TikTok ಬ್ಯಾನ್ ಬೆದರಿಕೆ! ಅಮೆರಿಕದಲ್ಲಿ ಅದನ್ನ ಯಾರು ಖರೀದಿಸುತ್ತಿದ್ದಾರೆ ನೋಡಿ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಪ್ರತಿಷ್ಠಿತ ಕಂಪ್ಯೂಟರ್​ ತಂತ್ರಾಂಶ ತಯಾರಿಕಾ ಕಂಪನಿಯಾದ ಮೈಕ್ರೋಸಾಫ್ಟ್ ಇದೀಗ ಚೀನಾ ಮೂಲದ TikTok ಌಪ್​ನ ಅಮರಿಕಾ ವಿಭಾಗವನ್ನ ಖರೀದಿಸಲು ಮುಂದಾಗಿದೆ. ಮೈಕ್ರೋಸಾಫ್ಟ್ CEO ಸತ್ಯ ನಾಡೆಲ್ಲ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಚರ್ಚೆ ನಡೆದ ನಂತರ ಕಂಪನಿಯು TikTok ಖರೀದಿಯ ಪ್ರಕ್ರಿಯೆಯನ್ನ  ಮುಂದುವರಿಸಲು ಸಿದ್ಧ ಎಂದು ತಿಳಿಸಿದೆ. ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ TikTok ಆ್ಯಪ್​ನ ನಿರ್ಬಂಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಜೊತೆಗೆ, […]

TikTok ಬ್ಯಾನ್ ಬೆದರಿಕೆ! ಅಮೆರಿಕದಲ್ಲಿ ಅದನ್ನ ಯಾರು ಖರೀದಿಸುತ್ತಿದ್ದಾರೆ ನೋಡಿ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Aug 03, 2020 | 11:14 AM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಪ್ರತಿಷ್ಠಿತ ಕಂಪ್ಯೂಟರ್​ ತಂತ್ರಾಂಶ ತಯಾರಿಕಾ ಕಂಪನಿಯಾದ ಮೈಕ್ರೋಸಾಫ್ಟ್ ಇದೀಗ ಚೀನಾ ಮೂಲದ TikTok ಌಪ್​ನ ಅಮರಿಕಾ ವಿಭಾಗವನ್ನ ಖರೀದಿಸಲು ಮುಂದಾಗಿದೆ.

ಮೈಕ್ರೋಸಾಫ್ಟ್ CEO ಸತ್ಯ ನಾಡೆಲ್ಲ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಚರ್ಚೆ ನಡೆದ ನಂತರ ಕಂಪನಿಯು TikTok ಖರೀದಿಯ ಪ್ರಕ್ರಿಯೆಯನ್ನ  ಮುಂದುವರಿಸಲು ಸಿದ್ಧ ಎಂದು ತಿಳಿಸಿದೆ.

ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ TikTok ಆ್ಯಪ್​ನ ನಿರ್ಬಂಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಜೊತೆಗೆ, ಈ ಮುಂಚೆಯೂ ಅಧ್ಯಕ್ಷ ಟ್ರಂಪ್ TikTok ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವುದರ ಬಗ್ಗೆ ಸಿದ್ಧರಾಗಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ರು.

ಸದ್ಯ, TikTok ಌಪ್​ ಮಾಲೀಕರಾದ ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಕಂಪನಿಯೊಂದಿಗೆ ಮಾತುಕತೆ ಮುಂದುವರಿಸುವುದಾಗಿ ಮೈಕ್ರೋಸಾಫ್ಟ್ ತಿಳಿಸಿದೆ.

Published On - 10:33 am, Mon, 3 August 20