PM Modi France Visit: ಲಾಂಗ್ ಲಿವ್ ಫ್ರೆಂಡ್ಶಿಪ್, ಮೋದಿ ಜತೆಗೆ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್ ಸೆಲ್ಫಿ

|

Updated on: Jul 15, 2023 | 10:25 AM

ಅಬುಧಾಬಿಗೆ ತೆರಲುವ ಮುನ್ನ ಪ್ರಧಾನಿ ಮೋದಿ ಜತೆಗೆ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

PM Modi France Visit: ಲಾಂಗ್ ಲಿವ್ ಫ್ರೆಂಡ್ಶಿಪ್, ಮೋದಿ ಜತೆಗೆ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್ ಸೆಲ್ಫಿ
ಪ್ರಧಾನಿ ಮೋದಿ ಜತೆಗೆ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸೆಲ್ಫಿ
Follow us on

ದೆಹಲಿ ಜುಲೈ 15: ಪ್ರಧಾನಿ ಮೋದಿ ಅವರು ಇಂದು ಫ್ರಾನ್ಸ್​ ಪ್ರವಾಸ ಮುಗಿಸಿ, ಯುಎಇಗೆ ಭೇಟಿ ನೀಡಲಿದ್ದಾರೆ. ಅಬುಧಾಬಿಗೆ ತೆರಲುವ ಮುನ್ನ ಪ್ರಧಾನಿ ಮೋದಿ ಜತೆಗೆ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರು ಫ್ರೆಂಚ್, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಬಾಂಧವ್ಯದ ಬಗ್ಗೆ ಟ್ವಿಟರ್‌ನಲ್ಲಿ ಫೋಟೋ ಜತೆಗೆ ಬರೆದುಕೊಂಡಿದ್ದಾರೆ.

ಮ್ಯಾಕ್ರನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮೋದಿ ಫಾರೆವರ್ ಫ್ರೆಂಡ್ಸ್ ಎಂದು ಹೇಳಿದ್ದಾರೆ. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮೋದಿ ಅವರು ಗ್ರೀನ್ ಹೈಡ್ರೋಜನ್, ನವೀಕರಿಸಬಹುದಾದ ಇಂಧನ, AI ಮತ್ತು ಅರೆವಾಹಕಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಜತೆಯಾಗಿ ಕೆಲಸ ಮಾಡುವ ಉತ್ಸುಕತೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಪ್ರಧಾನಿ ಮೋದಿ ಅವರು ಫ್ರಾನ್ಸ್​ ಭೇಟಿಯ ಬಗ್ಗೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು “ನನ್ನ ಸ್ನೇಹಿತ, ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗಿನ ಮಾತುಕತೆಗಳು ಬಹಳ ಉತ್ಪಾದಕವಾಗಿತ್ತು. ನಾವು ಭಾರತ-ಫ್ರಾನ್ಸ್ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದೇವೆ . ಅದಕ್ಕಾಗಿ ಹಸಿರು ಹೈಡ್ರೋಜನ್‌ನಂತಹ ಭವಿಷ್ಯದ ವಲಯಗಳಲ್ಲಿ ಸಹಕಾರವನ್ನು ಹೊಂದಲು ವಿಶೇಷವಾಗಿ ಉತ್ಸುಕನಾಗಿದ್ದೇನೆ. ನವೀಕರಿಸಬಹುದಾದ ಇಂಧನ, AI, ಅರೆವಾಹಕಗಳು ಇನ್ನಷ್ಟು ಕೆಲಸಗಳನ್ನು ಒಟ್ಟಾಗಿ ಮಾಡಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: PM Modi UAE Visit: ಫ್ರಾನ್ಸ್ ಪ್ರವಾಸ ಮುಗಿಸಿ ಯುಎಇಗೆ ತೆರಳಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಎರಡು ದಿನಗಳ ಫ್ರಾನ್ಸ್​ ಪ್ರವಾಸದಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ, ಅಲ್ಲಿನ ಸಿಇಒಗಳ ಜತೆಗೆ ಹಾಗೂ ರಾಜತಾಂತ್ರಿಕ ವಿಚಾರಗಳ ಬಗ್ಗೆಯು ಸಭೆಯನ್ನು ನಡೆಸಿದ್ದಾರೆ, ಹಲವು ಒಪ್ಪಂದಗಳಿಗೂ ಸಹಿ ಹಾಕಿದ್ದು, ಫ್ರಾನ್ಸ್​​ ರಾಷ್ಟ್ರೀಯ ದಿನಚಾರಣೆಯಲ್ಲೂ ಭಾಗವಹಿಸಿದ್ದಾರೆ, ಇದರ ಜತೆಗೆ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್​​ನ ಉನ್ನತ ನಾಗರಿಕ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿತ್ತು. ಇದೀಗ ಪ್ರಧಾನಿ ಫ್ರಾನ್ಸ್​ ಪ್ರವಾಸ ಮುಗಿಸಿ UAE ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ