ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಪ್ರತಿಷ್ಠಿತ ಕಂಪ್ಯೂಟರ್ ತಂತ್ರಾಂಶ ತಯಾರಿಕಾ ಕಂಪನಿಯಾದ ಮೈಕ್ರೋಸಾಫ್ಟ್ ಇದೀಗ ಚೀನಾ ಮೂಲದ TikTok ಌಪ್ನ ಅಮರಿಕಾ ವಿಭಾಗವನ್ನ ಖರೀದಿಸಲು ಮುಂದಾಗಿದೆ.
ಮೈಕ್ರೋಸಾಫ್ಟ್ CEO ಸತ್ಯ ನಾಡೆಲ್ಲ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಚರ್ಚೆ ನಡೆದ ನಂತರ ಕಂಪನಿಯು TikTok ಖರೀದಿಯ ಪ್ರಕ್ರಿಯೆಯನ್ನ ಮುಂದುವರಿಸಲು ಸಿದ್ಧ ಎಂದು ತಿಳಿಸಿದೆ.
ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ TikTok ಆ್ಯಪ್ನ ನಿರ್ಬಂಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಜೊತೆಗೆ, ಈ ಮುಂಚೆಯೂ ಅಧ್ಯಕ್ಷ ಟ್ರಂಪ್ TikTok ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವುದರ ಬಗ್ಗೆ ಸಿದ್ಧರಾಗಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ರು.
ಸದ್ಯ, TikTok ಌಪ್ ಮಾಲೀಕರಾದ ಚೀನಾ ಮೂಲದ ಬೈಟ್‌ಡ್ಯಾನ್ಸ್ ಕಂಪನಿಯೊಂದಿಗೆ ಮಾತುಕತೆ ಮುಂದುವರಿಸುವುದಾಗಿ ಮೈಕ್ರೋಸಾಫ್ಟ್ ತಿಳಿಸಿದೆ.
Microsoft says to keep exploring TikTok purchase after talks with US President Donald Trump: AFP news agency pic.twitter.com/xd3vksvhwn
— ANI (@ANI) August 3, 2020
Published On - 10:33 am, Mon, 3 August 20