ಹಮಾಸ್ ಉಗ್ರರ ಒತ್ತೆಯಾಳುಗಳಾಗಿದ್ದ ಇಬ್ಬರು ಅಮೆರಿಕ​​ ಪ್ರಜೆಗಳ ಬಿಡುಗಡೆ, ಆರೋಗ್ಯ ವಿಚಾರಿಸಿದ ಜೋ ಬೈಡನ್

|

Updated on: Oct 21, 2023 | 12:23 PM

ಶುಕ್ರವಾರ ರಾತ್ರಿ ಅಮೆರಿಕದ ಪ್ರಜೆಗಳಾದ ಜುಡಿತ್ ತೈ ರಾನನ್ ಮತ್ತು ಅವರು ಮಗಳು ನಟಾಲಿ ಶೋಷನಾ ರಾನನ್ ಅವರು ಹಮಾಸ್​​ ಕೈಯಿಂದ ಬಿಡುಗಡೆಗೊಂಡು ಇಸ್ರೇಲ್​​ಗೆ ಬಂದಿದ್ದಾರೆ ಎಂದು ಇಸ್ರೇಲ್​​​ ಸರ್ಕಾರ ಹೇಳಿದೆ. ಈ ಇಬ್ಬರಲ್ಲಿಯೂ ಅಮೆರಿಕದ ಅಧ್ಯಕ್ಷ ಜೋ ಬೈಡನ್​​​ ಫೋನ್​​ ಮೂಲಕ ಮಾತನಾಡಿದ್ದಾರೆ.

ಹಮಾಸ್ ಉಗ್ರರ ಒತ್ತೆಯಾಳುಗಳಾಗಿದ್ದ ಇಬ್ಬರು ಅಮೆರಿಕ​​ ಪ್ರಜೆಗಳ ಬಿಡುಗಡೆ, ಆರೋಗ್ಯ ವಿಚಾರಿಸಿದ ಜೋ ಬೈಡನ್
ಅಮೆರಿಕ ಪ್ರಜೆಗಳ ಬಿಡುಗಡೆ ಮಾಡಿದ ಹಮಾಸ್
Follow us on

ಹಮಾಸ್​​ ಭಯೋತ್ಪಾದಕರು (Hamas terrorists) ಮತ್ತು ಇಸ್ರೇಲ್ (Israel)​​ ನಡುವೆ ನಿರಂತರ ಘರ್ಷಣೆಗಳು ನಡೆಯುತ್ತಿದೆ. ಈ ಯುದ್ಧದಿಂದ ಹಲವು ಸಾವು-ನೋವುಗಳು ಸಂಭವಿಸಿದೆ. ಎರಡು ರಾಷ್ಟ್ರಗಳು ಹಠದಲ್ಲಿ ನಿಂತಿರುವಂತೆ ಕಾಣುತ್ತಿದೆ. ನೀ ಬಿಡಲ್ಲ, ನಾನು ಬಿಡಲಾರೇ ಎಂಬಂತೆ ಎರಡು ಕಡೆ ಕಾದಾಟಗಳು ನಡೆಯುತ್ತಿದೆ. ಇದರ ಮಧ್ಯೆ ಹಮಾಸ್​​ ಉಗ್ರರು 200ಕ್ಕೂ ಹೆಚ್ಚು ಇಸ್ರೇಲ್​​ ಸೇರಿ ಅಮೆರಿಕಾದ ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಒಂದಿಷ್ಟು ಜನರನ್ನು ಹಮಾಸ್​​ ಉಗ್ರರಿಂದ ಇಸ್ರೇಲ್​​​ ಸೈನ್ಯ ಬಿಡಿಸಿಕೊಂಡು ಬಂದಿದೆ. ಆದರೆ ಇನ್ನು ಸುಮಾರಷ್ಟು ಜನ ಹಮಾಸ್​​ ಕೈ ವಶದಲ್ಲಿದ್ದಾರೆ. ಇನ್ನು ಅಮೆರಿಕದ ನಾಗರಿಕರು ಕೂಡ ಹಮಾಸ್​​​ ವಶದಲ್ಲಿದ್ದು, ಇದೀಗ ಇಬ್ಬರು ಅಮೆರಿಕ ಪ್ರಜೆಗಳನ್ನು ಹಮಾಸ್​​​ ಬಿಡುಗಡೆ ಮಾಡಿದೆ ಎಂದು ಇಸ್ರೇಲ್​​ ಸೈನ್ಯ ಹೇಳಿದೆ.

ಶುಕ್ರವಾರ ರಾತ್ರಿ ಅಮೆರಿಕದ ಪ್ರಜೆಗಳಾದ ಜುಡಿತ್ ತೈ ರಾನನ್ ಮತ್ತು ಅವರು ಮಗಳು ನಟಾಲಿ ಶೋಷನಾ ರಾನನ್ ಅವರು ಹಮಾಸ್​​ ಕೈಯಿಂದ ಬಿಡುಗಡೆಗೊಂಡು ಇಸ್ರೇಲ್​​ಗೆ ಬಂದಿದ್ದಾರೆ ಎಂದು ಇಸ್ರೇಲ್​​​ ಸರ್ಕಾರ ಹೇಳಿದೆ. ಈ ಇಬ್ಬರಲ್ಲಿಯೂ ಅಮೆರಿಕದ ಅಧ್ಯಕ್ಷ ಜೋ ಬೈಡನ್​​​ ಫೋನ್​​ ಮೂಲಕ ಮಾತನಾಡಿದ್ದಾರೆ. ಈ ಸಮಯದಲ್ಲಿ ತಾಯಿ -ಮಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. 14 ದಿನಗಳ ಕಾಲ ನಮ್ಮ ನಾಗರಿಕರು ತುಂಬಾ ಸಂಕಷ್ಟ ಅನುಭವಿಸಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಕುಟುಂಬವನ್ನು ಭೇಟಿಯಾಗಲಿದ್ದಾರೆ. ತುಂಬಾ ಸಂತೋಷವಾಗುತ್ತಿದೆ. ಇನ್ನು ಮುಂದೆ ಅವರು ತಮ್ಮ ಕುಟುಂಬದ ಜತೆಗೆ ಸಂತೋಷವಾಗಿರಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಇಸ್ರೇಲ್ ಭದ್ರತಾ ಸಿಬ್ಬಂದಿಗೆ ಕೇರಳದಿಂದ ಸಮವಸ್ತ್ರ ಸರಬರಾಜು; ಕಣ್ಣೂರಿನ ಮರ್ಯನ್ ವರ್ಲ್ಡ್​ಫೇಮಸ್

ಇನ್ನು ಈ ಕಾರ್ಯಕ್ಕೆ ಸಹಾಯ ಮಾಡಿದ ಕತಾರ್ ಮತ್ತು ಈಜಿಪ್ಟ್‌, ಇಸ್ರೇಲ್​​ಗೆ ಧನ್ಯವಾದವನ್ನು ಜೋ ಬೈಡನ್ ಹೇಳಿದ್ದಾರೆ. ಈ ಬಿಡುಗಡೆ ಇತರ ಒತ್ತೆಯಾಳು ಕುಟುಂಬಕ್ಕೆ ಭರವಸೆಯನ್ನು ತಂದಿದೆ. ಹೀಗಾಗಿ ಮಾನವೀಯತೆಗೆ ಆದ್ಯತೆ ನೀಡಿ, ಸಂಘರ್ಷವನ್ನು ಕೊನೆಗೊಳಿಸುವುದು ಅಗತ್ಯ ಎಂದು ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮಿರ್ಜಾನಾ ಸ್ಪೋಲ್ಜಾರಿಕ್ ಹೇಳಿದ್ದಾರೆ.

ಈ ತಾಯಿ-ಮಗಳನ್ನು ಅ.7ರಂದು ಇಸ್ರೇಲ್-ಗಾಜಾ ಗಡಿಯ ಸಮೀಪವಿರುವ ನಹಾಲ್ ಓಜ್ ಕಿಬ್ಬುಟ್ಜ್‌ನಿಂದ ಅಪಹಾರಿಸಲಾಗಿತ್ತು. ಈ ಇಬ್ಬರನ್ನು ಅಲ್-ಕಸ್ಸಾಮ್ ಬ್ರಿಗೇಡ್ಸ್ ಮಾನವೀಯ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್​​ ಹೇಳಿದೆ. ಇನ್ನು ಅನೇಕ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇಸ್ರೇಲ್​​ ಹೇಳಿದೆ. ಜುಡಿತ್ ತೈ ರಾನನ್ ಅಮೆರಿಕ ಹಾಗೂ ಇಸ್ರೇಲ್​​ಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ