ಅಮೆರಿಕದಲ್ಲಿ ಹಂದಿ ಹೃದಯ ಕಸಿಗೊಳಗಾಗಿದ್ದ ವ್ಯಕ್ತಿ ಶಸ್ತ್ರಚಿಕಿತ್ಸೆ ನಡೆದು 2 ತಿಂಗಳ ನಂತರ ಸಾವು

ಅಮೆರಿಕ ವೈದ್ಯರು 2022ರ ಜನವರಿ 11 ರಂದು ವ್ಯಕ್ತಿಗೆ ಹಂದಿ ಹೃದಯ ಕಸಿ ಮಾಡಿದ್ದರು. ಆದರೆ ಹೃದಯ ಕಸಿ ಅಳವಡಿಕೆ ಯಶಸ್ವಿಯಾಗಿದ್ದರೂ ಡೇವಿಡ್ ಸಾವನ್ನಪ್ಪಿದ್ದಾರೆ. ಹೃದಯ ಕಸಿ ಆದ ಬಳಿಕ ಆರೋಗ್ಯ ಹದಗೆಡುತ್ತಾ ಬಂದಿತ್ತು ಎಂದು ಅಮೆರಿಕದ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವಿವಿ ಪ್ರಕಟಣೆ ಹೊರಡಿಸಿದೆ.

ಅಮೆರಿಕದಲ್ಲಿ ಹಂದಿ ಹೃದಯ ಕಸಿಗೊಳಗಾಗಿದ್ದ ವ್ಯಕ್ತಿ ಶಸ್ತ್ರಚಿಕಿತ್ಸೆ ನಡೆದು 2 ತಿಂಗಳ ನಂತರ ಸಾವು
ಡೇವಿಡ್ ಬೆನೆಟ್(58)
Updated By: preethi shettigar

Updated on: Mar 09, 2022 | 11:01 PM

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಹೃದಯ (Pig heart) ಕಸಿಗೊಳಗಾಗಿದ್ದ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ಹಂದಿ ಹೃದಯ ಕಸಿಗೊಳಗಾಗಿದ್ದ ಡೇವಿಡ್ ಬೆನೆಟ್(58) ಶಸ್ತ್ರಚಿಕಿತ್ಸೆ (Surgery) ನಡೆದು 2 ತಿಂಗಳ ನಂತರ ಮೃತಪಟ್ಟಿದ್ದಾರೆ. ಅಮೆರಿಕ ವೈದ್ಯರು(Doctor) 2022ರ ಜನವರಿ 11 ರಂದು ವ್ಯಕ್ತಿಗೆ ಹಂದಿ ಹೃದಯ ಕಸಿ ಮಾಡಿದ್ದರು. ಆದರೆ ಹೃದಯ ಕಸಿ ಅಳವಡಿಕೆ ಯಶಸ್ವಿಯಾಗಿದ್ದರೂ ಡೇವಿಡ್ ಸಾವನ್ನಪ್ಪಿದ್ದಾರೆ. ಹೃದಯ ಕಸಿ ಆದ ಬಳಿಕ ಆರೋಗ್ಯ ಹದಗೆಡುತ್ತಾ ಬಂದಿತ್ತು ಎಂದು ಅಮೆರಿಕದ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವಿವಿ ಪ್ರಕಟಣೆ ಹೊರಡಿಸಿದೆ.

ತಳೀಯವಾಗಿ ಮಾರ್ಪಾಡಿಸಲಾದ ಹಂದಿಯೊಂದರ ಹೃದಯವನ್ನು 58 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಯುಎಸ್​ನ ಶಸ್ತ್ರಚಿಕಿತ್ಸಕರು ಇತಿಹಾಸ ಸೃಷ್ಟಿಸಿದ್ದರು. ಇದು ವೈದ್ಯಕೀಯ ಲೋಕದಲ್ಲಿಯೇ ಪ್ರಥಮವಾಗಿದೆ. ಹಾಗೇ, ಮುಂದೊಂದು ದಿನ ಅಂಗಾಂಗ ದಾನ ಕೊರತೆಯ ಗಂಭೀರತೆಯನ್ನು ಕಡಿಮೆ ಮಾಡಬಲ್ಲದು ಎಂಬ ಆಶಯವನ್ನೂ ಮೂಡಿಸಿತ್ತು. ಅಂದಹಾಗೆ, ಈ ಐತಿಹಾಸಿಕ ವೈದ್ಯಕೀಯ ಪ್ರಕ್ರಿಯೆ ನಡೆದಿದ್ದು ಯುಎಸ್​ನ ಮೇರಿಲ್ಯಾಂಡ್​ ಯೂನಿವರ್ಸಿಟಿಯ ಮೆಡಿಕಲ್ ಸ್ಕೂಲ್​​ನಲ್ಲಿ ಆದರೆ ಈಗ ಶಸ್ತ್ರಚಿಕಿತ್ಸೆ ನಡೆದ ಎರಡು ತಿಂಗಳ ನಂತರ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ವಿಷಯ ಹೊರಬಿದ್ದಿದೆ.

ಮೇರಿಲ್ಯಾಂಡ್​ ನಿವಾಸಿ ಬೆನೆಟ್​ ಹೃದಯ ಮತ್ತು ಶ್ವಾಸಕೋಶ ಬೈಪಾಸ್​​ ಕಾರಣದಿಂದ ಹಲವು ತಿಂಗಳುಗಳಿಂದಲೂ ಹಾಸಿಗೆಯಲ್ಲೇ ಮಲಗಿದ್ದರು. ಇವರ ಆರೋಗ್ಯ ತುಂಬ ಕ್ಷೀಣವಾಗಿದ್ದ ಕಾರಣ, ಮತ್ತೊಂದು ಮನುಷ್ಯ ಹೃದಯವನ್ನೇ ಕಸಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತಳಿ ಮಾರ್ಪಾಡು ಮಾಡಿದ ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು. ಆದರೆ 2 ತಿಂಗಳಲ್ಲಿಯೇ ಡೇವಿಡ್​ ಬೆನೆಟ್ ಮೃತಪಟ್ಟಿದ್ದಾರೆ.

ಇದು ಮಾಡು ಇಲ್ಲವೇ ಮಡಿ ಎಂಬಂಥ ಸರ್ಜರಿಯಾಗಿತ್ತು. ಕತ್ತಲಲ್ಲಿ ಹೊಡೆವ ಗುಂಡು. ತಾಗಿದರೆ ತಾಗಿತು-ಇಲ್ಲದಿದ್ದರೆ ಇಲ್ಲವೆಂಬಂಥ ಕಸಿಯಾಗಿತ್ತು. ಆದರೆ ನಾನು ಬದುಕಲು ಇರುವ ಕೊನೇ ಅವಕಾಶವೂ ಆಗಿತ್ತು. ಹಾಗಾಗಿ ಒಪ್ಪಿಕೊಂಡೆ ಎಂದು ಡೇವಿಡ್​ ಬೆನೆಟ್ ಸರ್ಜರಿ ಬಳಿಕ ಹೇಳಿದ್ದರು.

ಇದನ್ನೂ ಓದಿ:

ಶಸ್ತ್ರಚಿಕಿತ್ಸೆ ಮಾಡದೇ ರೋಗಿಯನ್ನು ವೈದ್ಯರು ಸತಾಯಿಸುತ್ತಿರುವ ಆರೋಪ; ಜಿಮ್ಸ್ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ

ಹುಚ್ಚು ನಾಯಿ ಕಚ್ಚಿರುವ ವಿಚಾರ ಮುಚ್ಚಿಟ್ಟ ಅಜ್ಜಿ -ಮೊಮ್ಮಗಳು ಬಲಿ, ಮದುವೆ ಮನೆಯಲ್ಲಿ ಚಿಕನ್ ಪೀಸ್ ಗಾಗಿ ಜಗಳ -ಒಬ್ಬನ ಸಾವು

Published On - 10:52 pm, Wed, 9 March 22