ಅಮೆರಿಕ: ಪೊಲೀಸ್ ವೇಷದಲ್ಲಿ ಬಂದು ಇಬ್ಬರು ರಾಜಕಾರಣಿಗಳ ಮೇಲೆ ಗುಂಡು ಹಾರಿಸಿದ ಹಂತಕ, ಓರ್ವ ಸಾವು

ಅಮೆರಿಕದ ಮಿನ್ನೇಸೋಟದಲ್ಲಿ ಇಬ್ಬರು ರಾಜಕಾರಣಿಗಳ ಮೇಲೆ ಹಂತಕನೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಮಿನ್ನೇಸೋಟದ ಡೆಮಾಕ್ರಟಿಕ್ ಸೆನೆಟರ್ ಜಾನ್ ಹಾಫ್‌ಮನ್ ಮತ್ತು ಡೆಮಾಕ್ರಟಿಕ್ ಪ್ರತಿನಿಧಿ ಮೆಲಿಸ್ಸಾ ಹಾರ್ಟ್‌ಮನ್ ಅವರ ಮೇಲೆ ರಾತ್ರಿ ಪೊಲೀಸ್ ಅಧಿಕಾರಿಯಂತೆ ಬಂದು ಗುಂಡು ಹಾರಿಸಿದ್ದಾನೆ.ಮಿನ್ನೇಸೋಟ ಗವರ್ನರ್ ವಾಲ್ಜ್ ಅವರು ಡೆಮಾಕ್ರಟಿಕ್ ಪ್ರತಿನಿಧಿ ಮೆಲಿಸ್ಸಾ ಹಾರ್ಟ್‌ಮನ್ ಮತ್ತು ಅವರ ಪತಿಯನ್ನು ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.

ಅಮೆರಿಕ: ಪೊಲೀಸ್ ವೇಷದಲ್ಲಿ ಬಂದು ಇಬ್ಬರು ರಾಜಕಾರಣಿಗಳ ಮೇಲೆ ಗುಂಡು ಹಾರಿಸಿದ ಹಂತಕ, ಓರ್ವ ಸಾವು
ಅಮೆರಿಕ ರಾಜಕಾರಣಿಗಳು

Updated on: Jun 15, 2025 | 8:18 AM

ವಾಷಿಂಗ್ಟನ್, ಜೂನ್ 15: ಅಮೆರಿಕದ ಮಿನ್ನೇಸೋಟದಲ್ಲಿ ಇಬ್ಬರು ರಾಜಕಾರಣಿಗಳ ಮೇಲೆ ಹಂತಕನೊಬ್ಬ ಗುಂಡಿನ ದಾಳಿ(Firing) ನಡೆಸಿರುವ ಘಟನೆ ವರದಿಯಾಗಿದೆ. ಮಿನ್ನೇಸೋಟದ ಡೆಮಾಕ್ರಟಿಕ್ ಸೆನೆಟರ್ ಜಾನ್ ಹಾಫ್‌ಮನ್ ಮತ್ತು ಡೆಮಾಕ್ರಟಿಕ್ ಪ್ರತಿನಿಧಿ ಮೆಲಿಸ್ಸಾ ಹಾರ್ಟ್‌ಮನ್ ಅವರ ಮನೆಯೊಳಗೆ ರಾತ್ರಿ ಪೊಲೀಸ್ ಅಧಿಕಾರಿಯಂತೆ ಬಂದು ಗುಂಡು ಹಾರಿಸಿದ್ದಾನೆ.

ಮಿನ್ನೇಸೋಟ ಗವರ್ನರ್ ವಾಲ್ಜ್ ಅವರು ಡೆಮಾಕ್ರಟಿಕ್ ಪ್ರತಿನಿಧಿ ಮೆಲಿಸ್ಸಾ ಹಾರ್ಟ್‌ಮನ್ ಮತ್ತು ಅವರ ಪತಿಯನ್ನು ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ. ಗವರ್ನರ್ ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕೊಲೆಯ ಹಿಂದಿನ ಉದ್ದೇಶವೇನು ಮತ್ತು ಅಪರಾಧವನ್ನು ಯಾಕೆ ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಶಂಕಿತ ವ್ಯಕ್ತಿ ಮನೆಗೆ ಪ್ರವೇಶಿಸಲು ತನ್ನನ್ನು ಪೊಲೀಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ. ಮಿನ್ನೇಸೋಟದಲ್ಲಿ ನಡೆದ ಡೆಮಾಕ್ರಟಿಕ್ ನಾಯಕನ ಹತ್ಯೆಯು ಈ ಪ್ರದೇಶದ ನಾಯಕರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಅಮೆರಿಕದಾದ್ಯಂತ ಚುನಾಯಿತ ಪಕ್ಷದ ನಾಯಕರಿಗೆ ಈಗಾಗಲೇ ಬೆದರಿಕೆ ಇರುವ ಸಮಯದಲ್ಲಿ ಈ ಕೊಲೆ ನಡೆದಿದೆ. ಪೊಲೀಸ್‌ ಡ್ರೆಸ್‌ನಲ್ಲೇ ಸುತ್ತಾಡುತ್ತಿದ್ದ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ಆಸ್ಟ್ರಿಯಾದ ಗ್ರಾಜ್ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ; 8 ಜನ ಸಾವು, ಹಲವರಿಗೆ ಗಾಯ

ಈ ದಾಳಿಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಮಿನ್ನೇಸೋಟ ಪೊಲೀಸ್‌ ಮುಖ್ಯಸ್ಥರು ಶಂಕಿತನ ಕಾರಿನಲ್ಲಿದ್ದ ಪ್ಲ್ಯಾನಿಂಗ್‌ ಹಿಟ್‌ಲಿಸ್ಟ್‌ನ್ನು ಪತ್ತೆಹಚ್ಚಿದ್ದಾರೆ. ಈ ಲಿಸ್ಟ್‌ನಲ್ಲಿ ಹಲವು ಶಾಸಕರು ಹಾಗೂ ಜನಪ್ರತಿನಿಧಿಗಳ ಹೆಸರು ಇರುವುದು ಕಂಡುಬಂದಿದೆ. ಸಂಭಾವ್ಯ ದಾಳಿ ನಡೆಸಲು ದುಷ್ಕರ್ಮಿ ಹೆಸರು ಪಟ್ಟಿ ಮಾಡಿರುವುದು ತಿಳಿದುಬಂದಿದೆ.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ದೇಶಾದ್ಯಂತ ಡೆಮಾಕ್ರಟಿಕ್ ನಾಯಕರಿಗೆ ಅನೇಕ ಸ್ಥಳಗಳಲ್ಲಿ ಬೆದರಿಕೆ ಮತ್ತು ದಾಳಿಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ನಾಯಕರು ಹೆಚ್ಚು ಭಯಭೀತರಾಗಲು ಪ್ರಾರಂಭಿಸಿದ್ದಾರೆ. ಡೆಮಾಕ್ರಟಿಕ್ ಜಾನ್ ಹಾಫ್‌ಮನ್ ಮೊದಲ ಬಾರಿಗೆ 2012 ರಲ್ಲಿ ರಾಜ್ಯ ಸೆನೆಟ್‌ಗೆ ಆಯ್ಕೆಯಾದರು. ಇದಲ್ಲದೆ, ಅವರು ಅನೋಕಾ-ಹೆನ್ನೆಪಿನ್ ಶಾಲಾ ಮಂಡಳಿಯ ಮಾಜಿ ಉಪಾಧ್ಯಕ್ಷ ಮತ್ತು ಸಲಹೆಗಾರರೂ ಆಗಿದ್ದಾರೆ.

ಮಿನ್ನೇಸೋಟದಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಬಗ್ಗೆ ನನಗೆ ಮಾಹಿತಿ ನೀಡಲಾಗಿದೆ, ಇದು ರಾಜ್ಯದ ಶಾಸಕರ ವಿರುದ್ಧದ ಗುರಿಯಿಟ್ಟು ನಡೆಸಲಾದ ದಾಳಿಯಂತೆ ಕಾಣುತ್ತದೆ ಎಂದು ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ಇಂತಹ ಭಯಾನಕ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:17 am, Sun, 15 June 25