ಕೊರೊನಾದಿಂದ ಕಂಗೆಟ್ಟಿದ್ದವನಿಗೆ ಹೊಡೆಯಿತು ಲಾಟರಿ! ದುಬೈನಲ್ಲಿ ಭಾರತೀಯನಿಗೆ ಒಲಿಯಿತು ₹ 7 ಕೋಟಿ ಜಾಕ್​ಪಾಟ್​

| Updated By: ಸಾಧು ಶ್ರೀನಾಥ್​

Updated on: Dec 22, 2020 | 10:40 AM

ಅವರ ಹೆಸರು ನವನೀತ್​ ಸಂಜೀವನ್. ವಯಸ್ಸು 30. ದುಬೈನಲ್ಲಿ ಹೆಂಡತಿ ಮಕ್ಕಳ ಜೊತೆ ವಾಸವಾಗಿದ್ದ ನವನೀತ್​, ಖಾಸಗಿ ಕಂಪೆನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್​ ಸಮಯದಲ್ಲಿ ಅವರು ಉದ್ಯೋಗ ಕಳೆದುಕೊಂಡಿದ್ದರು.

ಕೊರೊನಾದಿಂದ ಕಂಗೆಟ್ಟಿದ್ದವನಿಗೆ ಹೊಡೆಯಿತು ಲಾಟರಿ! ದುಬೈನಲ್ಲಿ ಭಾರತೀಯನಿಗೆ ಒಲಿಯಿತು ₹ 7 ಕೋಟಿ ಜಾಕ್​ಪಾಟ್​
ಲಾಟರಿ ವಿನ್​ ಆದ ನವನೀತ್​ ಸಂಜೀವನ್
Follow us on

ದುಬೈ: ದಾರಿ ಮೇಲೆ ಹೋಗುವಾಗ ಅಚಾನಕ್ಕಾಗಿ ಐದು ನೂರು ರೂಪಾಯಿ ಸಿಕ್ಕರೆ ಯಾರಿಗೆ ತಾನೇ ಖುಷಿ ಆಗುವುದಿಲ್ಲ ಹೇಳಿ? ಹೀಗಿರುವಾಗ ರಾತ್ರಿ ಬೆಳಗಾಗುವುದರೊಳಗೆ ನಿಮಗೆ ಏಳು ಕೋಟಿ ಸಿಕ್ಕಿಬಿಟ್ಟರೆ? ಹೀಗೊಂದು ಮ್ಯಾಜಿಕ್​ ದುಬೈನಲ್ಲಿ ವಾಸವಾಗಿರುವ ಕೇರಳ ಮೂಲದ ವ್ಯಕ್ತಿಯ ಜೀವನದಲ್ಲಾಗಿದೆ.

ಅವರ ಹೆಸರು ನವನೀತ್​ ಸಂಜೀವನ್. ವಯಸ್ಸು 30. ದುಬೈನಲ್ಲಿ ಹೆಂಡತಿ ಮಕ್ಕಳ ಜೊತೆ ವಾಸವಾಗಿದ್ದ ನವನೀತ್​, ಖಾಸಗಿ ಕಂಪೆನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್​ ಸಮಯದಲ್ಲಿ ಅವರು ಉದ್ಯೋಗ ಕಳೆದುಕೊಂಡಿದ್ದರು. ಕೆಲಸ ಹೋದ ನಂತರ ಬೆಟ್ಟವೇ ತಲೆಯಮೇಲೆ ಬಿದ್ದಂತೆ ಕೂತಿದ್ದ ಸಂಜೀವನ್​, ಹೊಸ ಹೊಸ ಕಂಪೆನಿಗಳಿಗೆ ರೆಸ್ಯೂಮ್ ಕಳಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದರು.

ನವೆಂಬರ್ 22ರಂದು ನವನೀತ್​ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ದುಬೈ ಡ್ಯೂಟಿ ಫ್ರೀ ರಾಫೆಲ್​ನಲ್ಲಿ ಲಾಟರಿ ಟಿಕೆಟ್​ ಖರೀದಿ ಮಾಡಿದ್ದರು. ಆದರೆ, ಲಕ್ಕಿ ಡ್ರಾದಲ್ಲಿ ವಿನ್ನರ್​ ನಾನೇ​ ಆಗಬಹದು ಎಂದು ಅವರು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ನಿನ್ನೆ ಲಕ್ಕಿ ಡ್ರಾನಲ್ಲಿ ಇವರ ಹೆಸರು ಕೂಡ ಇತ್ತು. ಈಗ ಇವರಿಗೆ ಬರೋಬ್ಬರಿ 7.3 ಕೋಟಿ ರೂಪಾಯಿ ಲಭಿಸಿದೆ.

ಈ ಬಗ್ಗೆ ಸ್ಥಳೀಯ ಮಾಧ್ಯಮದ ಜೊತೆ ಖುಷಿ ಹಂಚಿಕೊಂಡಿರುವ ಅವರು, ನನ್ನ ಹೆಂಡತಿ ಇಲ್ಲಿಯೇ ಕೆಲಸ ಮಾಡುತ್ತಿದ್ದಾಳೆ. ಕೆಲಸ ಸಿಗದ ಕಾರಣ ಮನೆಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಇಲ್ಲಿ ಸ್ವಲ್ಪ ಸಾಲ ಇತ್ತು. ಹೀಗಾಗಿ, ನಾನು ಇಲ್ಲಿಯೇ ಇರಬೇಕಾಗಿ ಬಂದಿತ್ತು. ಆದರೆ, ಈ ಲಾಟರಿ ನನ್ನ ಜೀವನವನ್ನೇ ಬದಲಿಸಿದೆ ಎಂದಿದ್ದಾರೆ.

ಕೊಡಗಿನಲ್ಲಿ ಲಾಟರಿ ಮಾರಾಟ ದಂಧೆ.. ಇಬ್ಬರ ಬಂಧನ

Published On - 10:24 pm, Mon, 21 December 20