Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೈಲಿನಾಲ್ ಕ್ಯಾಪ್ಸೂಲ್ ನಲ್ಲಿ ಸಯನೈಡ್ ಬೆರೆಸಿ ಹಲವಾರು ಜನರ ಸಾವಿಗೆ ಕಾರಣನಾದರೂ ಜೇಮ್ಸ್ ವಿಲಿಯಂ ಲೂಯಿಸ್ ಅಪರಾಧಿಯೆಂದು ಸಾಬೀತಾಗಲಿಲ್ಲ!

ಸಾವುಗಳು ವರದಿಯಾದ ಕೂಡಲೇ ಕಂಪನಿಯು ಚಿಕ್ಯಾಗೋ ಮಾರುಕಟ್ಟೆಯಲ್ಲಿದ್ದಎಕ್ಸ್​ಟ್ರಾ ಸ್ಟ್ರೆಂಗ್ತ್ ಟೈಲಿನಾಲ್ ಕ್ಯಾಪ್ಸೂಲ್ ಬಾಟಲ್ ಗಳನ್ನು ವಾಪಸ್ಸು ತರಿಸಿಕೊಂಡಿತು. ಬಾಟಲಿಗಳನ್ನು ತೆರೆದು ಕ್ಯಾಪ್ಸೂಲ್ ಗಳನ್ನು ಪರಿಶೀಲಿಸಿದಾಗ, ಕೆಲ ಬಾಟಲಿಗಳಲ್ಲಿನ ಕ್ಯಾಪ್ಸೂಲ್ ಗಳಲ್ಲಿ ಪೊಟ್ಯಾಸಿಯಂ ಸಯನೈಡ್ ಅಂಶವಿದ್ದಿದ್ದು ಗೊತ್ತಾಯಿತು.

ಟೈಲಿನಾಲ್ ಕ್ಯಾಪ್ಸೂಲ್ ನಲ್ಲಿ ಸಯನೈಡ್ ಬೆರೆಸಿ ಹಲವಾರು ಜನರ ಸಾವಿಗೆ ಕಾರಣನಾದರೂ ಜೇಮ್ಸ್ ವಿಲಿಯಂ ಲೂಯಿಸ್ ಅಪರಾಧಿಯೆಂದು ಸಾಬೀತಾಗಲಿಲ್ಲ!
ಜೇಮ್ಸ್ ವಿಲಿಯಂ ಲೂಯಿಸ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 10, 2022 | 7:53 AM

ಸೆಪ್ಟೆಂಬರ್ 1982 ರಲ್ಲಿ ಅಮೆರಿಕದ (US) ಚಿಕ್ಯಾಗೋ ನಗರದಲ್ಲಿ ವಾಸವಾಗಿದ್ದ 12-ವರ್ಷದ ಬಾಲಕಿಯೊಬ್ಬಳು ಎಕ್ಸ್​ಟ್ರಾ ಸ್ಟ್ರೆಂಗ್ತ್ ಟೈಲಿನಾಲ್ (Extra Strength Tylenol) ಕ್ಯಾಪ್ಸೂಲ್ ತೆಗೆದುಕೊಂಡ ಸ್ವಲ್ಪಹೊತ್ತಿನಲ್ಲೇ ಅಸುನೀಗಿದಳು. ಅದೇ ದಿನ ಆಸ್ಪತ್ರೆಯೊಂದರಲ್ಲಿ ಅ ಕ್ಯಾಪ್ಸೂಲ್ ಸೇವಿಸಿದ ವ್ಯಕ್ತಿ ಮರಣ ಹೊಂದಿದ್ದ. ಅವನ ಕುಟುಂಬದ ಇನ್ನಿಬ್ಬರು ಸದಸ್ಯರು ಸಹ ಟೈಲಿನಾಲ್ ಕ್ಯಾಪ್ಸೂಲ್ ನುಂಗಿದ ಸ್ವಲ್ಪ ಹೊತ್ತಿನ ನಂತರ ಇಹಲೋಕ ತ್ಯಜಿಸಿದ್ದರು. ಮುಂದಿನ ಕೆಲ ವಾರಗಳಲ್ಲಿ ಚಿಕ್ಯಾಗೋ (Chicago) ನಗರದ ಹಲವಾರು ಆರೋಗ್ಯವಂತ ಜನ ಇದ್ದಕ್ಕಿದ್ದಂತೆ ಪ್ರಾಣಬಿಟ್ಟರು. ಅವರ ಸಾವಿನಲ್ಲಿ ಒಂದು ಸಂಗತಿ ಕಾಮನ್ ಆಗಿತ್ತು, ಸಾಯುವ ಕೆಲವೇ ಕ್ಷಣಗಳ ಮುಂಚೆ ಅವರೆಲ್ಲ ಎಕ್ಸ್​ಟ್ರಾ ಸ್ಟ್ರೆಂಗ್ತ್ ಟೈಲಿನಾಲ್ ಕ್ಯಾಪ್ಸೂಲ್ ಸೇವಿಸಿದ್ದರು.

ಟೈಲಿನಾಲ್ ಖಂಡಿತವಾಗಿಯೂ ವಿಷಕಾರಿ ಕ್ಯಾಪ್ಸೂಲ್ ಅಲ್ಲ. ಅದು ಸುಲಭವಾಗಿ ಓವರ್-ದಿ-ಕೌಂಟರ್ ಸಿಗುವ ನೋವು ಮತ್ತು ಜ್ವರ ನಿವಾರಕ ಕ್ಯಾಪ್ಸೂಲ್. ಅದರಲ್ಲಿರೋದು ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗುವ ಮತ್ತು ಗರ್ಭಿಣಿಯರಿಗೂ ವೈದ್ಯರು ಪ್ರಿಸ್ಕ್ರೈಬ್ ಮಾಡುವ ಪ್ಯಾರಾಸಿಟಾಮೋಲ್. ನಮ್ಮಲ್ಲಿನ ಡೊಲೋ-650 ಅಥವಾ ಕಾಲ್ಪೋಲ್ ಮಾತ್ರೆಗಳ ಹಾಗೆ. ಎಕ್ಸ್​ಟ್ರಾ ಸ್ಟ್ರೆಂಗ್ತ್ ಟೈಲಿನಾಲ್ ವಿಶ್ವದ ಪ್ರಮುಖ ಮತ್ತು ಅತಿದೊಡ್ಡ ಫಾರ್ಮಾಸ್ಯೂಟಿಕಲ್ಸ್ ಕಂಪನಿಗಳಲ್ಲಿ ಒಂದಾಗಿರುವ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತಯಾರಿಸುತ್ತದೆ.

ಸಾವುಗಳು ವರದಿಯಾದ ಕೂಡಲೇ ಕಂಪನಿಯು ಚಿಕ್ಯಾಗೋ ಮಾರುಕಟ್ಟೆಯಲ್ಲಿದ್ದ ಎಕ್ಸ್​ಟ್ರಾ ಸ್ಟ್ರೆಂಗ್ತ್ ಟೈಲಿನಾಲ್ ಕ್ಯಾಪ್ಸೂಲ್ ಬಾಟಲ್ ಗಳನ್ನು ವಾಪಸ್ಸು ತರಿಸಿಕೊಂಡಿತು. ಬಾಟಲಿಗಳನ್ನು ತೆರೆದು ಕ್ಯಾಪ್ಸೂಲ್ ಗಳನ್ನು ಪರಿಶೀಲಿಸಿದಾಗ, ಕೆಲ ಬಾಟಲಿಗಳಲ್ಲಿನ ಕ್ಯಾಪ್ಸೂಲ್ ಗಳಲ್ಲಿ ಪೊಟ್ಯಾಸಿಯಂ ಸಯನೈಡ್ ಅಂಶವಿದ್ದಿದ್ದು ಗೊತ್ತಾಯಿತು. ಅ ವಿಷಯ ಬಯಲಿಗೆ ಬಿದ್ದ ಕೂಡಲೇ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಹಲವಾರು ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಿ ಕ್ಯಾಪ್ಸೂಲ್ ಖರೀದಿಸದಂತೆ ಗ್ರಾಹಕರಲ್ಲಿ ಮನವಿ ಮಾಡಿತು. ಅದಾದ ಮೇಲೆ ಕಂಪನಿಯು ಬಾಟಲಿಯ ಪ್ಯಾಕಿಂಗ್ ಟ್ಯಾಂಪರ್ ಮಾಡದ ಹಾಗೆ ಮೂರು ಬಗೆಯ ಸೀಲಿಂಗ್ ಕ್ರಮವನ್ನು ಅನುಸರಿಸಿತು.

Extra Strength Tylenol capsules

ಎಕ್ಸ್​ಟ್ರಾ ಸ್ಟ್ರೆಂಗ್ತ್ ಟೈಲಿನಾಲ್ ಕ್ಯಾಪ್ಸೂಲ್​ಗಳು

ಏತನ್ಮಧ್ಯೆ, ಜೇಮ್ಸ್ ವಿಲಿಯಂ ಲೂಯಿಸ್ ಹೆಸರಿನ ನ್ಯೂ ಯಾರ್ಕ್ ನಗರದ ನಿವಾಸಿ ಜಾನ್ಸನ್ ಮತ್ತು ಜಾನ್ಸನ್ ಕಂಪನಿಗೆ ಫೋನ್ ಮಾಡಿ ಎಕ್ಸ್​ಟ್ರಾ ಸ್ಟ್ರೆಂಗ್ತ್ ಟೈಲಿನಾಲ್ ಕ್ಯಾಪ್ಸೂಲ್ ಗಳ ಬಾಟಲ್ ಗಳನ್ನು ಟ್ಯಾಂಪರ್ ಮಾಡಿ ಅವುಗಳಲ್ಲಿದ್ದ ಕ್ಯಾಪ್ಸೂಲ್ ಗಳಲ್ಲಿ ಸಯನೈಡ್ ಬೆರೆಸಿದ್ದು ತಾನೇ ಅಂತ ಹೇಳಿದ! ಒಂದು ಮಿಲಿಯನ್ ಡಾಲರ್ ಹಣ ನೀಡಿದರೆ ಮಾತ್ರ ಕ್ಯಾಪ್ಸೂಲ್ ಗಳಲ್ಲಿ ಸಯನೈಡ್ ಬೆರೆಸುವುದನ್ನು ನಿಲ್ಲಿಸುವುದಾಗಿಯೂ ಅವನು ಹೇಳಿದ.

ಕಂಪನಿಯು ಕೂಡಲೇ ಪೊಲೀಸರಿಗೆ ಲೂಯಿಸ್ ಮಾಡಿದ ಸಂಗತಿ ತಿಳಿಸಿದಾಗ ನ್ಯೂ ಯಾರ್ಕ್ ಸಿಟಿ ಪೊಲೀಸ್ ಅವನನ್ನು ಬಂಧಿಸಿತು. ಗಾಬರಿ ಹುಟ್ಟಿಸುವ ಸಂಗತಿಯೆಂದರೆ ಅವನ ಅಪರಾಧ ಕೋರ್ಟ್ ನಲ್ಲಿ ಸಾಬೀತಾಗಲಿಲ್ಲ. ಆದಾಗ್ಯೂ ಸುಲಿಗೆ ಪ್ರಕರಣದಲ್ಲಿ ಅವನನ್ನು ಸೆರೆಮನೆಗೆ ದೂಡಲಾಯಿತು.

ಟೈಲಿನಾಲ್ ಕ್ಯಾಪ್ಸೂಲ್ ಗಳ ಬಾಟಲಿಗಳನ್ನು ಟ್ಯಾಂಪರ್ ಮಾಡದ ಹಾಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಭದ್ರವಾಗಿ ಮಾಡಲಾರಂಭಿಸಿದ್ದು ನಿಜವಾದರೂ ಚಿಕ್ಯಾಗೋ ನಗರದಲ್ಲಿ ಆ ಸ್ವರೂಪದ ಅಪರಾಧಗಳು ಹೆಚ್ಚಿದವು. ಲೂಯಿಸ್ ನಂಥ ಹಲವಾರು ಅಪರಾಧಿಗಳು ಹುಟ್ಟಿಕೊಂಡು ಓವರ್-ದಿ-ಕೌಂಟರ್ ಸಿಗುವ ಮಾತ್ರೆಗಳ ಬಾಟಲ್ ಗಳಲ್ಲಿ ಸಯನೈಡ್ ಬೆರೆಸಿ ನೂರಾರು ಜನರ ಸಾವಿಗೆ ಕಾರಣರಾದರು.

ಚಿಕ್ಯಾಗೋ ನಗರದಲ್ಲಿ ನಡೆದ ‘ಟೈಲಿನಾಲ್ ಕೊಲೆಗಳು’ ಅಮೆರಿಕದಲ್ಲಿ ಒಂದು ಅಮೂಲಾಗ್ರ ಬದಲಾವಣೆಗೆ ಕಾರಣವಾದವು. ಫರ್ಮಾಸ್ಯೂಟಿಕಲ್ಸ್ ಇಂಡಸ್ಟ್ರೀಯಲ್ಲಿ ಕ್ವಾಲಿಟಿ ಕಂಟ್ರೋಲ್ (ಗುಣಮಟ್ಟ ನಿಯಂತ್ರಣ) ಹತ್ತು ಪಟ್ಟು ಹೆಚ್ಚಿತು. ಅಲ್ಲ್ಲಿನ ಎಫ್ ಬಿಐ ಗೆ ಪ್ರಕರಣದಲ್ಲಿ ಯಾರನ್ನೂ ದೋಷಿ ಅಂತ ಸಾಬೀತು ಮಾಡಲಾಗಲಿಲ್ಲ. ಅದರೆ, ಜೇಮ್ಸ್ ವಿಲಿಯಂ ಲೂಯಿಸ್ ಮತ್ತು ಅವನ ಪತ್ನಿ ಸಯನೈಡ್ ಮೂಲಕ ಜನರ ಹತ್ಯೆಗಳನ್ನು ನಡೆಸಿದರೆಂದು ಅಮೆರಿಕನ್ನರು ಈಗಲೂ ಹೇಳುತ್ತಾರೆ.

ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ 

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
Daily Devotional: ಪೂಜೆ ಮಾಡುವಾಗ ದೇವರ ಮನೆಯಲ್ಲಿ ಹೂ ಬಿದ್ರೆ ಏನರ್ಥ?
Daily Devotional: ಪೂಜೆ ಮಾಡುವಾಗ ದೇವರ ಮನೆಯಲ್ಲಿ ಹೂ ಬಿದ್ರೆ ಏನರ್ಥ?