ಬೇಹುಗಾರಿಕೆ ನಡೆಸಲು ಜಲಾಂತರ್ಗಾಮಿ ಡ್ರೋಣ್​ ಬಳಸಿದ ಚೀನಾ

ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

ಬೇಹುಗಾರಿಕೆ ನಡೆಸಲು ಜಲಾಂತರ್ಗಾಮಿ ಡ್ರೋಣ್​ ಬಳಸಿದ ಚೀನಾ
ಪತ್ತೆಯಾದ ಜಲಾಂತರ್ಗಾಮಿ ಡ್ರೋಣ್
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 11, 2021 | 3:33 PM

ಜಕಾರ್ತಾ: ತನ್ನ ನೆರೆರಾಷ್ಟ್ರಗಳ ಸರಹದ್ದು ಅತಿಕ್ರಮಿಸುವ ಚೀನಾದ ಚಾಳಿ ಮುಂದುವರೆದಿದೆ. ಇಂಡೋನೇಷ್ಯಾದ ಮೀನುಗಾರರು ಸೆಲೆಯಾರ್ ದ್ವೀಪದ ಬಳಿ ಚೀನಾದ ಜಲಾಂತರ್ಗಾಮಿ ಡ್ರೋಣ್​ಗಳನ್ನು ಪತ್ತೆಹಚ್ಚಿದ್ದಾರೆ. ಚೀನಾದ ಬೀಜಿಂಗ್ ಹಡಗು ಮಾರ್ಗದಿಂದ ಅನತಿ ದೂರದಲ್ಲೇ ಈ ಡ್ರೋಣ್​ಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಮಾಧ್ಯಮಗಳು ಚೀನಾದ ಒಳನುಸುಳುವಿಕೆಯ ಧೋರಣೆಯನ್ನು ಟೀಕಿಸಿವೆ.

ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಸಂಪರ್ಕಿಸುವ ಈ ಹಡಗು ಮಾರ್ಗದಲ್ಲಿ ಈ ಜಲಾಂತರ್ಗಾಮಿ ಡ್ರೋನ್​ಗಳು ಪತ್ತೆಯಾಗಿದ್ದು, ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ. ಇಂಡೋನೇಷ್ಯಾ ಈ ಸಮುದ್ರ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಷಿಸಿದ್ದು, ಚೀನಾ ಈ ಮುನ್ನವೇ ಈ ಸಮುದ್ರ ಪ್ರದೇಶವು ತನಗೆ ಸೇರಿದ್ದೆಂದು ವಾದ ಮಂಡಿಸಿತ್ತು. ಈ ಜಲಮಾರ್ಗವು ಆಸ್ಟ್ರೇಲಿಯಾಕ್ಕೆ ಸರಕು ಸಾಗಾಣಿಕಾ ಹಡಗು ಸಂಚರಿಸುವಲ್ಲೂ ಪ್ರಮುಖ ಪಾತ್ರ ವಹಿಸಿದೆ.

ಚೀನಾದ ಡ್ರೋಣ್​ಗಳೇ ಎಂದ ತಜ್ಞರು ರೆಕ್ಕೆಯಂತಹ ರಚನೆಯನ್ನು ಹೊಂದಿರುವ ಈ ಜಲಾಂತರ್ಗಾಮಿ ಡ್ರೋಣ್​ಗಳು ಅಷ್ಟೇನೂ ಶಕ್ತಿಯುತವಾಗದಿದ್ದರೂ, ಸಮುದ್ರದಾಳದಿಂದಲೇ ಸುತ್ತಲಿನ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅವುಗಳು 225 ಸೆಂ.ಮೀಟರ್ ಉದ್ದ, 50 ಸೆಂ.ಮೀ ಅಗಲದ ರೆಕ್ಕೆ ಮತ್ತು 93 ಸೆಂ. ಮೀ ಉದ್ದದ ಆಂಟೆನಾಗಳನ್ನು ಹೊಂದಿವೆ ಎಂದು ಇಂಡೋನೇಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾ,ಫ್ರಾನ್ಸ್​ಗಳು ಸಹ ಇಂತಹ ಜಲಾಂತರ್ಗಾಮಿ ಡ್ರೋಣ್​ಗಳನ್ನು ಬಳಸುತ್ತವೆಯಾದರೂ, ಮೀನುಗಾರರಿಗೆ ದೊರೆತ ಡ್ರೋಣ್​ಗಳು ಚೀನಾ ತಯಾರಿಸಿದಂತಿವೆ ಎಂದು ವರದಿ ತಿಳಿಸಿದೆ. ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

2019ರಲ್ಲೂ ಇಂಡೋನೇಷ್ಯಾ ಮತ್ತು ಸಿಂಗಾಪುರದ ನಡುವಿನ ಮಲಕ್ಕಾ ಜಲಸಂಧಿಯ ಬಳಿ ಪತ್ತೆಯಾಗಿದ್ದವು. 2020 ರ ಜನವರಿಯಲ್ಲಿ ದಕ್ಷಿಣ ಇಂಡೋನೇಷ್ಯಾದ ಸುಂಡಾ ದ್ವೀಪದ ಬಳಿಯೂ ಜಲಾಂತರ್ಗಾಮಿ ಡ್ರೋಣ್​ಗಳು ಪತ್ತೆಯಾಗಿದ್ದವು.

ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು