ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಜಪಾನ್​ ಸರ್ಕಾರ ನೀಡೋ ಶಿಕ್ಷೆ ಏನು ಗೊತ್ತಾ?

|

Updated on: Mar 17, 2021 | 6:07 PM

ಬಸ್​ ತಪ್ಪಿ ಹೋಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರಿ ನೌಕರರು ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಡುತ್ತಿದ್ದರು.

ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಜಪಾನ್​ ಸರ್ಕಾರ ನೀಡೋ ಶಿಕ್ಷೆ ಏನು ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಭಾರತದ ಸರ್ಕಾರಿ ಕಚೇರಿಗಳಲ್ಲಿ ನೌಕರರು ಹಾಯಾಗಿರುತ್ತಾರೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಕಚೇರಿಯಿಂದ ತಡವಾಗಿ ಹೊರಡುವ ಉದಾಹರಣೆ ತುಂಬಾನೇ ಕಡಿಮೆ. ಶಿಫ್ಟ್​ 6 ಗಂಟೆಗೆ ಪೂರ್ಣಗೊಳ್ಳುತ್ತದೆ ಎಂದರೆ ಅನೇಕರು 5:45ಕ್ಕೆ ಕಚೇರಿಯಿಂದ ಹೊರಟಿರುತ್ತಾರೆ. ಆದರೆ, ಬೇರೆ ದೇಶದಲ್ಲಿ ಈ ರೀತಿ ಇಲ್ಲ. ಜಪಾನ್​ನಲ್ಲಿ ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಸಿಬ್ಬಂದಿಗೆ ಶಿಕ್ಷೆ ಇದೆ ಎಂದರೆ ನೀವು ನಂಬಲೇ ಬೇಕು!

ಹೌದು, ಜಪಾನ್​ನಲ್ಲಿ ಇತ್ತೀಚೆಗೆ ಹೀಗೊಂದು ವಿಚಾರ ಬೆಳಕಿಗೆ ಬಂದಿದೆ. ಶಿಕ್ಷೆ ರೂಪದಲ್ಲಿ ಇವರ ಅರ್ಧ ದಿನದ ಸ್ಯಾಲರಿ ಕಟ್​ ಮಾಡಲಾಗಿದೆ. 2019 ಮೇ ಇಂದ ಜನವರಿ 2021ರವರೆಗೆ ಏಳು ಸಿಬ್ಬಂದಿ 316 ಬಾರಿ 5.15ಕ್ಕೆ ತೆರಳುವ ಬದಲು 5.13ಕ್ಕೆ ತೆರಳಿದ್ದಾರೆ. ಅಂದರೆ, ಎರಡು ನಿಮಿಷ ಕಚೇರಿಯಿಂದ ಮೊದಲು ಹೊರಟಂತಾಗಿದೆ. ಇದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಅಷ್ಟೇ ಅಲ್ಲ ಸ್ಯಾಲರಿ ಕೂಡ ಕಟ್​ ಮಾಡಿದೆ.

ನಮಗೆ ಸಂಜೆ 5.17ಕ್ಕೆ ಬಸ್​ ಇದೆ. ಈ ಬಸ್​ ತಪ್ಪಿದ ನಂತರ ಮತ್ತೊಂದು ಬಸ್​ ಇರೋದು 5.47ಕ್ಕೆ. ಈ ಕಾರಣಕ್ಕೆ ನಾವು ಎರಡು ನಿಮಿಷ ಮೊದಲು ತೆರಳುತ್ತಿದ್ದೆವು. ಆದರೆ, ಸರ್ಕಾರ ಇದನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂದು ತಿಳಿದಿರಿಲಿಲ್ಲ ಎಂದಿದ್ದಾರೆ ಸರ್ಕಾರಿ ನೌಕರರು.

ಇನ್ನು, ಸರ್ಕಾರಿ ನೌಕರರು ಇದಕ್ಕೆ ಪೂರ್ಣ ಪ್ರಮಾಣದ ಸ್ಯಾಲರಿಯನ್ನು ಹಾಕುವಂತೆ ಮನವಿ ಮಾಡಿದ್ದಾರೆ. ಆದರೆ, ಇದನ್ನು ಸರ್ಕಾರ ನಿರಾಕರಿಸಿದೆ. ಸರಿಯಾದ ಸಮಯಕ್ಕೆ ಬಂದು ಸರಿಯಾದ ಸಮಯಕ್ಕೆ ತೆರಳಿದರೆ ಮಾತ್ರ ಸ್ಯಾಲರಿ ನೀಡುತ್ತೇವೆ ಎಂದು ಹೇಳಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ವೇತನ ಪಡೆಯುವ ವರ್ಗಕ್ಕೆ ಹೊರೆಯಾದ ವೇಜ್​ ಕೋಡ್​-ಬಜೆಟ್​; ಭವಿಷ್ಯ ನಿಧಿಯೇ ತೊಡಕಾಗ್ತಿದೆ..ಟೇಕ್​ ಹೋಂ ಸ್ಯಾಲರಿ ಕಡಿಮೆ ಆಗ್ತಿದೆ !