ಜೀವಂತ ಸಮಾಧಿಯಾದರೆ ಸ್ವರ್ಗ ಸಿಗುವುದು, ಏಸುವನ್ನು ಭೇಟಿ ಮಾಡಬಹುದು ಎನ್ನುವ ಪಾದ್ರಿಯ ಮಾತು ನಂಬಿ ಜೀವ ಬಿಟ್ಟವರ ಸಂಖ್ಯೆ 200ಕ್ಕೆ ಏರಿದೆ, ಇನ್ನೂ 600 ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೀನ್ಯಾದ ಕಿಲಿಫಿಯ ಕರಾವಳಿ ಕೌಂಟಿಯಲ್ಲಿರುವ ಪಾದ್ರಿಯ 800 ಎಕರೆ ಭೂಮಿಯಲ್ಲಿ ಇಲ್ಲಿಯವರೆಗೆ 200ಕ್ಕೂ ಹೆಚ್ಚಿನ ಶವಗಳನ್ನು ತೆಗೆಯಲಾಗಿದೆ. ಪಾದ್ರಿ ಮೆಕೆಂಜಿ ಅವರು 2019 ರಲ್ಲಿ ತನ್ನ ಚರ್ಚ್ ಅನ್ನು ಮುಚ್ಚಿ ಅರಣ್ಯ ಪ್ರದೇಶದಲ್ಲಿರುವ ತನ್ನ ಜಮೀನಿಗೆ ಕೃಷಿ ಮಾಡಲು ತೆರಳಿದ್ದರು.
ಶವಾಗಾರಗಳು ತುಂಬಿವೆ, ಸಾವುಗಳು ಹೆಚ್ಚಾಗುತ್ತಿವೆ ಶವ ಪರೀಕ್ಷೆ ಪೂರ್ಣಗೊಳ್ಳುವವರೆಗೆ ನಾಲ್ಕು ದಿನ ಬಿಡುವು ತೆಗೆದುಕೊಳ್ಳಲಾಗಿತ್ತು,ಆಸ್ಪತ್ರೆಯ ಶವಾಗಾರವು 40 ಶವಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹಿರಂಗವಾದ ನಂತರ, ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರೇಪಿಸಲಿಲ್ಲ ಎಂದು ಅವರು ಹೇಳಿದ್ದಾರೆ. 2019ರಲ್ಲೇ ಚರ್ಚ್ ಅನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಮತ್ತಷ್ಟು ಓದಿ: ಜೀವಂತ ಸಮಾಧಿಯಾದ್ರೆ ಸ್ವರ್ಗ ಸಿಗುವುದು ಎಂದು ನಂಬಿಸಿದ್ದ ಪಾದ್ರಿ: ಜಮೀನಿನಲ್ಲಿ ಪತ್ತೆಯಾದ ಶವಗಳ ಸಂಖ್ಯೆ 90ಕ್ಕೆ ಏರಿಕೆ
ಇದರಿಂದ ಜನರು ಹಸಿವಿನಿಂದ ಸತ್ತರು ಎಂದು ಸಾಬೀತುಪಡಿಸಬಹುದು. ಈ ಹಿಂದೆ ಇಬ್ಬರು ಮಕ್ಕಳ ಸಾವಿಗೆ ಪಾದ್ರಿ ಪಾಲ್ ಮೆಕೆಂಜಿ ಕಾರಣರಾಗಿದ್ದರು . ನಂತರ ಪೋಷಕರ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೆಕೆಂಜಿ ಅವರ ವಿರುದ್ಧ ಸಾಕ್ಷ್ಯಗಳಿಲ್ಲದ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ