ಚಿಲಿಯ ಮಧ್ಯ ಕರಾವಳಿ ಪ್ರದೇಶದಲ್ಲಿ 6.2 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. NCS ಪ್ರಕಾರ, ಭೂಕಂಪದ ಕೇಂದ್ರಬಿಂದು ಸುಮಾರು 10 ಕಿ.ಮೀ ಆಳದಲ್ಲಿದೆ. ಯಾವುದೇ ಸಾವು ನೋವುಗಳು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಮಾರ್ಚ್ 22 ರಂದು ಕೂಡ ಭೂಕಂಪ ಸಂಭವಿಸಿತ್ತು, ರಿಕ್ಟರ್ ಮಾಪಕದಲ್ಲಿ 6.3 ರ ತೀವ್ರತೆಯ ದಾಖಲಾಗಿದ್ದು, ಚಿಲಿಯಿಂದ 519 ಕಿಮೀ ದೂರದಲ್ಲಿ ಅದರ ಕೇಂದ್ರಬಿಂದುವಿತ್ತು ಎಂದು ಹೇಳಲಾಗಿದೆ. ಚಿಲಿಯಲ್ಲಿ 2022ರಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿತ್ತು. 31.8222 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 71.3664 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ 496.06 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ