ಪತಿಯ ಬೆಂಬಲಿಗರು ನಡೆಸಿದ ಕೃತ್ಯದಿಂದ ಬೇಸರವಾಗಿದೆ: ಮೆಲೇನಿಯಾ ಟ್ರಂಪ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 11, 2021 | 7:32 PM

ಘಟನೆ ನಡೆದ 5 ದಿನಗಳ ಬಳಿಕ ಮೊಟ್ಟಮೊದಲ ಬಾರಿಗೆ ಈ ಕುರಿತು ಮಾತನಾಡಿರುವ ಮೆಲೇನಿಯಾ, ಈ ಸಂದರ್ಭವನ್ನು ಬಳಸಿಕೊಂಡು ನನ್ನ ಬಗ್ಗೆ ಕೆಲವರು ಅಪಪ್ರಚಾರ ನಡೆಸಿದ್ದಾರೆ. ವೈಯಕ್ತಿಕ ದಾಳಿ ಮಾಡಿದ್ದಾರೆ. ಇದು ಅತ್ಯಂತ ವಿಷಾದನೀಯ ಸಂಗತಿ ಎಂದು ಹೇಳಿದ್ದಾರೆ.

ಪತಿಯ ಬೆಂಬಲಿಗರು ನಡೆಸಿದ ಕೃತ್ಯದಿಂದ ಬೇಸರವಾಗಿದೆ: ಮೆಲೇನಿಯಾ ಟ್ರಂಪ್
ಡೊನಾಲ್ಡ್​ ಟ್ರಂಪ್ ಮತ್ತು ಮೆಲೇನಿಯಾ ಟ್ರಂಪ್ (ಸಂಗ್ರಹ ಚಿತ್ರ)
Follow us on

ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬೆಂಬಲಿಗರು ಕ್ಯಾಪಿಟೋಲ್​ನಲ್ಲಿ ನಡೆಸಿದ ದಾಳಿ ಕೃತ್ಯಕ್ಕೆ ಟ್ರಂಪ್​ ಪತ್ನಿ ಮೆಲೇನಿಯಾ ಮೌನ ಮುರಿದಿದ್ದಾರೆ. ಕಳೆದ ವಾರ ಆದ ಘಟನೆಯ ಬಗ್ಗೆ ಅತೀವ ಬೇಸರವಿದೆ. ಆ ಕೃತ್ಯಕ್ಕೆ ಮರುಕಪಡುತ್ತೇನೆ ಎಂದು ವೈಟ್​ ಹೌಸ್​ ಬ್ಲಾಗ್​ ಪೋಸ್ಟ್​ನಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

ಘಟನೆ ನಡೆದ 5 ದಿನಗಳ ಬಳಿಕ ಮೊಟ್ಟಮೊದಲ ಬಾರಿಗೆ ಈ ಕುರಿತು ಮಾತನಾಡಿರುವ ಮೆಲೇನಿಯಾ, ಈ ಸಂದರ್ಭವನ್ನು ಬಳಸಿಕೊಂಡು ನನ್ನ ಬಗ್ಗೆ ಕೆಲವರು ಅಪಪ್ರಚಾರ ನಡೆಸಿದ್ದಾರೆ. ವೈಯಕ್ತಿಕ ದಾಳಿ ಮಾಡಿದ್ದಾರೆ. ಇದು ಅತ್ಯಂತ ವಿಷಾದನೀಯ ಸಂಗತಿ ಎಂದು ಹೇಳಿದ್ದಾರೆ.

ಟ್ರಂಪ್​ ಸೋಲಿನಿಂದ ಸಿಟ್ಟಿಗಿದ್ದ ಬೆಂಬಲಿಗರು ಕಳೆದ ವಾರ ಕ್ಯಾಪಿಟೋಲ್​ನಲ್ಲಿ ದಾಂಧಲೆ ನಡೆಸಿದ್ದರು. ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಅಮೆರಿಕಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜೋ ಬೈಡನ್​ ಜನವರಿ 20ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದು, ಟ್ರಂಪ್​ ನಿಯಮಾನುಸಾರ ಅಧಿಕಾರ ಹಸ್ತಾಂತರ ಮಾಡುವುದಾಗಿ ಹೇಳಿದ್ದಾರೆ.

ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ: ಡೊನಾಲ್ಡ್​ ಟ್ರಂಪ್​ ಇನ್‌ಸ್ಟಾಗ್ರಾಂ, ಫೇಸ್​ಬುಕ್ ಖಾತೆ 2 ವಾರ ಬ್ಲಾಕ್​