
ಇಸ್ರೇಲ್(Israel) ಮತ್ತು ಇರಾನ್(Iran) ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಇರಾನ್ ತನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ಗಳ (IRGC) ಹೊಸ ಗುಪ್ತಚರ ಮುಖ್ಯಸ್ಥರನ್ನು ನೇಮಿಸಿದೆ. ಈ ಹುದ್ದೆಗೆ ಬ್ರಿಗೇಡಿಯರ್ ಜನರಲ್ ಮಜೀದ್ ಖಾದಾಮಿ ಅವರನ್ನು ನೇಮಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಐಆರ್‌ಜಿಸಿಯ ಕಮಾಂಡರ್ ಮೇಜರ್ ಜನರಲ್ ಮೊಹಮ್ಮದ್ ಪಕ್ಪುರ್ ಅವರು ಮಜೀದ್ ಖಾದ್ಮಿ ಅವರನ್ನು ನೇಮಕ ಮಾಡಿದ್ದಾರೆ.
ಈ ಹುದ್ದೆಯಲ್ಲಿದ್ದ ಹಿಂದಿನ ಅಧಿಕಾರಿ ಮೊಹಮ್ಮದ್ ಕಾಜ್ಮಿ ಇಸ್ರೇಲಿ ವಾಯುದಾಳಿಯ ಸಮಯದಲ್ಲಿ ಸಾವನ್ನಪ್ಪಿದ್ದರು. ಹೀಗಾಗಿ ಹೊಸ ನೇಮಕಾತಿ ನಡೆದಿದೆ. ಇಸ್ರೇಲ್ ನಡೆಸಿದ ಈ ದಾಳಿಯಲ್ಲಿ ಕಾಜ್ಮಿ ಜೊತೆಗೆ, ಇತರ ಇಬ್ಬರು ಉನ್ನತ ಅಧಿಕಾರಿಗಳಾದ ಹಸನ್ ಮೊಹಕ್ ಮತ್ತು ಮೊಹ್ಸಿನ್ ಬಾಘೇರಿ ಕೂಡ ಸಾವನ್ನಪ್ಪಿದ್ದರು.
ಕಳೆದ ವಾರ ಇಸ್ರೇಲ್ ಇರಾನ್‌ನ ಪರಮಾಣು ಮತ್ತು ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು.ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಹೀಗಾಗಿ ಇದನ್ನು ತಡೆಯಲು ಇಸ್ರೇಲ್ ಹಾಗೂ ಅಮೆರಿಕ ಟೊಂಕಕಟ್ಟಿ ನಿಂತಿದೆ. ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದೆ. ಇರಾನ್ ಗುರುವಾರ ಇಸ್ರೇಲ್‌ನ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.
ಮತ್ತಷ್ಟು ಓದಿ:
ಅಮೆರಿಕ ಎಚ್ಚರಿಕೆಗೆ ಸೊಪ್ಪು ಹಾಕದೆ ಇಸ್ರೇಲ್ ಮೇಲೆ ದಾಳಿಯನ್ನು ತೀವ್ರಗೊಳಿಸಿದ ಇರಾನ್
ಎರಡನೇ ವಾರಕ್ಕೆ ಕಾಲಿಟ್ಟ ಇಸ್ರೇಲ್-ಇರಾನ್ ಸಂಘರ್ಷ
ಇರಾನ್ ಹಾರಿಸಿದ ಕ್ಷಿಪಣಿಯು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿರುವ ಮುಖ್ಯ ಆಸ್ಪತ್ರೆಯಾದ ಸೊರೊಕಾ ವೈದ್ಯಕೀಯ ಕೇಂದ್ರವನ್ನು ನೇರವಾಗಿ ಗುರಿಯಾಗಿಸಿಕೊಂಡಿದ್ದು, ದಾಳಿಯಲ್ಲಿ ಆಸ್ಪತ್ರೆಯ ಹಲವು ಭಾಗಗಳಿಗೆ ಭಾರೀ ಹಾನಿಯಾಗಿದೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಇರಾನ್ ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್ ಮೇಲೆ ಕ್ಷಿಪಣಿಗಳನ್ನು ಹಾರಿಸಿ ನಾಶಮಾಡಿದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆರಳಿದ್ದು, ಇದಕ್ಕೆ ಪ್ರತ್ಯುತ್ತರ ನೀಡುವ ಶಪಥ ಮಾಡಿದ್ದಾರೆ.
ಹೈಪರ್‌ಸಾನಿಕ್ ಕ್ಷಿಪಣಿಗಳು ಶಬ್ಧಕ್ಕಿಂತ ಐದು ಪಟ್ಟು ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅದರ ಜಾಡನ್ನು ಪತ್ತೆಹಚ್ಚಿ, ತಡೆಯುವುದು ಕಷ್ಟಕರವಾಗಿದೆ. ಇದರ ಜೊತೆಗೆ ಇರಾನ್ ಡ್ರೋನ್‌ಗಳ ಹಿಂಡನ್ನೇ ರವಾನಿಸಿದೆ. ಅವುಗಳ ಪೈಕಿ ಎರಡನ್ನು ಡೆಡ್‌ಸೀ ಪ್ರದೇಶದ ಸಮೀಪ ಪತನಗೊಳಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಇರಾನ್ ಮಂಗಳವಾರ ತಡರಾತ್ರಿ ಇಸ್ರೇಲ್ ಮೇಲೆ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆಯೆಂದು ಇಸ್ಲಾಮಿಕ್ ರಿಪಬ್ಲಿಕನ್ ಗಾರ್ಡ್ಸ್ ಸೇನೆಯ ಮೂಲಗಳು ತಿಳಿಸಿವೆ.ತನ್ನ ಮಿತ್ರ ರಾಷ್ಟ್ರವಾದ ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ದಾಳಿಗಳ ಹಿಂದೆ ತನ್ನ ಯಾವುದೇ ಪಾತ್ರವಿಲ್ಲವೆಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ದಿನದಿಂದ ದಿನಕ್ಕೆ ತನ್ನ ಸಹನೆ ಕ್ಷೀಣಿಸುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:21 am, Fri, 20 June 25