ಜೀವಂತ ಸಮಾಧಿಯಾದ್ರೆ ಸ್ವರ್ಗ ಸಿಗುವುದು ಎಂದು ನಂಬಿಸಿದ್ದ ಪಾದ್ರಿ: ಜಮೀನಿನಲ್ಲಿ ಪತ್ತೆಯಾದ ಶವಗಳ ಸಂಖ್ಯೆ 90ಕ್ಕೆ ಏರಿಕೆ
ಉಪವಾಸವಿದ್ದು ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತೆ, ಏಸುವನ್ನು ಭೇಟಿಯಾಗಬಹುದು ಎಂದು ಹೇಳಿದ ಪಾದ್ರಿ ಮಾತನ್ನು ನಂಬಿ ಜೀವಂತ ಸಮಾಧಿಯಾಗಿರುವವರ ಶವಗಳು ಇನ್ನೂ ಸಿಗುತ್ತಲೇ ಇವೆ.
ಉಪವಾಸವಿದ್ದು ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತೆ, ಏಸುವನ್ನು ಭೇಟಿಯಾಗಬಹುದು ಎಂದು ಹೇಳಿದ ಪಾದ್ರಿ ಮಾತನ್ನು ನಂಬಿ ಜೀವಂತ ಸಮಾಧಿಯಾಗಿರುವವರ ಶವಗಳು ಇನ್ನೂ ಸಿಗುತ್ತಲೇ ಇವೆ. ಕೀನ್ಯಾದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿವರೆಗೆ 90 ಶವಗಳು ಪಾದ್ರಿಯ ಜಮೀನಿನಲ್ಲಿ ಸಿಕ್ಕಿದೆ. ಅಲ್ಲಿರುವ ಸ್ಮಶಾನವು ತುಂಬಿ ಹೋಗಿರುವ ಪರಿಣಾಮ ಶವವನ್ನು ಹುಡುಕುವ ಕೆಲಸವನ್ನು ವಿಳಂಬ ಮಾಡಲಾಗುತ್ತಿದೆ. ಮಕ್ಕಳು ಸೇರಿದಂತೆ 90 ಮಂದಿಯ ಶವ ಈಗಾಗಲೇ ದೊರೆತಿದೆ.
ಶವಾಗಾರಗಳು ತುಂಬಿವೆ, ಸಾವುಗಳು ಹೆಚ್ಚಾಗುತ್ತಿವೆ ಶವ ಪರೀಕ್ಷೆ ಪೂರ್ಣಗೊಳ್ಳುವವರೆಗೆ ನಾಲ್ಕು ದಿನ ಬಿಡುವು ತೆಗೆದುಕೊಳ್ಳಲಾಗುತ್ತದೆ,ಆಸ್ಪತ್ರೆಯ ಶವಾಗಾರವು 40 ಶವಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹಿರಂಗವಾದ ನಂತರ, ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರೇಪಿಸಲಿಲ್ಲ ಎಂದು ಅವರು ಹೇಳಿದ್ದಾರೆ. 2019ರಲ್ಲೇ ಚರ್ಚ್ ಅನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಮತ್ತಷ್ಟು ಓದಿ: ಪಾದ್ರಿಯೊಬ್ಬರ ಜಮೀನಿನಲ್ಲಿ ಪತ್ತೆಯಾಯ್ತು 47 ಶವಗಳು, ಭಯ ಹುಟ್ಟಿಸುತ್ತೆ ಈ ಸಾವಿನ ಹಿಂದಿರುವ ಕಾರಣ
ಇದರಿಂದ ಜನರು ಹಸಿವಿನಿಂದ ಸತ್ತರು ಎಂದು ಸಾಬೀತುಪಡಿಸಬಹುದು. ಈ ಹಿಂದೆ ಇಬ್ಬರು ಮಕ್ಕಳ ಸಾವಿಗೆ ಪಾದ್ರಿ ಪಾಲ್ ಮೆಕೆಂಜಿ ಕಾರಣರಾಗಿದ್ದರು . ನಂತರ ಪೋಷಕರ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ