ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಹೊಸ ಪ್ರಭೇದ ಪತ್ತೆ, ಭಾರತವೂ ಸೇರಿದಂತೆ 30 ದೇಶಗಳಿಂದ ವಿಮಾನಯಾನ ರದ್ದು

ಬ್ರಿಟನ್ ವಿಮಾನ ಸಂಚಾರಕ್ಕೆ ನಾಳೆಯಿಂದ (ಡಿ.22) ಬ್ರೇಕ್ ಬಿಳಲಿದ್ದು, ಡಿಸೆಂಬರ್ 31 ರವರೆಗೆ ಬ್ರಿಟನ್ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಭಾರತ ಮಾತ್ರವಲ್ಲದೆ 30 ದೇಶಗಳು ಬ್ರಿಟನ್​ಗೆ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ.

ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಹೊಸ ಪ್ರಭೇದ ಪತ್ತೆ, ಭಾರತವೂ ಸೇರಿದಂತೆ 30 ದೇಶಗಳಿಂದ ವಿಮಾನಯಾನ ರದ್ದು
ಸಾಂದರ್ಭಿಕ ಚಿತ್ರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 21, 2020 | 4:21 PM

ದೆಹಲಿ: ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಹೊಸ ಪ್ರಭೇದ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಿಂದಾಗಿ ಬ್ರಿಟನ್‌ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳಿಗೆ ನಿರ್ಬಂಧ ಹೇರಿ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ.

ನಾಳೆ ರಾತ್ರಿಯಿಂದ ಬ್ರಿಟನ್ ವಿಮಾನ ಸಂಚಾರಕ್ಕೆ ಬ್ರೇಕ್ ಬೀಳಲಿದ್ದು, ಡಿಸೆಂಬರ್ 31ರವರೆಗೆ ಬ್ರಿಟನ್ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಭಾರತ ಮಾತ್ರವಲ್ಲದೆ 30 ದೇಶಗಳು ಬ್ರಿಟನ್​ಗೆ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ. ಅಲ್ಲದೆ ನಾಳೆಯೊಳಗೆ ಬ್ರಿಟನ್​ನಿಂದ ಬರುವವರು ಕಡ್ಡಾಯವಾಗಿ RTPCR​ ಟೆಸ್ಟ್​ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ.

ಬ್ರಿಟನ್​ನಲ್ಲಿ ಹೊಸ ರೂಪಾಂತರಗೊಂಡ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಿಂದಾಗಿ ಈ ಕ್ರಮ ಜರುಗಿಸಲಾಗಿದೆ. ಅಲ್ಲದೆ ಭಾರತದಿಂದ ಕೂಡ ಯಾವುದೇ ವಿಮಾನ ಬ್ರಿಟನ್​ಗೆ ಮುಂದಿನ ಆದೇಶದವರೆಗೆ ಸಂಚರಿಸದಂತೆ ನಿರ್ಬಂಧ ವಿಧಿಸಲಾಗಿದೆ.

ಕೊರೊನಾ ಅವತಾರ್​ 2ಗೆ ಪತರಗುಟ್ಟುತ್ತಿದೆ ಬ್ರಿಟನ್​.. ಅಲ್ಲಿಯ ಪ್ರಧಾನಿ ನಮ್ಮ 72ನೇ ಗಣರಾಜ್ಯೋತ್ಸವ ಮುಖ್ಯ ಅತಿಥಿ: ಸ್ವಾಗತಾರ್ಹವೇ?