26/11 ಮುಂಬೈ ಭಯೋತ್ಪಾದಕ ದಾಳಿಯ ಶಂಕಿತ ಮಾಸ್ಟರ್ ಮೈಂಡ್ ಸಾಜಿದ್ ಮಿರ್ ಬಂಧಿಸಿದ ಪಾಕಿಸ್ತಾನ
ಸಾಜಿದ್ ಮಿರ್ ಎಂಬ ವ್ಯಕ್ತಿ ಎಫ್‌ಬಿಐನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದು, ಆತನ ಮೇಲೆ $5 ಮಿಲಿಯನ್ ಬಹುಮಾನ ಘೋಷಿಸಲಾಗಿತ್ತು. ಒಂದು ದಶಕದಿಂದ ಆತನನ್ನು ಅಮೆರಿಕ ಮತ್ತು ಭಾರತ ಹುಡುಕುತ್ತಿದೆ.
ದೆಹಲಿ: 26/11 ಮುಂಬೈ ಭಯೋತ್ಪಾದಕ (26/11 Mumbai terror attack )ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ಸಾಜಿದ್ ಮಿರ್ (Sajid Mir) ಅನ್ನು ಪಾಕಿಸ್ತಾನ (Pakistan) ಬಂಧಿಸಿದೆ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ. ಇದಕ್ಕಿಂತ ಮುನ್ನ ಸಾಜಿದ್ ಮಿರ್ ಅಲ್ಲಿಲ್ಲ ಎಂದು ಹೇಳುತ್ತಲೇ ಇದ್ದ ಪಾಕಿಸ್ತಾನ ಆತ ಸಾವಿಗೀಡಾಗಿದ್ದಾನೆ ಎಂದು ಹೇಳಿತ್ತು. ಸಾಜಿದ್ ಮಿರ್ ಎಂಬ ವ್ಯಕ್ತಿ ಎಫ್‌ಬಿಐನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದು, ಆತನ ಮೇಲೆ $5 ಮಿಲಿಯನ್ ಬಹುಮಾನ ಘೋಷಿಸಲಾಗಿತ್ತು. ಒಂದು ದಶಕದಿಂದ ಆತನನ್ನು ಅಮೆರಿಕ ಮತ್ತು ಭಾರತ ಹುಡುಕುತ್ತಿದೆ. ನವೆಂಬರ್ 2008 ದಾಳಿ ಹಿಂದೆ 10 ಜನರ ತಂಡವು ಅನೇಕ ಗುರಿಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದ್ದು ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (LeT) ನೊಂದಿಗೆ ಮಿರ್ ಸಂಪರ್ಕ ಹೊಂದಿದ್ದಾನೆ. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ ಅಂತರಾಷ್ಟ್ರೀಯ ಭಯೋತ್ಪಾದನೆ-ಹಣಕಾಸಿನ ವೀಕ್ಷಣಾ ಪಟ್ಟಿಯಿಂದ ತನ್ನನ್ನು ತಾನು ಹೊರಹಾಕುವ ಪಾಕಿಸ್ತಾನದ ಬಯಕೆಯಿಂದ ಈ ಪ್ರಕರಣವನ್ನು ಪಾಕ್ ಕೈಗೆತ್ತಿಕೊಂಡಂತೆ ಕಾಣುತ್ತಿದೆ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ. ಇತ್ತೀಚೆಗೆ ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದಲ್ಲಿ ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಹಮ್ಮದ್ ಅಜರ್ ಮತ್ತು ಕಳೆದ ಮೂರು ವರ್ಷಗಳಿಂದ ಬಹುಪಕ್ಷೀಯ ವಾಚ್‌ಡಾಗ್‌ನೊಂದಿಗೆ ಮಾತುಕತೆಗಳ ಉಸ್ತುವಾರಿ ವಹಿಸಿರುವ ವ್ಯಕ್ತಿಯು, ಮಿರ್ ಮತ್ತು ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನಿಕ್ಕಿಗೆ ದೃಢಪಡಿಸಿದ್ದಾರೆ.
ಕಾರ್ಯಪಡೆಯು ಪಾಕಿಸ್ತಾನವನ್ನು ತನ್ನ ಗ್ರೇ ಲಿಸ್ಟ್‌ನಲ್ಲಿ ಇರಿಸಿದ್ದು, ಇದನ್ನು ಅನುಸರಿಸದ ದೇಶಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರತ್ಯೇಕಿಸಲು ಬಳಸಲಾಗುತ್ತದೆ. ಅಂತೆಯೇ,ಹೆಸರು ಹೇಳಲು ಬಯಸದ ಎಫ್‌ಬಿಐ ಅಧಿಕಾರಿಯೊಬ್ಬರು ನಿಕ್ಕಿ ಏಷ್ಯಾದೊಂದಿಗೆ ಮಾತನಾಡುತ್ತಾ, ಮಿರ್ ಪಾಕಿಸ್ತಾನದಲ್ಲಿ “ಜೀವಂತರಾಗಿದ್ದಾರೆ, ಬಂಧನದಲ್ಲಿದ್ದಾರೆ ಮತ್ತು ಶಿಕ್ಷೆಗೆ ಗುರಿಯಾಗಿದ್ದಾರೆ” ಎಂದು ಹೇಳಿದರು.
ಮುಂಬೈ ದಾಳಿಗೆ ಸಂಬಂಧಿಸಿದಂತೆ ವಾಂಟೆಂಡ್ ಸಾಜಿದ್ ಮಿರ್ ಎಂಬ ವ್ಯಕ್ತಿ ಸತ್ತಿದ್ದಾನೆ ಅಥವಾ ಪತ್ತೆಯಾಗಿಲ್ಲ ಎಂದು ಪಾಕಿಸ್ತಾನವು ಬಹಳ ಹಿಂದೆಯೇ ಹೇಳುತ್ತಿದ್ದ ಆ ವ್ಯಕ್ತಿ ಪತ್ತೆಯಾಗಿದ್ದಾನೆ ಎಂದು ಪಾಕಿಸ್ತಾನ ಭಾರತ ಮತ್ತು ಅಮೆರಿಕಕ್ಕೆ ತಿಳಿಸಿದೆ ಎಂದು ಪಾಕಿಸ್ತಾನದ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಫ್‌ಬಿಐ ಪ್ರಕಾರ, ಮಿರ್ ದಾಳಿಯ ಮುಖ್ಯ ಯೋಜಕನಾಗಿದ್ದು, ಸಿದ್ಧತೆ ಕಾಯ್ ನಿರ್ವಹಿಸಿದ್ದನ . ದಾಳಿಯ ಸಮಯದಲ್ಲಿ ಪಾಕಿಸ್ತಾನ ಮೂಲದ ನಿಯಂತ್ರಕರಲ್ಲಿ ಒಬ್ಬನಾಗಿದ್ದ. ಈ ಹಿಂದೆ ಮಿರ್ ಬಂಧನದ ವದಂತಿಗಳು ಕೇಳಿಬಂದಿದ್ದರೂ ಅದನ್ನು ದೃಢಪಡಿಸಿರಲಿಲ್ಲ.