ಕಿರ್ಗಿಸ್ತಾನ್ ಹಾಸ್ಟೆಲ್ನಲ್ಲಿ ಭಾರತ, ಪಾಕಿಸ್ತಾನಿ ವಿದ್ಯಾರ್ಥಿಗಳ ಮೇಲೆ ದಾಳಿಯಾಗಿದ್ದೇಕೆ?
ಕಿರ್ಗಿಜ್ ವಿದ್ಯಾರ್ಥಿಗಳು ಮತ್ತು ವಿದೇಶಿ ವಿದ್ಯಾರ್ಥಿಗಳಾದ ಪಾಕಿಸ್ತಾನಿಗಳು ಮತ್ತು ಈಜಿಪ್ಟಿನವರ ನಡುವಿನ ಹೋರಾಟದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಉದ್ವಿಗ್ನತೆ ಹೆಚ್ಚಾಯಿತು. ಈಗಾಗಲೇ ತಮ್ಮ ದೇಶದ ಸುರಕ್ಷತೆಯ ಬಗ್ಗೆ ಭಾರತ ಮತ್ತು ಪಾಕಿಸ್ತಾನ ದೇಶಗಳು ನಿರಂತರವಾಗಿ ಅಪ್ಡೇಟ್ ಪಡೆಯುತ್ತಿವೆ.
ಕಿರ್ಗಿಸ್ತಾನದ (Kyrgyzstan) ಬಿಷ್ಕೆಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿದೆ. ಭಾರತ (India), ಪಾಕಿಸ್ತಾನದ ವಿದ್ಯಾರ್ಥಿಗಳಿರುವ ಹಾಸ್ಟೆಲ್ಗೆ ನುಗ್ಗಿ ಹಿಂಸಾಚಾರ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ (Pakistan) ದೇಶಗಳೆರಡೂ ಸೂಚನೆಗಳನ್ನು ಹೊರಡಿಸಿದ್ದು, ಕಿರ್ಗಿಸ್ತಾನದಲ್ಲಿರುವ ತಮ್ಮ ದೇಶದ ವಿದ್ಯಾರ್ಥಿಗಳು ಕೊಠಡಿಯಿಂದ ಹೊರಗೆ ಬರಬೇಡಿ ಎಂದು ತಿಳಿಸಿವೆ. ಅಷ್ಟಕ್ಕೂ ಭಾರತೀಯ ವಿದ್ಯಾರ್ಥಿಗಳನ್ನು ಕಿರ್ಗಿಸ್ತಾನದ ಹಾಸ್ಟೆಲ್ನಲ್ಲಿ ಟಾರ್ಗೆಟ್ ಮಾಡಲು ಕಾರಣವೇನು? ಎಂಬ ಕುರಿತು ಇಲ್ಲಿದೆ ಮಾಹಿತಿ.
ಈ ಹಿಂಸಾತ್ಮಕ ದಾಳಿಯು ವಿದೇಶಿಗರಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ಕಿರ್ಗಿಸ್ತಾನದ ಪೊಲೀಸರು ಹೇಳಿದ್ದಾರೆ. ಆದರೆ, ಅವರು ಯಾವ ದೇಶದವರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶದವರನ್ನು ಮಾತ್ರವಲ್ಲದೆ ನಗರದಲ್ಲಿ ಸ್ಥಳೀಯರನ್ನು ಕೂಡ ಥಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Monitoring the welfare of Indian students in Bishkek. Situation is reportedly calm now. Strongly advise students to stay in regular touch with the Embassy. https://t.co/xjwjFotfeR
— Dr. S. Jaishankar (Modi Ka Parivar) (@DrSJaishankar) May 18, 2024
ಕಿರ್ಗಿಸ್ ಸರ್ಕಾರವು ನಮ್ಮ ದೇಶದ ವಿದ್ಯಾರ್ಥಿಗಳ ಸುರಕ್ಷತೆಗೆ ಗಮನ ನೀಡಬೇಕು. ನಾವು ಕಿರ್ಗಿಸ್ತಾನದಲ್ಲಿರುವ ನಮ್ಮ ದೇಶದ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದೇವೆ. ಅವರಿಗೆ ರೂಮಿನ ಒಳಗೆ ಇರುವಂತೆ ಸೂಚಿಸಲಾಗಿದೆ. ಏನಾದರೂ ಸಮಸ್ಯೆ ಉಂಟಾದರೆ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚಿಸಿದ್ದೇವೆ ಎಂದು ಭಾರತದ ಕಾನ್ಸುಲೇಟ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: ಪತ್ನಿಯನ್ನು ಕೊಂದು, ಮೃತದೇಹದೊಂದಿಗೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡ ಪತಿ
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಕಿರ್ಗಿಸ್ತಾನ್ ರಾಜಧಾನಿಯಲ್ಲಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಲು ಸಲಹೆ ನೀಡಿದ್ದಾರೆ.
ಬಿಷ್ಕೆಕ್‌ನಲ್ಲಿ ಏನಾಗುತ್ತಿದೆ?:
ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಗಳ ಮೇಲೆ ಹಲವಾರು ಬಾರಿ ಹಿಂಸಾಚಾರದ ಘಟನೆಗಳ ನಂತರ ಕಿರ್ಗಿಸ್ತಾನ್ ವಿದ್ಯಾರ್ಥಿಗಳಿಗೆ ಪಾಕಿಸ್ತಾನ ಇಂದು ಎಚ್ಚರಿಕೆ ನೀಡಿದೆ.
ಹಿಂಸಾಚಾರದಿಂದ ಸಂತ್ರಸ್ತರಾದವರಿಗೆ ತುರ್ತು ಹಾಟ್‌ಲೈನ್‌ಗಳನ್ನು ಸ್ಥಾಪಿಸಿರುವುದಾಗಿ ಪಾಕಿಸ್ತಾನ ಹೇಳಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆಯಲ್ಲಿ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಿ ನಾಗರಿಕರು ತಕ್ಷಣವೇ ಆ ದೇಶವನ್ನು ತೊರೆಯಬಹುದು ಎಂದು ಹೇಳಿದ್ದಾರೆ.
ಇದುವರೆಗೂ 3 ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ಕೊಲ್ಲಲಾಗಿದೆ ಮತ್ತು ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ಕಿರ್ಗಿಸ್ತಾನ ಸರ್ಕಾರ ಅಂತಹ ಯಾವುದೇ ಘಟನೆಗಳು ನಡೆದಿರುವುದನ್ನು ನಿರಾಕರಿಸಿದೆ. “ಪಾಕಿಸ್ತಾನಿ ವಿದ್ಯಾರ್ಥಿಗಳ ಸಾವು ಮತ್ತು ಅತ್ಯಾಚಾರದ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಹೊರತಾಗಿ ಇದುವರೆಗೆ ನಮಗೆ ಯಾವುದೇ ದೃಢೀಕೃತ ವರದಿ ಬಂದಿಲ್ಲ” ಎಂದು ಪಾಕಿಸ್ತಾನ್ ಕಾನ್ಸುಲೇಟ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Crime News: ಜೈಲಿನಲ್ಲಿ 14 ವರ್ಷದ ಬಾಲಕಿ, ಆತನ ಗಂಡ ಸಾವು; ಕೋಪದಿಂದ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಜನ
ಬಿಷ್ಕೆಕ್‌ನಲ್ಲಿ ಹಿಂಸಾಚಾರ ಉಂಟಾಗಲು ಕಾರಣವೇನು?:
ಕಿರ್ಗಿಸ್ ರಾಜಧಾನಿ ಬಿಷ್ಕೆಕ್‌ನಲ್ಲಿ ಸ್ಥಳೀಯರು ಮತ್ತು ವಿದೇಶಿ ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿತ್ತು. ಸ್ಥಳೀಯ ಮಾಧ್ಯಮಗಳ ಪ್ರಕಾರ, ಕಿರ್ಗಿಜ್ ವಿದ್ಯಾರ್ಥಿಗಳು ಮತ್ತು ವಿದೇಶಿ ವಿದ್ಯಾರ್ಥಿಗಳಾದ ಪಾಕಿಸ್ತಾನಿಗಳು ಮತ್ತು ಈಜಿಪ್ಟಿನವರ ನಡುವಿನ ಹೋರಾಟದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಉದ್ವಿಗ್ನತೆ ಹೆಚ್ಚಾಯಿತು. ಹಿಂಸಾತ್ಮಕ ಗುಂಪುಗಳು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇರುವ ವೈದ್ಯಕೀಯ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳನ್ನು ಗುರಿಯಾಗಿಸಲು ಪ್ರಾರಂಭಿಸಿದವು.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕಿರ್ಗಿಸ್ತಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 15,000 ಎಂದು ಅಂದಾಜಿಸಲಾಗಿದೆ. ಅವರಲ್ಲಿ ಎಷ್ಟು ಮಂದಿ ಬಿಷ್ಕೆಕ್‌ನಲ್ಲಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ರಷ್ಯಾ, ಉಕ್ರೇನ್ ಮತ್ತು ಬಾಂಗ್ಲಾದೇಶ MBBS ಅನ್ನು ಮುಂದುವರಿಸಲು ಬಯಸುವ ಭಾರತೀಯ ವಿದ್ಯಾರ್ಥಿಗಳಲ್ಲಿ ಜನಪ್ರಿಯ ತಾಣವಾಗಿದೆ.
ಕಿರ್ಗಿಸ್ತಾನ್ ವಿಶ್ವವಿದ್ಯಾನಿಲಯಗಳಲ್ಲಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಗುಣಮಟ್ಟವು ಭಾರತೀಯ ವೈದ್ಯಕೀಯ ಆಕಾಂಕ್ಷಿಗಳು ಮತ್ತು ಇತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ, ಈ ದೇಶದ ಕಾಲೇಜುಗಳು ಒದಗಿಸುವ ಪದವಿಗಳು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿವೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ನಿಂದ ಕೂಡ ಗುರುತಿಸಲ್ಪಟ್ಟಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Sat, 18 May 24