AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್​ ಆತ್ಮಹತ್ಯೆ ಹಿಂದೆ ಸುಪಾರಿ ಗ್ಯಾಂಗ್ ಅಷ್ಟೇ ಅಲ್ಲ, ಹನಿಟ್ರ್ಯಾಪ್ ಗ್ಯಾಂಗ್ ಇದೆ: ಛಲವಾದಿ ನಾರಾಯಣಸ್ವಾಮಿ

ಕಲಬುರಗಿಯಲ್ಲಿ ಸಚಿನ್ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸಿದ್ದಾರೆ. ನ್ಯಾಯಕ್ಕಾಗಿ ಸಿಬಿಐ ತನಿಖೆಗೆ ಆಗ್ರಹಿಸಿದ್ದು, ಪೊಲೀಸರ ಮೇಲೆ ರಾಜಕೀಯ ಒತ್ತಡವಿದೆ ಎಂದು ಆರೋಪಿಸಿದ್ದಾರೆ. ದಲಿತ ನಾಯಕರ ನಿರ್ಲಕ್ಷ್ಯ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಅರಾಜಕತೆಯ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿನ್ ಕುಟುಂಬಕ್ಕೆ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿದ್ದಾರೆ.

ಸಚಿನ್​ ಆತ್ಮಹತ್ಯೆ ಹಿಂದೆ ಸುಪಾರಿ ಗ್ಯಾಂಗ್ ಅಷ್ಟೇ ಅಲ್ಲ, ಹನಿಟ್ರ್ಯಾಪ್ ಗ್ಯಾಂಗ್ ಇದೆ: ಛಲವಾದಿ ನಾರಾಯಣಸ್ವಾಮಿ
ಸಚಿನ್​ ಆತ್ಮಹತ್ಯೆ ಹಿಂದೆ ಸುಪಾರಿ ಗ್ಯಾಂಗ್ ಅಷ್ಟೇ ಅಲ್ಲ, ಹನಿಟ್ರ್ಯಾಪ್ ಗ್ಯಾಂಗ್ ಇದೆ: ಛಲವಾದಿ ನಾರಾಯಣಸ್ವಾಮಿ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 04, 2025 | 3:09 PM

Share

ಕಲಬುರಗಿ, ಜನವರಿ 04: ಸಚಿನ್ ಪಾಂಚಾಳ್​ ಆತ್ಮಹತ್ಯೆ ಕೇಸ್​ ಸಿಬಿಐಗೆ ಕೊಡಬೇಕು. ಅಂದಾಗ ಮಾತ್ರ ನ್ಯಾಯ ಸಿಗುತ್ತೆ. ಇದರ ಹಿಂದೆ ಕೇವಲ ಸುಪಾರಿ ಗ್ಯಾಂಗ್ ಅಷ್ಟೇ ಅಲ್ಲ, ಹನಿಟ್ರ್ಯಾಪ್ ಗ್ಯಾಂಗ್ ಇದೆ. ನಿಮ್ಮಿಂದ ಕಲ್ಯಾಣ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ದಲಿತ ಲೀಡರ್ ತಲೆ ಎತ್ತಿಲ್ಲ. ಯಾವ ದಲಿತ ಲೀಡರ್​ನನ್ನ ಉದ್ಧಾರ ಮಾಡಿದ್ದಿರಿ. ನನ್ನನ್ನು ಕೆಣಕಿದರೆ ನಾನು ಕುಟುಕದೇ ಬಿಡಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ಸಿಗರೇ ನಿಮ್ಮಲ್ಲಿ 3 ಬಾರಿ ಗೆದ್ದ ಅನೇಕ ದಲಿತರು ಶಾಸಕರಿದ್ದಾರೆ. ಅವರನ್ನೇಕೆ ಮಂತ್ರಿ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವವಿದೆ, ಅವರ ಬಗ್ಗೆ ಮಾತನಾಡಲ್ಲ. ಖರ್ಗೆ ಸಾಹೇಬ್ರೆ ನೀವು ಧರ್ಮಸಿಂಗ್ ಅವರು ಸ್ನೇಹಿತರಿದ್ದೀರಿ. ಅವರ ಮಗ ಡಾ.ಅಜಯ್ ಸಿಂಗ್ ಸತತ ಮೂರು ಭಾರಿ ಗೆದ್ದಿದ್ದಾರೆ. ಅವರನ್ನೇಕೆ ಮಂತ್ರಿ ಮಾಡಿಲ್ಲ. ನಿಮ್ಮ ಮಗ ಎಲ್ಲರಿಗಿಂತ ಮೇದಾವಿಯಾ? ಇಲ್ಲಿ ಜಾತಿ, ಧರ್ಮವಿಲ್ಲ ಮಾನವೀಯತೆ ಮುಖ್ಯ. ಸಚಿನ್ ಕಟುಂಬಕ್ಕೆ ನ್ಯಾಯ ಕೊಡಬೇಕು. ನಿಮ್ಮ ಉಸ್ತುವಾರಿಯ ಕಲಬುರಗಿಯಲ್ಲಿ ಅರಾಜಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆಗೆ ಯತ್ನ: ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ

ಪ್ರಿಯಾಂಕ್ ಖರ್ಗೆ ಕಂಡ್ರೆ ಇಲ್ಲಿ‌ನ ಪೊಲೀಸರು ಗಢಗಢ ನಡುಗುತ್ತಾರೆ. ಪ್ರಿಯಾಂಕ್ ಖರ್ಗೆ​ ಅವರೇ ಎಲ್ಲೆಲ್ಲಿ ಹೋರಾಟ ಮಾಡಿದ್ದೀರಿ ತೋರಿಸಿ. ಸಿಎಂ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದ ಸಪೋಟ್೯ ಮಾಡುತ್ತಿದ್ದಾರೆ. ಇಲ್ಲಿ ಸಪೋರ್ಟ್ ಮಾಡಿಲ್ಲ ಅಂದರೆ ಅಲ್ಲಿ ತಮ್ಮ ಕುರ್ಚಿ ಅಲುಗಾಡುತ್ತೆ ಎಂದಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿನ್ ಪಾಂಚಾಳ್​ ಆತ್ಮಹತ್ಯೆ ಕೇಸ್​​ ಸಂಬಂಧ ನ್ಯಾಯ ಕೊಡಿ ಅಂದರೆ ಎಳನೀರು, ಟೀ ಕಾಫಿ ಕೊಡುತ್ತೇವೆ ಅಂತಾರೆ. ನಾವು ನಿಮ್ಮ ಸಂದಾನಕ್ಕೆ ಬಂದಿದ್ದೀವಾ? ನಾಲ್ಕು ಜನರನ್ನು ನಿಲ್ಲಿಸಿ ಎಳನೀರು ಕೊಡ್ತೀವಿ ಅಂತಿರಲ್ಲ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಂದಾಯ ಸಚಿವನಾಗಿದ್ದಾಗ ನಾನು ಸ್ಟ್ಯಾಂಪ್ ಡ್ಯೂಟಿಯನ್ನು ಶೇ. 5ರಷ್ಟು ಕಮ್ಮಿ ಮಾಡಿದ್ದೆ: ಆರ್ ಅಶೋಕ

ಇನ್ನು ಶೆಡ್​ಗೆ ಹೋಗೋಣ ಬಾ ಅಂತಾ ಸಿ.ಟಿ.ರವಿಯನ್ನು ರಾತ್ರಿ ಸುತ್ತಾಡಿಸಿದರು. ಈ ಪ್ರಕರಣದಲ್ಲಿ ಇನ್ನೂ ಯಾರ ಬಂಧನವಾಗಿಲ್ಲ. ಪೊಲೀಸರೇ ನಿಮ್ಮ ಅಧಿಕಾರ ಚಲಾಯಿಸಿ, ಅವರ ಗುಲಾಮಗಿರಿ ಬೇಡ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.