ಇಡೀ ವಿಶ್ವದ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸಲು ಯತ್ನಿಸುತ್ತಿರುವ ಚೀನಾ ಸ್ವತಃ ತನ್ನ ದೇಶದಲ್ಲಿ ನೆಲೆಸಿರುವ ಮುಸ್ಲಿಮರ ಮೇಲೂ ದಬ್ಬಾಳಿಕೆ ನಡೆಸಲು ಮುಂದಾಗಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.
ಜಾಗತಿಕ ಸಂವಹನ ತಂತ್ರಜ್ಞಾನದ ಮೇಲೆ ಪ್ರಾಬಲ್ಯ ಸಾಧಿಸಲು ಚೀನಾ ಮುಂದಾಗಿದೆ. ಜೊತೆಗೆ, ಚೀನಾದಲ್ಲಿ ಮುಸ್ಲಿಮರ ಜನಸಂಖ್ಯಾ ನಿಗ್ರಹಕ್ಕೆ ಬಲವಂತವಾಗಿ ಗರ್ಭಪಾತ ಮಾಡಿಸುತ್ತಿರುವ ಬಗ್ಗೆ ವರದಿ ಓದಿದ್ದೇನೆ ಎಂದು ಪಾಂಪಿಯೋ ಹೇಳಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಅಂತಾ ಸಹ ಹೇಳಿಕೆ ನೀಡಿದ್ದಾರೆ.
ಇದಲ್ಲದೆ, ಚೀನಾ ಹಾಂಗ್ಕಾಂಗ್ನ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡ್ತಿದೆ. ಜೊತೆಗೆ ನೆರೆಯ ರಾಷ್ಟ್ರ ತೈವಾನ್‌ಗೂ ಬೆದರಿಕೆ ಹಾಕ್ತಿದೆ ಎಂದು ಚೀನಾದ ಕಮ್ಯೂನಿಸ್ಟ್ ಪಕ್ಷದ ವಿರುದ್ಧ ಪಾಂಪಿಯೋ ಕಿಡಿ ಕಾರಿದ್ದಾರೆ.
Published On - 7:55 am, Sat, 18 July 20