ಉಭಯ ದೇಶಗಳ ನಡುವೆ ಎಷ್ಟು ಪ್ರೀತಿ, ವಿಶ್ವಾಸವಿದೆ ಎಂದು ತೋರಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim Jong Un)ಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಕಾರು ರಷ್ಯಾದಲ್ಲೇ ಸಿದ್ಧಪಡಿಸಲಾಗಿದ್ದು, ಹಲವು ವಿಶೇಷತೆಯನ್ನು ಹೊಂದಿದೆ. ಈ ಉಡುಗೊರೆಯು ವಿಶ್ವಸಂಸ್ಥೆಯ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆಯು ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ವಹಿವಾಟುಗಳನ್ನು ನಿಷೇಧಿಸಿದೆ.
ಮಾಧ್ಯಮ ಸಂಸ್ಥೆ ಕೆಸಿಎನ್‌ಎ ಪ್ರಕಾರ, ಫೆಬ್ರವರಿ 18 ರಂದು ರಷ್ಯಾದ ಕಾರನ್ನು ಉತ್ತರ ಕೊರಿಯಾದ ಕಿಮ್‌ನ ಸಹಾಯಕನಿಗೆ ಹಸ್ತಾಂತರಿಸಲಾಯಿತು.
ಕಿಮ್ ಸಹೋದರಿ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಈ ಉಡುಗೊರೆಯು ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ ಮತ್ತು ಕಿಮ್ ಜಾಂಗ್ ಉನ್ ಪುಟಿನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಪುಟಿನ್ ಅವರನ್ನು ಭೇಟಿ ಮಾಡಲು ಕಿಮ್ ರಷ್ಯಾವನ್ನು ತಲುಪಿದ್ದರು, ಅಲ್ಲಿ ಅವರು ಪುಟಿನ್ ಅವರ ಕಾರಿನಲ್ಲಿ ಕುಳಿತುಕೊಂಡರು. ಈ ವೇಳೆ ಪುಟಿನ್ ಅವರ ಕಾರು ‘ಔರಸ್ ಲಿಮೋಸಿನ್’ ಬಗ್ಗೆ ಕಿಮ್ ಆಸಕ್ತಿ ತೋರಿದ್ದು, ಇದೀಗ ಪುಟಿನ್ ಅವರದ್ದೇ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮತ್ತಷ್ಟು ಓದಿ:Kim Jong Un: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 40 ದಿನಗಳಿಂದ ಕಾಣಿಸ್ತಿಲ್ವಂತೆ, ಆರೋಗ್ಯದ ಬಗ್ಗೆ ಮತ್ತೆ ಊಹಾಪೋಹ
ಕಾರಿನ ಬೆಲೆ ಎಷ್ಟು?
ಮಾಧ್ಯಮ ವರದಿಗಳ ಪ್ರಕಾರ, ಪುಟಿನ್ ಅವರು ಆರಿಸ್ ಮೋಟಾರ್ ಕಂಪನಿಯ ಕಾರನ್ನು ಕಿಮ್‌ಗೆ ನೀಡಿದ್ದಾರೆ. ಆರಿಸ್ ಕಂಪನಿಯ ಕಾರುಗಳ ಆರಂಭಿಕ ಬೆಲೆ ಸುಮಾರು 4 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತದೆ, ಇದು ರೋಲ್ಸ್ ರಾಯ್ಸ್ ಬೆಲೆಗೆ ಸಮನಾಗಿರುತ್ತದೆ.
ಕಿಮ್‌ಗೆ ಕಾರುಗಳೆಂದರೆ ಒಲವು
ರಷ್ಯಾದಿಂದ ಉತ್ತರ ಕೊರಿಯಾಕ್ಕೆ ಯಾವ ಮಾದರಿ ಕಾರನ್ನು ಕಳುಹಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಕಿಮ್‌ಗೆ ಆಟೋಮೊಬೈಲ್‌ಗಳೆಂದರೆ ತುಂಬಾ ಇಷ್ಟ ಎಂದು ನಂಬಲಾಗಿದೆ ಮತ್ತು ಅವರ ಬಳಿ ಅನೇಕ ವಿದೇಶಿ ಐಷಾರಾಮಿ ಕಾರುಗಳಿವೆ.
ಕೊರಿಯಾ ಉಕ್ರೇನ್ ಯುದ್ಧಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ
ಉಭಯ ದೇಶಗಳ ನಡುವೆ ಆಮದು-ರಫ್ತು ವೇಗವಾಗಿ ಹೆಚ್ಚಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬಳಸಿದ ಫಿರಂಗಿ, ರಾಕೆಟ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪೂರೈಸುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ಉತ್ತರ ಕೊರಿಯಾ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿರುವುದನ್ನು ನಿರಾಕರಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:54 am, Tue, 20 February 24