವೈಟ್​ ಹೌಸ್​​ನ ಸಂವಹನ ಮತ್ತು ಮಾಧ್ಯಮ ವಿಭಾಗಕ್ಕೆ ಹೆಚ್ಚುವರಿ ಸದಸ್ಯರನ್ನು ನೇಮಕ ಮಾಡಿದ ಬೈಡೆನ್​, ಭಾರತೀಯ ಮೂಲದ ವೇದಾಂತ್​ ಪಟೇಲ್​ರನ್ನು ಸಹಾಯಕ ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.

ಪಟೇಲ್​ ಇಷ್ಟು ದಿನ ಬೈಡನ್​ ಉದ್ಘಾಟನಾ ಸಮಿತಿಯ ವಕ್ತಾರ ಆಗಿದ್ದರು. ಹಾಗೇ ಬೈಡನ್​ ಚುನಾವಣಾ ಪ್ರಚಾರದ ವೇಳೆ ಪ್ರಾದೇಶಿಕ ಸಂವಹನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ಅಮೆರಿಕ ಸಂಸದೆ, ಭಾರತೀಯ ಮೂಲದ ಪ್ರಮೀಳಾ ಜಯಪಾಲ್​ರ ಸಂವಹನ ನಿರ್ದೇಶಕರಾಗಿ, ಸಂಸದ ಮೈಕ್​ ಹೊಂಡಾರ ಸಂವಹನ ನಿರ್ದೇಶಕರಾಗಿ ಮತ್ತು ಡೆಮಾಕ್ರಟಿಕ್​​ ನ್ಯಾಷನಲ್ ಕಮಿಟಿಯ ಪಾಶ್ಚಿಮಾತ್ಯ ಪ್ರಾದೇಶಿಕ ಪತ್ರಿಕಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ವೇದಾಂತ್​ ಹುಟ್ಟಿದ್ದು ಭಾರತದಲ್ಲಿ..ಬೆಳೆದಿದ್ದೆಲ್ಲ ಕ್ಯಾಲಿಫೋರ್ನಿಯಾದಲ್ಲಿ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಫ್ಲೋರಿಡಾ ಯೂನಿವರ್ಸಿಟಿಯಲ್ಲಿ ಪದವೀಧರರಾಗಿದ್ದಾರೆ. ಜೋ ಬೈಡನ್​ ಶುಕ್ರವಾರ ಒಟ್ಟು 16 ಜನರನ್ನು ಶ್ವೇತಭವನದ ಸಂವಹನ ಮತ್ತು ಪತ್ರಿಕಾ ಸಿಬ್ಬಂದಿಯನ್ನಾಗಿ ನೇಮಕ ಮಾಡಿದ್ದು, ಅದರಲ್ಲಿ ವೇದಾಂತ್​ಗೆ ಒಂದು ಆಯಕಟ್ಟಿನ ಸ್ಥಾನ ನೀಡಲಾಗಿದೆ.

ಅಮೆರಿಕ ರಕ್ಷಣಾ ಕಾಯ್ದೆಗೇ ಕೊಕ್ಕೆ ಹಾಕಿ ಕುಳಿತ ಟ್ರಂಪ್: ಭಾರತದ ಮೇಲೇನು ಪರಿಣಾಮ?

Published On - 11:18 am, Sat, 19 December 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ