ಮಾಸ್ಕೋ ಶಾಪಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ; 7,000 ಚದರ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿದ ಜ್ವಾಲೆ

ಉತ್ತರ ಉಪನಗರವಾದ ಖಿಮ್ಕಿಯಲ್ಲಿರುವ ಮೆಗಾ ಖಿಮ್ಕಿ ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಸ್ಕೋದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡಕ್ಕೆ ಕಾರಣ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದಾಗಿರಬಹುದು ಎಂದು ತುರ್ತುಸೇವೆಗಳು ಹೇಳಿವೆ

ಮಾಸ್ಕೋ ಶಾಪಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ; 7,000 ಚದರ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿದ ಜ್ವಾಲೆ
ಶಾಪಿಂಗ್ ಮಾಲ್ ನಲ್ಲಿ ಹಬ್ಬಿದ ಬೆಂಕಿ
Edited By:

Updated on: Dec 09, 2022 | 2:24 PM

ರಷ್ಯಾದ(Russia) ಅಗ್ನಿಶಾಮಕ ದಳದವರು ಶುಕ್ರವಾರ ಮಾಸ್ಕೋ ಉಪನಗರದಲ್ಲಿರುವ (Moscow suburb)ಶಾಪಿಂಗ್ ಸೆಂಟರ್‌ನಲ್ಲಿ ಸಂಭವಿಸಿದ 7,000 ಚದರ ಮೀಟರ್ ವ್ಯಾಪ್ತಿಯಲ್ಲಿ ಹರಡಿದ ಬೆಂಕಿ ನಂದಿಸಲು ಹರಸಾಹಸ ಪಟ್ಟರು ಎಂದು ತುರ್ತು ಸೇವೆಗಳು ತಿಳಿಸಿವೆ. ಮಾಸ್ಕೋ ಪ್ರದೇಶದಲ್ಲಿ ಅಗ್ನಿಶಾಮಕ ದಳದವರು 7,000 ಚದರ ಮೀಟರ್ ವ್ಯಾಪ್ತಿಯಲ್ಲಿನ ಬೆಂಕಿಯನ್ನು ನಂದಿಸುತ್ತಿದ್ದಾರೆ ಎಂದು ರಷ್ಯಾದ ತುರ್ತು ಪರಿಸ್ಥಿತಿಗಳ ಸಚಿವಾಲಯ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಉತ್ತರ ಉಪನಗರವಾದ ಖಿಮ್ಕಿಯಲ್ಲಿರುವ ಮೆಗಾ ಖಿಮ್ಕಿ ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಸ್ಕೋದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡಕ್ಕೆ ಕಾರಣ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದಾಗಿರಬಹುದು ಎಂದು ತುರ್ತುಸೇವೆಗಳು ಹೇಳಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇದೊಂದು ಉದ್ದೇಶಪೂರ್ವಕ ನಡೆದ ಕೃತ್ಯ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ಬೆಂಕಿ ಹಚ್ಚಿದ್ದೇ ಈ ಘಟನೆಗೆ ಕಾರಣವೆಂದು ಶಂಕಿಸಲಾಗಿದೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಕಂಪನಿಗಳು ರಷ್ಯಾದಿಂದ ನಿರ್ಗಮಿಸುವ ಮೊದಲು ರಷ್ಯಾದ ರಾಜಧಾನಿಯ ಸಮೀಪವಿರುವ ಖಿಮ್ಕಿಯಲ್ಲಿರುವ ಮೆಗಾ ಶಾಪಿಂಗ್ ಕೇಂದ್ರವು ಹೆಚ್ಚಿನ ಸಂಖ್ಯೆಯ ಪಾಶ್ಚಿಮಾತ್ಯ ರಿಟೇಲ್ ಅಂಗಡಿಗಳ ನೆಲೆಯಾಗಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ