ಮೆಹುಲ್ ಚೋಸ್ಕಿ ಇಲ್ಲಿಗೆ ಬರೋದು ಬೇಡ ಎನ್ನುತ್ತಿರುವ ಆಂಟಿಗುವಾ ಪ್ರಧಾನಿ; ‘ನಾವು ಭಾರತಕ್ಕೆ ಕಳಿಸೋಲ್ಲ..’ ಅಂತಿದೆ ಡೊಮಿನಿಕಾ ಆಡಳಿತ
ನಿನ್ನೆ ಚೋಸ್ಕಿ ಬಂಧನವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಆಂಟಿಗುವಾ ಮತ್ತು ಬಾರ್ಬುಡಾ ದೇಶದ ಪ್ರಧಾನಿ ಗಷ್ಟನ್ ಬ್ರೌನ್, ಚೋಸ್ಕಿ ದೇಶ ತೊರೆದು ಡೊಮಿನಿಕಾಗೆ ತೆರಳಿದ್ದರು. ಮತ್ತೆ ನಾವು ಅವರನ್ನು ಆಂಟಿಗುವಾಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದಿದ್ದರು.
ದೇಶಭ್ರಷ್ಟ ವಜ್ರದ ಉದ್ಯಮಿ ಮೆಹುಲ್ ಚೋಸ್ಕಿಯನ್ನು ಡೊಮಿನಿಕಾ ದ್ವೀಪದಲ್ಲಿ ನಿನ್ನೆ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಇಷ್ಟುದಿನ ಆಂಟಿಗುವಾ ದೇಶದಲ್ಲಿ ಇದ್ದು, ಅಲ್ಲಿಯ ಪೌರತ್ವವನ್ನೂ ಪಡೆದಿದ್ದ ಮೆಹುಲ್ ಚೋಸ್ಕಿ ತನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದಂತೆ ತಲೆ ಮರೆಸಿಕೊಂಡು ಡೊಮಿನಿಕಾಗೆ ಹೋಗಿದ್ದರು. ಅಲ್ಲಿಂದಲೂ ಸಹ ಗುಪ್ತವಾಗಿ ಕ್ಯೂಬಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ ಆ ಪ್ಲ್ಯಾನ್ ವಿಫಲಗೊಂಡಿತ್ತು.
ನಿನ್ನೆ ಚೋಸ್ಕಿ ಬಂಧನವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಆಂಟಿಗುವಾ ಮತ್ತು ಬಾರ್ಬುಡಾ ದೇಶದ ಪ್ರಧಾನಿ ಗಷ್ಟನ್ ಬ್ರೌನ್, ಚೋಸ್ಕಿ ದೇಶ ತೊರೆದು ಡೊಮಿನಿಕಾಗೆ ತೆರಳಿದ್ದರು. ಮತ್ತೆ ನಾವು ಅವರನ್ನು ಆಂಟಿಗುವಾಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಡೊಮಿನಿಕಾದಿಂದಲೇ ಭಾರತಕ್ಕೆ ಹಸ್ತಾಂತರ ಆಗಬೇಕು ಎಂದು ಹೇಳಿದ್ದರು. ಆದರೆ ಡೊಮಿನಿಕಾದ ರಾಷ್ಟ್ರೀಯ ಭದ್ರತೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಇಂದು ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಚೋಸ್ಕಿಯನ್ನು ವಾಪಸ್ ಆಂಟಿಗುವಾಕ್ಕೆ ಕಳಿಸು ಎಂದು ತಿಳಿಸಿದೆ. ಆಂಟಿಗುವಾದಿಂದ ಡೊಮಿನಿಕಾಗೆ ಅಕ್ರಮವಾಗಿ ಪ್ರವೇಶ ಮಾಡಿದ್ದರಿಂದ ಚೋಸ್ಕಿಯನ್ನು ಬಂಧಿಸಲಾಗಿದೆ. ಆಂಟಿಗುವಾ ಆಡಳಿತದೊಂದಿಗೆ ನಾವು ಸಂಪರ್ಕದಲ್ಲಿದ್ದು, ಚೋಸ್ಕಿಯನ್ನು ಅಲ್ಲಿಗೆ ಕಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Mehul Choksi: 13,500 ಕೋಟಿ ವಂಚನೆಯ ಆರೋಪಿ ಮೆಹುಲ್ ಚೋಸ್ಕಿ ಭಾರತಕ್ಕೆ ಹಸ್ತಾಂತರ: ಆಂಟಿಗುವಾ ಪ್ರಧಾನಿ