ಬಕ್ರೀದ್ ದಿನ 6ನೇ ಮಹಡಿಯಿಂದ ಕೆಳಕ್ಕೆ ಬಿದ್ದು ‘ಕೋಗಿಲೆ’ ಸಾವು, ಎಲ್ಲಿ?
ಬಕ್ರೀದ್ ಹಬ್ಬದಂದು ಅಪಾರ್ಟ್ಮೆಂಟ್ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್ ಸುಮೇಶ್ ಅಲಿಯಾಸ್ Cuckoo (ಕೋಗಿಲೆ) ಮೃತ ದುರ್ದೈವಿ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್ ಕಳೆದ ಶುಕ್ರವಾರ ಮೊಬೈಲ್ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ […]
ಬಕ್ರೀದ್ ಹಬ್ಬದಂದು ಅಪಾರ್ಟ್ಮೆಂಟ್ನ ಆರನೇ ಮಹಡಿಯಿಂದ ಬಿದ್ದು ಅನಿವಾಸಿ ಭಾರತೀಯನೊಬ್ಬ ಸಾವನ್ನಪ್ಪಿರೋ ಘಟನೆ UAEನ ಶಾರ್ಜಾದಲ್ಲಿ ನಡೆದಿದೆ. ಕೇರಳ ಮೂಲದ 24 ವರ್ಷದ ಇಂಜಿನಿಯರ್ ಸುಮೇಶ್ ಅಲಿಯಾಸ್ Cuckoo (ಕೋಗಿಲೆ) ಮೃತ ದುರ್ದೈವಿ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮೇಶ್ ಕಳೆದ ಶುಕ್ರವಾರ ಮೊಬೈಲ್ನಲ್ಲಿ ಮಾತನಾಡುತ್ತಿದನಂತೆ. ಇದಾದ ಬಳಿಕ ಫೋನ್ ಕೆಳಕ್ಕೆ ಬಿಸಾಡಿದ್ದನಂತೆ. ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಸುಮೇಶ್ನ ಜೊತೆ ವಾಸವಿದ್ದ ಸ್ನೇಹಿತರು ಹೇಳುವ ಪ್ರಕಾರ ಬಕ್ರೀದ್ ಹಬ್ಬದಂದು ಆತ ನಮ್ಮೊಟ್ಟಿಗೆ ಖುಷಿ ಖುಷಿಯಾಗೇ ಮಾತಾಡಿದ್ದ. ಎಲ್ಲರೂ ಸೇರಿ ಹಬ್ಬದ ಸ್ಪೆಷಲ್ ಬಿರಿಯಾನಿ ಸಹ ಸವಿದಿದ್ದೆವು ಎಂದು ಹೇಳಿದ್ದಾರೆ.
ಜೊತೆಗೆ, ಸುಮೇಶ್ಗೆ ವೈಯಕ್ತಿಕ ಸಮಸ್ಯೆಗಳು ಇತ್ತು ಎಂದು ಕೆಲವೊಮ್ಮೆ ಅನ್ನಿಸಿತ್ತು. ಈ ಬಗ್ಗೆ ಅವನನ್ನ ಕೇಳಿದಾಗ ಏನೂ ಸಮಸ್ಯೆಯಿಲ್ಲ ಎಂದು ನಮ್ಮ ಮಾತನ್ನು ತಳ್ಳಿಹಾಕಿದ್ದ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.