Mexico: ಉತ್ತರ ಅಮೆರಿಕಾದ ಮೆಕ್ಸಿಕೋ ರಾಷ್ಟ್ರದ ಪಶ್ಚಿಮ ಭಾಗಕ್ಕಿರುವ ಜಲಿಸ್ಕೋ (Jalisco) ರಾಜ್ಯದ ಎಲ್ ಸಾಲ್ಟೊ (El Salto) ಹೆಸರಿನ ಪಟ್ಟಣದಲ್ಲಿ ಪೊಲೀಸ್ ಮತ್ತು ಸಶಸ್ತ್ರ ನಾಗರಿಕರ ನಡುವೆ ನಡೆದ ಘರ್ಷಣೆಯು ಕನಿಷ್ಟ 12 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಆ ರಾಜ್ಯದ ಗವರ್ನರ್ ಎನ್ರಿಕ್ ಅಲ್ಫಾರೊ (Enrique Alfaro) ಗುರುವಾರದಂದು ಖಚಿತಪಡಿಸಿದ್ದಾರೆ. ಸತ್ತವರ ಪೈಕಿ ನಾಲ್ವರು ಪೊಲೀಸರು ಸಹ ಸೇರಿದ್ದಾರೆ ಎಂದು ಅಲ್ಫಾರೊ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
‘ಎಲ್ ಸಾಲ್ಟೊ ಪಟ್ಟಣದ ಪೊಲೀಸ್ ಮತ್ತು ರಾಜ್ಯ ಪೊಲೀಸ್ ನಿನ್ನೆ ಅಪರಾಧಿಗಳನ್ನು ಗುಂಡಿಟ್ಟು ಕೊಂದಿದ್ದಾರೆ ಮತ್ತು ಮೂರು ಜನ ಬಹಳ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುರಕ್ಷಿತ ಮನೆಯೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ದಾಳಿ ನಡೆಸಿದರು,’ ಎಂದು ಹೇಳಿರುವ ಅಲ್ಫಾರೊ, ದುರದೃಷ್ಟವಶಾತ್ ಕರ್ತವ್ಯ ಮೇಲಿದ್ದ ಎಲ ಸಾಲ್ಟೊ ಪಟ್ಟಣದ ನಾಲ್ವರು ಪೊಲೀಸರು ಸಹ ಗುಂಡಿನ ಕಾಳಗದಲ್ಲಿ ಪ್ರಾಣ ತೆತ್ತರು,’ ಎಂದಿದ್ದಾರೆ.
Desafortunadamente, en el servicio 4 policías del municipio de El Salto fueron abatidos en el cumplimiento de su deber.
A los familiares de los policías, el compromiso es ayudarles en lo que necesiten. Jalisco reconoce su labor y su servicio por el estado.
— Enrique Alfaro (@EnriqueAlfaroR) June 23, 2022
En un operativo muy importante, la policía de El Salto y la policía del estado abatieron ayer a 8 delincuentes y dejaron tres heridos graves, tras atender el reporte de una casa de seguridad en la que había armamento oculto.
— Enrique Alfaro (@EnriqueAlfaroR) June 23, 2022
ದೊಂಬಿ ಮತ್ತು ಹಿಂಸಾಕೃತ್ಯಗಳಿಂದ ಕಂಗೆಟ್ಟಿದ್ದ ಜಲಿಸ್ಕೊ ರಾಜ್ಯದಲ್ಲಿ ಹತ್ಯೆಗಳು ಕೂಡ ಅವ್ಯಾಹತವಾಗಿ ನಡೆಯಲಾರಂಭಿಸಿದ ಬಳಿಕ ಅಪರಾಧಿ ಚಟುವಟಿಕೆಗಳನ್ನು ತಡೆಯಲು ಮೆಕ್ಸಿಕೋದ ಜಂಟಿ ಟಾಸ್ಕ್ಫೋರ್ಸ್ ಕಾರ್ಯಕ್ರಮದ ಭಾಗವಾಗಿ, ರಾಷ್ಟ್ರೀಯ ರಕ್ಷಣಾ ಸಚಿವಾಲಯವು (ಸೆಡೆನಾ) ಮಾರ್ಚ್ನಲ್ಲಿ ಸೈನಿಕರ ಗುಂಪೊಂದನ್ನು ಅ ಪ್ರದೇಶದಲ್ಲಿ ನಿಯೋಜಿಸಿತ್ತು.
ಜಲಿಸ್ಕೊ ನ್ಯೂ ಜನರೇಶನ್ ಕಾರ್ಟೆಲ್ ಎಂದ ಕರೆಯಲ್ಪಡುವ ಈ ಸೈನಿಕರ ಪಡೆ 2010 ರಲ್ಲಿ ಅಸ್ತಿತ್ವಕ್ಕೆ ಬಂತು. ಇದರ ತುಕುಡಿಗಳು ಮೆಕ್ಸಿಕೋದ ಕನಿಷ್ಟ 7 ರಾಜ್ಯಗಳು ಮತ್ತು ಮೆಕ್ಸಿಕೋ ಸಿಟಿಯಲ್ಲೂ ಕಾಣಬಹುದು.
ಇದನ್ನೂ ಓದಿ: Pushpa 2 Story: ರಾಕಿ ಭಾಯ್ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್? ‘ಕೆಜಿಎಫ್ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ