ಸ್ವರ್ಗ ಸಿಗುತ್ತೆ, ಏಸುವನ್ನು ನೋಡಬಹುದು ಎಂಬ ಪಾದ್ರಿ ಮಾತು ನಂಬಿ ಜೀವಂತ ಸಮಾಧಿಯಾದವರ ಸಂಖ್ಯೆ 110ಕ್ಕೆ ಏರಿಕೆ
ಉಪವಾಸವಿದ್ದು ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಏಸುವನ್ನು ನೋಡಬಹುದು ಎಂದು ಪಾದ್ರಿಯೊಬ್ಬರು ಹೇಳಿದ್ದ ಮಾತು ನಂಬಿ ಮಕ್ಕಳು ಸಮೇತ ಜೀವಂತ ಸಮಾಧಿಯಾದವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.
ಉಪವಾಸವಿದ್ದು ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಏಸುವನ್ನು ನೋಡಬಹುದು ಎಂದು ಪಾದ್ರಿಯೊಬ್ಬರು ಹೇಳಿದ್ದ ಮಾತು ನಂಬಿ ಮಕ್ಕಳು ಸಮೇತ ಜೀವಂತ ಸಮಾಧಿಯಾದವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಕೀನ್ಯಾದ ಕರಾವಳಿ ಪಟ್ಟಣವಾದ ಮಲಿಂಡಿ ಬಳಿ ಪೊಲೀಸರು ಕನಿಷ್ಠ 110 ಶವಗಳನ್ನು ಹೊರತೆಗೆದಿದ್ದಾರೆ, ಮತ್ತಷ್ಟು ಮೃತದೇಹಗಳು ದೊರೆಯುವ ನಿರೀಕ್ಷೆ ಇದೆ. ಆಸ್ಪತ್ರೆಯ ಶವಾಗಾರ ತುಂಬಿದ್ದರಿಂದ ನಾಲ್ಕು ದಿನಗಳ ಕಾಲ ಶವಗಳ ಹುಡುಕಾಟವನ್ನು ನಿಲ್ಲಿಸಲಾಗಿತ್ತು. ಕಳೆದ ಎರಡು ದಿನಗಳಲ್ಲಿ ಐವರು ಜೀವಂತವಾಗಿ ಪತ್ತೆಯಾಗಿದ್ದಾರೆ.
ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರು ಸಮಾಧಿಯನ್ನು ಅಗೆಯುತ್ತಿದ್ದಾರೆ. ಆ ಮೃತದೇಹಗಳಲ್ಲಿ ಮಕ್ಕಳೂ ಇದ್ದಾರೆ.
ಮತ್ತಷ್ಟು ಓದಿ: ಪಾದ್ರಿಯೊಬ್ಬರ ಜಮೀನಿನಲ್ಲಿ ಪತ್ತೆಯಾಯ್ತು 47 ಶವಗಳು, ಭಯ ಹುಟ್ಟಿಸುತ್ತೆ ಈ ಸಾವಿನ ಹಿಂದಿರುವ ಕಾರಣ
ಬಹಿರಂಗವಾದ ನಂತರ, ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರೇಪಿಸಲಿಲ್ಲ ಎಂದು ಅವರು ಹೇಳಿದ್ದಾರೆ. 2019ರಲ್ಲೇ ಚರ್ಚ್ ಅನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಇದರಿಂದ ಜನರು ಹಸಿವಿನಿಂದ ಸತ್ತರು ಎಂದು ಸಾಬೀತುಪಡಿಸಬಹುದು. ಈ ಹಿಂದೆ ಇಬ್ಬರು ಮಕ್ಕಳ ಸಾವಿಗೆ ಪಾದ್ರಿ ಪಾಲ್ ಮೆಕೆಂಜಿ ಕಾರಣರಾಗಿದ್ದರು . ನಂತರ ಪೋಷಕರ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ