Video: ವಿಮಾನಕ್ಕೆ ಹಕ್ಕಿ ಡಿಕ್ಕಿ, ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, 20 ನಿಮಿಷಗಳ ಹಾರಾಟ ನಡೆಸಿ ಅಮೆರಿಕನ್ ಏರ್ಲೈನ್ಸ್ ತುರ್ತು ಭೂಸ್ಪರ್ಶ
ಅಮೆರಿಕನ್ ಏರ್ಲೈನ್ಸ್(American Airlines) ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಹಕ್ಕಿಗಳು ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು,
ಅಮೆರಿಕನ್ ಏರ್ಲೈನ್ಸ್(American Airlines) ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಹಕ್ಕಿಗಳು ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಬಳಿಕ 20 ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ತಕ್ಷಣ ಓಹಿಯೋ ಏರ್ಪೋರ್ಟ್ನಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಅಮೆರಿಕದ ಕಾಲಮಾನದ ಪ್ರಕಾರ, ಈ ಘಟನೆಯು ಏಪ್ರಿಲ್ 23 ರ ಬೆಳಗ್ಗೆ ನಡೆದಿದೆ. ಅದರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲಿ ಬೆಂಕಿ ಮತ್ತು ಕಪ್ಪು ಹೊಗೆ ಗೋಚರಿಸುತ್ತಿತ್ತು.
ಡೈಲಿ ಮೇಲ್’ ವರದಿಯ ಪ್ರಕಾರ, ಬೋಯಿಂಗ್ 737 ಫ್ಲೈಟ್ AA1958 ಓಹಿಯೋದ ಕೊಲಂಬಸ್ ನಗರದ ಜಾನ್ ಗ್ಲೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7:43 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನವು ಅರಿಝೋನಾ ರಾಜ್ಯದ ಫೀನಿಕ್ಸ್ ನಗರವನ್ನು ತಲುಪಬೇಕಿತ್ತು, ಆದರೆ ಅದು ಟೇಕ್ ಆಫ್ ಆದ 40 ನಿಮಿಷಗಳ ನಂತರ ರಾತ್ರಿ 8:22 ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು.
@FAANews I just saw AA1958 with major engine issues just after take off. Flames shooting from the engine and wonky, pulsing noises from the aircraft.
— CBUS4LIFE (@Cbus4Life) April 23, 2023
ವಿಮಾನ ಟೇಕ್ ಆಫ್ ಆದ ಕೆಲವು ನಿಮಿಷಗಳ ನಂತರ, ವಿಮಾನದಲ್ಲಿ ಬಹಳ ದೊಡ್ಡ ಶಬ್ದ ಕೇಳಿಸಿತು. ಇಂಜಿನ್ ಕೆಲಸ ನಿಲ್ಲಿಸಿದಂತೆ ಭಾಸವಾಯಿತು. ಏನಾಯಿತು ಎಂದು ನಮಗೆ ಅರ್ಥವಾಗಲಿಲ್ಲ. ನಂತರ ಪೈಲಟ್ ಘೋಷಣೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಹಕ್ಕಿ ಡಿಕ್ಕಿ ಹೊಡೆದಿದೆ ಎನ್ನುವ ಮಾಹಿತಿ ನೀಡಿದ್ದಾಗಿ ಪ್ರಯಾಣಿಕರು ಹೇಳಿದ್ದಾರೆ. ಬೆಂಕಿಯ ಸುದ್ದಿ ತಿಳಿದ ತಕ್ಷಣ ನಮಗೆಲ್ಲ ಭಯವಾಯಿತು.
ಆದರೆ ತುರ್ತು ಭೂಸ್ಪರ್ಶದ ನಂತರ, ನಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಸ್ವಲ್ಪ ಸಮಯ ಕಾದ ನಂತರ ಎಲ್ಲ ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ನಲ್ಲಿ ತುರ್ತು ಭೂಸ್ಪರ್ಶ
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, 4 ದಿನಗಳ ಹಿಂದೆ, ಅಂದರೆ ಏಪ್ರಿಲ್ 20 ರಂದು, ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಏರ್‌ಬಸ್ A321 ಉತ್ತರ ಕೆರೊಲಿನಾದ ಚಾರ್ಲೊಟ್ ಡೌಗ್ಲಾಸ್ ವಿಮಾನ ನಿಲ್ದಾಣದಿಂದ ಹೊರಟಿತ್ತು. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಇಂಜಿನ್ ವೈಫಲ್ಯದಿಂದಾಗಿ ಬೆಂಕಿ ರೆಕ್ಕೆಗಳಿಗೆ ಹರಡಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ