Ecuador Earthquake: ಈಕ್ವೆಡಾರ್​ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ, 14 ಮಂದಿ ಸಾವು

ದಕ್ಷಿಣ ಅಮೆರಿಕದ ಈಕ್ವೆಡಾರ್​ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 14 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭೂಕಂಪದ ತೀವ್ರತೆಯಿಂದಾಗಿ ಹಲವು ಕಟ್ಟಡಗಳು ಹಾನಿಗೀಡಾಗಿವೆ, ಜನರು ಮನೆ ಬಿಟ್ಟು ಬೀದಿಗೆ ಬಂದಿದ್ದಾರೆ. ಉತ್ತರ ಪೆರುವಿನಲ್ಲೂ ಭೂಕಂಪದ ಅನುಭವವಾಗಿದೆ.

Ecuador Earthquake: ಈಕ್ವೆಡಾರ್​ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ, 14 ಮಂದಿ ಸಾವು
ಈಕ್ವೆಡಾರ್ ಭೂಕಂಪ
Image Credit source: Reuters

Updated on: Mar 19, 2023 | 7:56 AM

ದಕ್ಷಿಣ ಅಮೆರಿಕದ ಈಕ್ವೆಡಾರ್​ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 14 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭೂಕಂಪದ ತೀವ್ರತೆಯಿಂದಾಗಿ ಹಲವು ಕಟ್ಟಡಗಳು ಹಾನಿಗೀಡಾಗಿವೆ, ಜನರು ಮನೆ ಬಿಟ್ಟು ಬೀದಿಗೆ ಬಂದಿದ್ದಾರೆ. ಉತ್ತರ ಪೆರುವಿನಲ್ಲೂ ಭೂಕಂಪದ ಅನುಭವವಾಗಿದೆ.

ದೇಶದ ಕರಾವಳಿ ಗುವಾಯಾಸ್ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈಕ್ವೆಡಾರ್​ನ ಎರಡನೇ ದೊಡ್ಡ ನಗರವಾದ ಗುವಾಕ್ವಿಲ್​ನ ದಕ್ಷಿಣಕ್ಕೆ ಸುಮಾರು 50 ಮೈಲಿಗಳ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ.

ಉತ್ತರ ಪೆರುವಿನಲ್ಲೂ ಭೂಕಂಪದ ಅನುಭವವಾಗಿದ್ದು, ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಟ್ವೀಟ್ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಎಲ್ ಒರೊದಲ್ಲಿ 11 ಮಂದಿ ಮೃತಪಟ್ಟರೆ, ಅಜುವಾಯ್​ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, ಅಜುವಾಯ್​ನಲ್ಲಿ ಕಾರಿನ ಮೇಲೆ ಗೋಡೆ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ, ಭದ್ರತಾ ಕ್ಯಾಮರಾ ಟವರ್ ಬಿದ್ದು ಎಲ್ ಒರೊದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: China Earthquake: ಚೀನಾದಲ್ಲಿ 4.7 ತೀವ್ರತೆಯ ಭೂಕಂಪ

ಭೂಕಂಪದಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಸಾವುನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಭೂಕಂಪವು ದಕ್ಷಿಣ ಈಕ್ವೆಡಾರ್​ನಲ್ಲಿರುವ ಹಲವು ಕಟ್ಟಡಗಳಿಗೆ ಹಾನಿಯುಂಟು ಮಾಡಿದೆ, ಸುನಾಮಿಯ ಯಾವುದೇ ಲಕ್ಷಣಗಳಿಲ್ಲ.