
ಬೀಜಿಂಗ್ ಸೆಪ್ಟೆಂಬರ್ 04: ಚೀನಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim Jong Un) ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆದಿತ್ತು. ಇಬ್ಬರೂ ನಾಯಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ, ಕಿಮ್ ಜಾಂಗ್ ತಂಡವು ಅವರು ಕುಳಿತಿದ್ದ ಕುರ್ಚಿಯನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಚೀನಾದಲ್ಲಿ ಈಗ ಹಲವು ದೇಶಗಳ ನಾಯಕರ ಸಭೆ ನಡೆಯುತ್ತಿದೆ. ಅವರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ನಡುವೆ ಕೂಡ ಸಭೆ ನಡೆದಿದೆ.
ಇಬ್ಬರೂ ನಾಯಕರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ವಿಭಿನ್ನ ಸಭೆಗಳಲ್ಲಿ ಭಾಗವಹಿಸುತ್ತಿರುವ ಅನೇಕ ದೃಶ್ಯಗಳು ಕಂಡುಬಂದಿವೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಕಿಮ್ ಜಾಂಗ್ ಜೊತೆಗಿರುವ ಸಿಬ್ಬಂದಿ ಅವರ ಸಭೆಯ ನಂತರ ಕೋಣೆಯಲ್ಲಿದ್ದ ವಸ್ತುಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಇದು ಸಾಮಾನ್ಯ ಶುಚಿಗೊಳಿಸುವಿಕೆ ಅಲ್ಲ, ಆದರೆ ಕಿಮ್ ಮುಟ್ಟಿದ ವಸ್ತುಗಳನ್ನು ಸ್ವಚ್ಛಗೊಳಿಸುವುದು ಸ್ಪಸ್ಟವಾಗಿದೆ.
ಮತ್ತಷ್ಟು ಓದಿ: ಝೆಲೆನ್ಸ್ಕಿ ರಷ್ಯಾಕ್ಕೆ ಬಂದರೆ ಭೇಟಿಗೆ ಸಿದ್ಧ; ಉಕ್ರೇನ್ ಸಂಘರ್ಷದ ಬಗ್ಗೆ ಪುಟಿನ್ ಹೇಳಿಕೆ
ಈ ವಿಡಿಯೋವನ್ನು ರಷ್ಯಾದ ಪತ್ರಕರ್ತ ಅಲೆಕ್ಸಾಂಡರ್ ಯುನಾಶೇವ್ ತಮ್ಮ ಟೆಲಿಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಉತ್ತರ ಕೊರಿಯಾದ ಅಧಿಕಾರಿಗಳು ಸಭೆಯ ಸ್ಥಳದಲ್ಲಿ ಕಿಮ್ ಜಾಂಗ್ ಅವರ ಕುರ್ಚಿಯ ಹಿಂಭಾಗವನ್ನು ಸ್ವಚ್ಛಗೊಳಿಸುವುದನ್ನು ಮತ್ತು ಅವರ ವಿಸ್ಕಿ ಗ್ಲಾಸ್ ಮತ್ತು ಟ್ರೇ ಅನ್ನು ತೆಗೆದುಹಾಕುವುದನ್ನು ಕಾಣಬಹುದು.
ವಿಡಿಯೋ:
🤡 All traces of Kim Jong Un were wiped away after his talks with Putin
They took the glass the dictator drank from and thoroughly wiped down the chair he had been sitting in. pic.twitter.com/eTf7f4FAZu
— NEXTA (@nexta_tv) September 3, 2025
ಇದಲ್ಲದೆ, ಮತ್ತೊಬ್ಬ ಸಿಬ್ಬಂದಿ ಕಿಮ್ ಅವರ ಕುರ್ಚಿಯ ಕಾಲುಗಳು ಮತ್ತು ಹ್ಯಾಂಡ್‌ರೆಸ್ಟ್ ಅನ್ನು ಸಹ ಸ್ವಚ್ಛಗೊಳಿಸುತ್ತಾರೆ. ಇದಲ್ಲದೆ, ಅವರ ಮುಂದೆ ಇರಿಸಲಾದ ಮೇಜಿನಿಂದ ಕೂಡ ಗುರುತುಗಳನ್ನು ಸಹ ತೆಗೆದುಹಾಕಲಾಗುತ್ತದೆ. ಅವರು ಅಲ್ಲಿ ಬಂದು ಕುಳಿತಿದ್ದಕ್ಕೆ ಯಾವುದೇ ಕುರುಹು ಇಲ್ಲದಂತೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:06 am, Thu, 4 September 25