ಪಾದ್ರಿಯೊಬ್ಬರ ಜಮೀನಿನಲ್ಲಿ ಪತ್ತೆಯಾಯ್ತು 47 ಶವಗಳು, ಭಯ ಹುಟ್ಟಿಸುತ್ತೆ ಈ ಸಾವಿನ ಹಿಂದಿರುವ ಕಾರಣ
ಆಫ್ರಿಕಾದ ಕೀನ್ಯಾದಲ್ಲಿ ಕ್ರೈಸ್ತ ಪಾದ್ರಿಯೊಬ್ಬರ ಜಮೀನಿನಲ್ಲಿ ಇದುವರೆಗೆ 47 ಕ್ಕೂ ಅಧಿಕ ಮಂದಿಯ ಶವಗಳು ಪತ್ತೆಯಾಗಿದೆ. ಪಾದ್ರಿ ಮಾತನ್ನು ನಂಬಿ, ಸ್ವರ್ಗಕ್ಕೆ ಹೋಗುವ ಆಸೆಯಲ್ಲಿ 47ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ.
ಆಫ್ರಿಕಾದ ಕೀನ್ಯಾ(Kenya)ದಲ್ಲಿ ಕ್ರೈಸ್ತ ಪಾದ್ರಿಯೊಬ್ಬರ ಜಮೀನಿನಲ್ಲಿ ಇದುವರೆಗೆ 47 ಕ್ಕೂ ಅಧಿಕ ಮಂದಿಯ ಶವಗಳು ಪತ್ತೆಯಾಗಿದೆ. ಪಾದ್ರಿ ಮಾತನ್ನು ನಂಬಿ, ಸ್ವರ್ಗಕ್ಕೆ ಹೋಗುವ ಆಸೆಯಲ್ಲಿ 47ಕ್ಕೂ ಅಧಿಕ ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ಕೀನ್ಯಾದಲ್ಲಿ ಪಾದ್ರಿಯೊಬ್ಬರ ಜಮೀನಿನಲ್ಲಿ ಬರೋಬ್ಬರಿ 47 ಶವಗಳು ಪತ್ತೆಯಾಗಿವೆ. ಒಂದೊಮ್ಮೆ ನೀವು ಸ್ವರ್ಗಕ್ಕೆ ಹೋಗಬಯಸುತ್ತೀರಿ ಎಂದರೆ ಉಪವಾಸವಿರಿ ಬಳಿಕ ಜೀವಂತ ಸಮಾಧಿಯಾಗಿ ಎಂದು ಪಾದ್ರಿ ಹೇಳಿದ್ದರಂತೆ.
ಉಪವಾಸವಿರುವ ಜನರನ್ನು ಸಮಾಧಿ ಮಾಡಿದರೆ ಸ್ವರ್ಗಕ್ಕೆ ಹೋಗುತ್ತೀರಿ, ಯೇಸುವನ್ನು ಭೇಟಿಯಾಗುತ್ತೀರಿ ಎಂದು ಹೇಳಿದ್ದ ಕಾರಣ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಮೃತದೇಹವನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.
ಕೀನ್ಯಾ ಪೊಲೀಸರು ಒಂದೇ ಕುಟುಂಬದ 5 ಜನರನ್ನು ಸಮಾಧಿಯಿಂದ ತೆಗೆದಿದ್ದಾರೆ. ಪೊಲೀಸರು ಇಲ್ಲಿಯವರೆಗೆ 65 ಸಮಾಧಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರು ಸಮಾಧಿಯನ್ನು ಅಗೆಯುತ್ತಿದ್ದಾರೆ. ಆ ಮೃತದೇಹಗಳಲ್ಲಿ ಮಕ್ಕಳೂ ಇದ್ದಾರೆ.
ಮತ್ತಷ್ಟು ಓದಿ: South Africa: ದಕ್ಷಿಣ ಆಫ್ರಿಕಾದಲ್ಲಿ ಮನೆಹೊಕ್ಕ ದುಷ್ಕರ್ಮಿಗಳಿಂದ ಗುಂಡಿನ ದಾಳಿ; 10 ಸಾವು
ಬಹಿರಂಗವಾದ ನಂತರ, ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರೇಪಿಸಲಿಲ್ಲ ಎಂದು ಅವರು ಹೇಳಿದ್ದಾರೆ. 2019ರಲ್ಲೇ ಚರ್ಚ್ ಅನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಇದರಿಂದ ಜನರು ಹಸಿವಿನಿಂದ ಸತ್ತರು ಎಂದು ಸಾಬೀತುಪಡಿಸಬಹುದು. ಈ ಹಿಂದೆ ಇಬ್ಬರು ಮಕ್ಕಳ ಸಾವಿಗೆ ಪಾದ್ರಿ ಪಾಲ್ ಮೆಕೆಂಜಿ ಕಾರಣರಾಗಿದ್ದರು . ನಂತರ ಪೋಷಕರ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ