AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದ ಮಗುವಿನ ಜೀವ ಕಾಪಾಡಿದ ಯುವಕ!

ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದ ಮಗುವಿನ ಜೀವ ಕಾಪಾಡಿದ ಯುವಕ!

ಸುಷ್ಮಾ ಚಕ್ರೆ
|

Updated on: Oct 05, 2026 | 8:10 PM

Share

ಅಹ್ಮದ್ ರಗಾಬ್ ಗಿಜಾದ ಅರ್ದ್ ಎಲ್-ಲೆವಾ ಪ್ರದೇಶದ ಅಂಗಡಿಯ ಬಳಿ ನಿಂತಿದ್ದರು. ಆ ಕ್ಷಣದಲ್ಲಿ, ಕಟ್ಟಡದ ಬದಿಯಿಂದ ಕಿರುಚಾಟ ಮತ್ತು ಅಳುವ ಸದ್ದು ಕೇಳಿಸಿತು. ಏನಾಯಿತು ಎಂದು ನೋಡಲು ಮೇಲೆ ನೋಡಿದಾಗ ಎರಡನೇ ಮಹಡಿಯಿಂದ ಮಗು ಬೀಳುತ್ತಿರುವುದನ್ನು ನೋಡಿದರು. ಒಂದು ಕ್ಷಣವೂ ಹಿಂಜರಿಯದೆ, ರಗಾಬ್ ಹುಡುಗನ ಕಡೆಗೆ ಓಡಿಹೋದರು. ಅವನು ಬೀಳುವ ಸ್ಥಳವನ್ನು ಅಂದಾಜು ಮಾಡಿ ಆ ಹುಡುಗನನ್ನು ಹಿಡಿಯಲು ಸರಿಯಾದ ಸ್ಥಳದಲ್ಲಿ ನಿಂತು, ಮಗುವನ್ನು ಕಾಪಾಡಿದರು.

ಈಜಿಪ್ಟ್, ಅಕ್ಟೋಬರ್ 5: ಇದು ಈಜಿಪ್ಟ್​ನಲ್ಲಿ ನಡೆದ ಘಟನೆ. ಅಹ್ಮದ್ ರಗಾಬ್ ಎಂಬ ಯುವಕ ಗಿಜಾದ ಅರ್ದ್ ಎಲ್-ಲೆವಾ ಪ್ರದೇಶದ ಅಂಗಡಿಯ ಬಳಿ ನಿಂತಿದ್ದರು. ಆಗ ಪಕ್ಕದ ಕಟ್ಟಡದಿಂದ ಕಿರುಚಾಡುವ ಶಬ್ದ ಕೇಳಿತು. ಏನಾಯಿತೆಂದು ತಲೆ ಮೇಲೆತ್ತಿ ನೋಡಿದಾಗ 2ನೇ ಮಹಡಿಯ ಬಾಲ್ಕನಿಯಿಂದ ಮಗು ಕೆಳಗೆ ಬೀಳುತ್ತಿರುವುದು ಕಾಣಿಸಿತು. ಆಗ ಆ ಮಗು ಬೀಳುವ ಜಾಗವನ್ನು ಅಂದಾಜಿಸಿದ ಅವರು ಅದೇ ಸ್ಥಳದಲ್ಲಿ ನಿಂತು ಮಗು ನೆಲಕ್ಕೆ ಬೀಳದಂತೆ ತಮ್ಮ ಕೈಗಳಲ್ಲಿ ಹಿಡಿದುಕೊಂಡರು. ಅವರ ಈ ಸಮಯಪ್ರಜ್ಞೆಯಿಂದಾಗಿ 4 ವರ್ಷದ ಮಗುವಿನ ಜೀವ ಉಳಿಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More