Video: ಮರಿಯುಪೋಲ್ನಲ್ಲಿ ರಷ್ಯಾ ಸೇನೆಯ ದೌರ್ಜನ್ಯ; ಹೆರಿಗೆ ಆಸ್ಪತ್ರೆ ಮೇಲೆ ಏರ್ಸ್ಟ್ರೈಕ್, ಅವಶೇಷಗಳಡಿಯಲ್ಲಿ ಜನರು
ಆಸ್ಪತ್ರೆಯ ಒಳಗೆಲ್ಲ ಸಂಪೂರ್ಣವಾಗಿ ಧ್ವಂಸಗೊಂಡಿದ್ದನ್ನು ಕಾಣಬಹುದು. ಕಿಟಕಿಗಳೆಲ್ಲ ಮುರಿದು ಬಿದ್ದಿವೆ. ಗೋಡೆಗಳೂ ಒಡೆದು ಹೋಗಿದೆ. ಇದು ರಷ್ಯಾ ಸೇನೆಯ ನೇರ ದಾಳಿ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಕೀವ್: ಉಕ್ರೇನ್ನಲ್ಲಿ ರಷ್ಯಾ (Russia Attack On Ukraine) ನಡೆಸುತ್ತಿರುವ ಆಕ್ರಮಣ ಕೇವಲ ಸೈನ್ಯವನ್ನು ಗುರಿಯಾಗಿಸಿಕೊಂಡು ಅಲ್ಲ. ಅಲ್ಲಿನ ಅದೆಷ್ಟೋ ವಸತಿ ಕಟ್ಟಡಗಳು, ಆಸ್ಪತ್ರೆ, ಶಾಲೆಗಳೆಲ್ಲ ರಷ್ಯಾ ಬಾಂಬ್, ಕ್ಷಿಪಣಿ ದಾಳಿಗೆ ಧ್ವಂಸಗೊಂಡಿವೆ. ಬುಧವಾರ ರಷ್ಯಾ ಸೇನೆ ಮರಿಯುಪೋಲ್ನಲ್ಲಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಮೇಲೆ ಏರ್ಸ್ಟ್ರೈಕ್ ನಡೆಸಿದ್ದು, ಇದರಲ್ಲಿ ಸುಮಾರು 17 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯಾದ ಪಾವ್ಲೊ ಕೈರಿಲೆಂಕೊ ಹೇಳಿದ್ದಾರೆ. ಈ ವಿಡಿಯೋವನ್ನು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮರಿಯುಪೋಲ್ನ ಹೆರಿಗೆ ಆಸ್ಪತ್ರೆಯಲ್ಲಿ ರಷ್ಯಾ ನಡೆಸಿದ ಏರ್ಸ್ಟ್ರೈಕ್ ಇದು. ಇಲ್ಲಿ ಮಕ್ಕಳು ಸೇರಿ ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಇದು ದೌರ್ಜನ್ಯ. ಈ ಜಗತ್ತು ಇನ್ನೆಷ್ಟು ದಿನ ಇಂಥ ಭಯೋತ್ಪಾದನೆಯನ್ನು ನಿರ್ಲಕ್ಷಿಸುತ್ತದೆ? ಈ ಆಕಾಶವೇ ಮುಚ್ಚಿ, ಇಂಥ ದಾಳಿಗಳು ನಿಲ್ಲಬಾರದೆ? ನಿಮಗೆ ಶಕ್ತಿ ಇರಬಹುದು ಆದರೆ ಮಾನವೀಯತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೀರಿ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Mariupol. Direct strike of Russian troops at the maternity hospital. People, children are under the wreckage. Atrocity! How much longer will the world be an accomplice ignoring terror? Close the sky right now! Stop the killings! You have power but you seem to be losing humanity. pic.twitter.com/FoaNdbKH5k
— Володимир Зеленський (@ZelenskyyUa) March 9, 2022
ಅಧ್ಯಕ್ಷರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ, ಆ ಆಸ್ಪತ್ರೆಯ ಒಳಗೆಲ್ಲ ಸಂಪೂರ್ಣವಾಗಿ ಧ್ವಂಸಗೊಂಡಿದ್ದನ್ನು ಕಾಣಬಹುದು. ಕಿಟಕಿಗಳೆಲ್ಲ ಮುರಿದು ಬಿದ್ದಿವೆ. ಗೋಡೆಗಳೂ ಒಡೆದು ಹೋಗಿದೆ. ಇದು ರಷ್ಯಾ ಸೇನೆಯ ನೇರ ದಾಳಿ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಈ ದುರ್ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದು, ಯಾವುದೆ ಸಾವಿನ ವರದಿಯಾಗಿಲ್ಲ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಮಕ್ಕಳಿಗೆ ಯಾರಿಗೂ ಗಾಯವಾಗಿಲ್ಲ. ಆದರೆ ಈ ಆಸ್ಪತ್ರೆ ಇನ್ನು ರಿಪೇರಿ ಮಾಡಲಾಗದಷ್ಟು ಧ್ವಂಸಗೊಂಡಿದೆ. ಮರಿಯುಪೋಲ್ ಸಿಟಿಯನ್ನು ರಷ್ಯಾ ಸೇನೆ ಮುತ್ತಿಗೆ ಹಾಕಿದೆ. ಇದು ಆಗ್ನೇಯ ಉಕ್ರೇನ್ನಲ್ಲಿರುವ ಅಜೋವ್ ಸಮುದ್ರದ ದಡದಲ್ಲಿರುವ ಒಂದು ಬಂದರು ನಗರ. ಇಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದ್ದರೂ ಕೂಡ, ಆಗಾಗ ಅದನ್ನು ಉಲ್ಲಂಘನೆ ಮಾಡಿ ಬಾಂಬ್ ದಾಳಿ ನಡೆಸುತ್ತಲೇ ಇದೆ.
ಇದನ್ನೂ ಓದಿ: ಗುಪ್ತವಾಗಿ ಮದುವೆಯಾಗಿದ್ದ ಖ್ಯಾತ ನಟಿ; ವಿಷಯವನ್ನು ವರ್ಷಗಳ ಕಾಲ ಎಲ್ಲರಿಂದ ಮುಚ್ಚಿಟ್ಟಿದ್ದೇಕೆ?