74 ವರ್ಷದ ಮಹಿಳೆಯನ್ನು ಅಪಹರಿಸಿ 2 ವರ್ಷ ಅತ್ಯಾಚಾರ, ಅಪರಾಧಿಗೆ 394 ವರ್ಷಗಳ ಜೈಲುಶಿಕ್ಷೆ

ಎಪ್ಪತ್ನಾಲ್ಕು ವರ್ಷ ವಯಸ್ಸಿನ ಮಹಿಳೆಯನ್ನು ಅಪಹರಿಸಿ ಹೋಟೆಲ್​ನಲ್ಲಿ ಬಂಧಿಯಾಗಿಸಿ 2 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ನ್ಯಾಯಾಲಯವು 394 ವರ್ಷಗಳ ಜೈಲುಶಿಕ್ಷೆ ವಿಧಿಸಿರುವ ಘಟನೆ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ಸ್ಯಾನ್ ಮೇಟಿಯೊ ಕೌಂಟಿ ಜಿಲ್ಲಾ ಅಟಾರ್ನಿ ಸ್ಟೀವ್ ವ್ಯಾಗ್‌ಸ್ಟಾಫೆ ಕಚೇರಿ ಪ್ರಕಾರ, ನ್ಯಾಯಾಧೀಶರು ಓಕ್ಲ್ಯಾಂಡ್‌ನ 58 ವರ್ಷದ ಇಯಾನ್ ಎಡಾರ್ಡ್ ಕ್ರೋ ಅವರಿಗೆ 394 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಫೆಬ್ರವರಿಯಲ್ಲಿ ಕ್ರೋಯ್‌ಗೆ 33 ಅಪರಾಧಗಳ ಆರೋಪ ಹೊರಿಸಲಾಯಿತು, ಇದರಲ್ಲಿ ಅತ್ಯಾಚಾರ, ಚಿತ್ರಹಿಂಸೆ, ಹಿರಿಯರ ಮೇಲಿನ ದೌರ್ಜನ್ಯ ಸೇರಿದೆ.

74 ವರ್ಷದ ಮಹಿಳೆಯನ್ನು ಅಪಹರಿಸಿ 2 ವರ್ಷ ಅತ್ಯಾಚಾರ, ಅಪರಾಧಿಗೆ 394 ವರ್ಷಗಳ ಜೈಲುಶಿಕ್ಷೆ
ಜೈಲು
Image Credit source: National herald

Updated on: Jun 06, 2025 | 3:07 PM

ಸ್ಯಾನ್​ ಫ್ರಾನ್ಸಿಸ್ಕೋ, ಜೂನ್ 06: ಎಪ್ಪತ್ನಾಲ್ಕು ವರ್ಷ ವಯಸ್ಸಿನ ಮಹಿಳೆಯನ್ನು ಅಪಹರಿಸಿ ಹೋಟೆಲ್​ನಲ್ಲಿ ಬಂಧಿಯಾಗಿಸಿ 2 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ನ್ಯಾಯಾಲಯವು 394 ವರ್ಷಗಳ ಜೈಲುಶಿಕ್ಷೆ ವಿಧಿಸಿರುವ ಘಟನೆ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ಸ್ಯಾನ್ ಮೇಟಿಯೊ ಕೌಂಟಿ ಜಿಲ್ಲಾ ಅಟಾರ್ನಿ ಸ್ಟೀವ್ ವ್ಯಾಗ್‌ಸ್ಟಾಫೆ ಕಚೇರಿ ಪ್ರಕಾರ, ನ್ಯಾಯಾಧೀಶರು ಓಕ್ಲ್ಯಾಂಡ್‌ನ 58 ವರ್ಷದ ಇಯಾನ್ ಎಡಾರ್ಡ್ ಕ್ರೋ ಅವರಿಗೆ 394 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಫೆಬ್ರವರಿಯಲ್ಲಿ ಕ್ರೋಯ್‌ಗೆ 33 ಅಪರಾಧಗಳ ಆರೋಪ ಹೊರಿಸಲಾಯಿತು, ಇದರಲ್ಲಿ ಅತ್ಯಾಚಾರ, ಚಿತ್ರಹಿಂಸೆ, ಹಿರಿಯರ ಮೇಲಿನ ದೌರ್ಜನ್ಯ ಸೇರಿದೆ.

ಆಗಸ್ಟ್ 2020 ರಿಂದ ಆಗಸ್ಟ್ 2022 ರವರೆಗೆ ಬೆಲ್ಮಾಂಟ್ ಹಯಾತ್ ಹೋಟೆಲ್‌ನಲ್ಲಿ 74 ವರ್ಷದ ಮಹಿಳೆಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಸಂತ್ರಸ್ತೆ ಆತನ ತಾಯಿಯ ಸ್ನೇಹಿತೆಯಾಗಿದ್ದರು.ಕ್ರೋ ತಾಯಿ 2016 ರಲ್ಲಿ ನಿಧನರಾದ ನಂತರ ಆತ ಸಂತ್ರಸ್ತೆಯ ಜತೆ ಹೆಚ್ಚು ಸ್ನೇಹ ಬೆಳೆಸಿಕೊಂಡಿದ್ದ. ತನ್ನ ಜತೆ ಬರಲು ಒತ್ತಾಯಿಸಿದ್ದ.ಅಂತಿಮವಾಗಿ ಹೋಟೆಲ್​​ನೊಳಗೆ ಕರೆದೊಯ್ದು ಬಂಧಿಯಾಗಿರಿಸಿ ಅತ್ಯಾಚಾರವೆಸಗಿದ್ದಾನೆ.

ಕ್ರೋ ಆಕೆಯ ಬಳಿ ಇದ್ದ ಹಣವೆಲ್ಲವನ್ನೂ ತೆಗೆದುಕೊಂಡು ಖಾತೆಯನ್ನು ಖಾಲಿ ಮಾಡಿದ್ದ.ಹೋಟೆಲ್‌ನಲ್ಲಿ, ಸಂತ್ರಸ್ತೆಯನ್ನು ಎಂಟು ತಿಂಗಳ ಕಾಲ ಕೊಠಡಿಯಿಂದ ಹೊರಗೆ ಹೋಗಲು ಬಿಡಲಿಲ್ಲ ಮತ್ತು ಹೊರಗೆ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: 2019ರ ಪೊಲ್ಲಾಚಿ ಅತ್ಯಾಚಾರ ಪ್ರಕರಣ; 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

2021 ರಲ್ಲಿ ಸಂತ್ರಸ್ತೆಯ ಪಾದದ ಮೂಳೆ ಮುರಿದಿತ್ತು ಮತ್ತು ತೀವ್ರವಾದ ನೋವಿನ ಹೊರತಾಗಿಯೂ ಆಕೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿಲ್ಲ ಎಂದು ಡಿಎ ಕಚೇರಿ ತಿಳಿಸಿದೆ. ನ್ಯೂ ಮೆಕ್ಸಿಕೋದಲ್ಲಿರುವ ಸ್ನೇಹಿತೆಯನ್ನು ರಹಸ್ಯವಾಗಿ ಸಂಪರ್ಕಿಸಿದ ನಂತರ, ಪೊಲೀಸರು ಹೋಟೆಲ್​ ರೂಮಿನ ಮೇಲೆ ದಾಳಿ ನಡೆಸಿದ್ದರು. ಮಹಿಳೆ ಬೆತ್ತಲಾಗಿದ್ದರು, ದೇಹವೆಲ್ಲಾ ಮೂಗೇಟುಗಳಿಂದ ಕೂಡಿತ್ತು. ನಡೆಯಲೂ ಆಗದ ಪರಿಸ್ಥಿತಿಯಲ್ಲಿದ್ದರು.

ವಿಚಾರಣೆ ಸಂದರ್ಭದಲ್ಲಿ ಕ್ರೋ ಎದೆನೋವೆಂದು ನಟಿಸುವುದು, ಹುಚ್ಚನಂತೆ ವರ್ತಿಸಿ ಶಿಕ್ಷೆ ಪ್ರಕಟವನ್ನು ಮುಂದೂಡಲು ಯತ್ನಿಸಿದ್ದ. ಹೇಗೋ ಇಷ್ಟು ದಿನ ಜೀವವನ್ನು ಕಾಪಾಡಿಕೊಂಡು ಬಂದಿದ್ದೇನೆ ನಾನು ಬದುಕುತ್ತೇನೆ ಎನ್ನುವ ಯಾವ ಭರವಸೆಯೂ ನನಗೆ ಇರಲಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಅಪರಾಧಿಯನ್ನು 10 ವರ್ಷಗಳ ಕಾಲ ಯಾರೂ ಕೂಡ ಸಂಪರ್ಕಿಸದಂತೆ ನ್ಯಾಯಾಲಯ ಸೂಚಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:04 pm, Fri, 6 June 25