ಬ್ರಿಟನ್​ನಲ್ಲಿ ಕೊರೊನಾ ಅವತಾರ್​ 2 ಮಧ್ಯೆಯೇ.. ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾವತಾರ ಪತ್ತೆ!

| Updated By: ಸಾಧು ಶ್ರೀನಾಥ್​

Updated on: Dec 24, 2020 | 11:23 AM

ವೈರಸ್​ ಮತ್ತೊಂದು ರೂಪಾಂತರ ಪಡೆದಿದ್ದು ಈ ಹೊಸ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಅಂದ ಹಾಗೆ, ಈ ಹೊಸ ಪ್ರಭೇದ ಬ್ರಿಟನ್​ ಭೂತಕ್ಕಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.

ಬ್ರಿಟನ್​ನಲ್ಲಿ ಕೊರೊನಾ ಅವತಾರ್​ 2 ಮಧ್ಯೆಯೇ.. ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾವತಾರ ಪತ್ತೆ!
ಸಾಂದರ್ಭಿಕ ಚಿತ್ರ
Follow us on

ಇಷ್ಟು ತಿಂಗಳು ಮಾನವಕುಲವನ್ನು ಬೆಚ್ಚಿಬೀಳಿಸಿದ್ದ ಕೊರೊನಾ ಮಹಾಮಾರಿ ಇದೀಗ ಹೊಸ ಅವತಾರಗಳನ್ನು ತಾಳುತ್ತಿದೆ. ಹೆಮ್ಮಾರಿಯ ರೌದ್ರನರ್ತನದ ಸೆಕೆಂಡ್​ ಇನ್ನಿಂಗ್ಸ್​ ಈಗಷ್ಟೇ ಶುರುವಾಗಿದ್ದು ಇಂಗ್ಲೆಂಡ್​ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕೊರೊನಾದ ಮತ್ತೊಂದು ಪ್ರಭೇದ ಪತ್ತೆಯಾಗಿದೆ. ಕೊರೊನಾದ ಹೊಸ ರೂಪಾಂತರವಾದ ಈ ಬ್ರಿಟನ್​ ಭೂತ ಅತಿ ವೇಗವಾಗಿ ಸೋಂಕು ಹರಡುವ ಸಾಮರ್ಥ್ಯ ಹೊಂದಿದ್ದು ಇದೀಗ ಜಗತ್ತೇ ನಲುಗಿ ಹೋಗಿದೆ.

ಆದರೆ ಈಗ, ವೈರಸ್​ ಮತ್ತೊಂದು ರೂಪಾಂತರ ಪಡೆದಿದ್ದು ಈ ಹೊಸ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಅಂದ ಹಾಗೆ, ಈ ಹೊಸ ಪ್ರಭೇದ ಬ್ರಿಟನ್​ ಭೂತಕ್ಕಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.

ಸದ್ಯ, ಕೊರೊನಾದ ಈ ಹೊಸ ಅವತಾರ ದಕ್ಷಿಣ ಆಫ್ರಿಕಾದಿಂದ ಬೇರೆ ದೇಶಗಳಿಗೆ ಹರಡಿದೆ ಅನ್ನೋ ಮಾಹಿತಿ ಲಭ್ಯವಾಗಿದ್ದು ಇದೀಗ ಬ್ರಿಟನ್​ನಲ್ಲೂ ಸಹ ಇದು ಪತ್ತೆಯಾಗಿದೆ. ಹಾಗಾಗಿ, ಇಡೀ ವಿಶ್ವವನ್ನೇ ಆಳಿದ ಬ್ರಿಟನ್​ ಸಾಮ್ರಾಜ್ಯ ಒಂದೇ ವೈರಸ್​ನ​ ಎರಡು ರೂಪಾಂತರಗಳ ಡಬಲ್​ ದಾಳಿ ಎದುರಿಸುತ್ತಿದೆ.

ಅಂದ ಹಾಗೆ, ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆ ಕಳೆದ ವಾರವಷ್ಟೇ ಈ ಹೊಸ ರೂಪಾಂತರದ ಬಗ್ಗೆ ವರದಿಮಾಡಿದೆ. ಆಫ್ರಿಕಾ ಖಂಡದ ಈ ರಾಷ್ಟ್ರದಲ್ಲಿರುವ ಜನರ ಆನುವಂಶಿಕ ವೈವಿಧ್ಯತೆಯಲ್ಲಿ ಇದು ಹುಟ್ಟಿದ್ದು ಬ್ರಿಟನ್​ನಲ್ಲಿ ಪತ್ತೆಯಾಗಿರುವ ಪ್ರಭೇದಕ್ಕಿಂತ ಮತ್ತಷ್ಟು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಸದ್ಯ, ತಜ್ಞರ ಪ್ರಕಾರ, ಎರಡೂ ಪ್ರಭೇದಗಳು ಒಂದೇ ರೂಪಾಂತರದ ಅಂಶ (N501Y) ಹೊಂದಿದ್ದು ಈ ರೂಪಾಂತರಗಳ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯುತ್ತಿದೆ.

ಕೊರೊನಾ ಎರಡನೇ ಅಲೆ ಭೀತಿ ಬೆನ್ನಲ್ಲೇ ರಾಜ್ಯದಲ್ಲಿ ಇಳಿಮುಖವಾಯ್ತು ಕೊವಿಡ್ ಪ್ರಕರಣ