ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೈಮೇಲೆಲ್ಲ ಗಾಯ; ವಕೀಲರಿಂದ ಗಂಭೀರ ಆರೋಪ

|

Updated on: May 30, 2021 | 1:14 PM

ಇದೀಗ ಮೆಹುಲ್​ ಚೋಸ್ಕಿ ಜೈಲಿನಲ್ಲಿರುವ, ಅವರ ದೇಹದ ಮೇಲೆಲ್ಲ ಗಾಯಗಳಾಗಿರುವ ಫೋಟೋಗಳು ಇಂಡಿಯಾ ಟುಡೆ ಟಿವಿ ಮಾಧ್ಯಮಕ್ಕೆ ಲಭ್ಯವಾಗಿವೆ.

ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೈಮೇಲೆಲ್ಲ ಗಾಯ; ವಕೀಲರಿಂದ ಗಂಭೀರ ಆರೋಪ
ಮೆಹುಲ್ ಚೋಸ್ಕಿ
Follow us on

ಡೊಮಿನಿಕಾದಲ್ಲಿ ಅರೆಸ್ಟ್​ ಆಗಿದ್ದ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್​ ಚೋಕ್ಸಿ ಅವರ ಕೆಲವು ಫೋಟೋಗಳು ವೈರಲ್​ ಆಗಿವೆ. ಆಂಟುಗುವಾ ಪೌರತ್ವ ಪಡೆದು, ಅಲ್ಲಿಯೇ ನೆಲೆಸಿದ್ದ ಚೋಸ್ಕಿ ತನ್ನ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಡೊಮಿನಿಕಾಕ್ಕೆ ಪರಾರಿಯಾಗಿದ್ದರು. ರಾಷ್ಟ್ರವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಆರೋಪದ ಮೇಲೆ ಅಲ್ಲಿನ ಪೊಲೀಸರು ಬಂಧಿಸಿದ್ದರು.

ಇದೀಗ ಮೆಹುಲ್​ ಚೋಕ್ಸಿ ಜೈಲಿನಲ್ಲಿರುವ, ಅವರ ದೇಹದ ಮೇಲೆಲ್ಲ ಗಾಯಗಳಾಗಿರುವ ಫೋಟೋಗಳು ಇಂಡಿಯಾ ಟುಡೆ ಟಿವಿ ಮಾಧ್ಯಮಕ್ಕೆ ಲಭ್ಯವಾಗಿವೆ. ಕಬ್ಬಿಣದ ಗೇಟ್​​ನ ಹಿಂದೆ ಚೋಸ್ಕಿ ನಿಂತಿರುವ ಫೋಟೋ ಸಿಕ್ಕಿದ್ದು, ಅವರ ಕಣ್ಣೆಲ್ಲ ಕೆಂಪಾಗಿದ್ದನ್ನು ಫೋಟೋದಲ್ಲಿ ನೋಡಬಹುದು. ಅವರ ಕೈ ಮತ್ತು ಮಣಿಕಟ್ಟಿನ ಬಳಿಯೂ ಗಾಯಗಳಾಗಿವೆ.

ಮೆಹುಲ್​ ಚೋಕ್ಸಿ ಪರ ವಕೀಲರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚೋಸ್ಕಿಯನ್ನು ಆಂಟಿಗುವಾ ಮತ್ತು ಬಾರ್ಬುಡಾದಿಂದ ಅಪಹರಿಸಿ, ಒತ್ತಾಯ ಪೂರ್ವಕವಾಗಿ ಡೊಮಿನಿಕಾಕ್ಕೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಹೋದ ಮೇಲೆ ಕೆಟ್ಟದಾಗಿ ಹೊಡೆಯಲಾಗಿದೆ. ಹೀಗಾಗಿ ಅವರ ಮೈಮೇಲೆಲ್ಲ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಮೆಹುಲ್​ ಚೋಕ್ಸಿ ಸದ್ಯ ಕ್ವಾರಂಟೈನ್​ನಲ್ಲಿ ಇದ್ದಾರೆ. ಜೂ.2ರವರೆಗೂ ಚೋಸ್ಕಿಯನ್ನು ಯಾವುದೇ ಬೇರೆ ದೇಶಗಳಿಗೆ ವಾಪಸ್ ಕಳಿಸುವಂತಿಲ್ಲ ಎಂದು ಡೊಮಿನಿಕಾದ ನ್ಯಾಯಾಲಯವೊಂದು ಆದೇಶ ಹೊರಡಿಸಿದೆ. ಭಾರತದಲ್ಲಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ 13,500 ಕೋಟಿ ರೂ.ವಂಚನೆ ಕೇಸ್​​ನಲ್ಲಿ ಚೋಕ್ಸಿ ಕೂಡ ಆರೋಪಿಯಾಗಿದ್ದಾರೆ. ಇಲ್ಲಿಂದ ತಲೆಮರೆಸಿಕೊಂಡು ಹೋಗಿದ್ದ ಅವರು 2018ರಿಂದಲೂ ಆಂಟಿಗುವಾದಲ್ಲಿ ವಾಸವಾಗಿದ್ದಾರೆ.

ಇದನ್ನೂ ಓದಿ: ಮೆಹುಲ್ ಚೋಸ್ಕಿ ಇಲ್ಲಿಗೆ ಬರೋದು ಬೇಡ ಎನ್ನುತ್ತಿರುವ ಆಂಟಿಗುವಾ ಪ್ರಧಾನಿ; ‘ನಾವು ಭಾರತಕ್ಕೆ ಕಳಿಸೋಲ್ಲ..’ ಅಂತಿದೆ ಡೊಮಿನಿಕಾ ಆಡಳಿತ

Published On - 8:59 am, Sun, 30 May 21