AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರಿಯಾದ ಗ್ರಾಜ್ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ; 8 ಜನ ಸಾವು, ಹಲವರಿಗೆ ಗಾಯ

ಆಸ್ಟ್ರಿಯಾದ ಗ್ರಾಜ್‌ನ ಶಾಲೆಯೊಂದರಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗ್ರಾಜ್‌ನ BORG ಡ್ರೀಯರ್‌ಸ್ಚುಟ್ಜೆಂಗಾಸ್ಸೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಇದು ಆಸ್ಟ್ರಿಯಾದ ಅತ್ಯಂತ ಭಯಾನಕ ಶಾಲಾ ದುರಂತಗಳಲ್ಲಿ ಒಂದಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಗುಂಡಿನ ದಾಳಿ ನಡೆಸಿದ ನಂತರ ಶಾಲೆಯಲ್ಲಿ ವಿಶೇಷ ಪಡೆಗಳನ್ನು ನಿಯೋಜಿಸಲಾಯಿತು.

ಆಸ್ಟ್ರಿಯಾದ ಗ್ರಾಜ್ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ; 8 ಜನ ಸಾವು, ಹಲವರಿಗೆ ಗಾಯ
Austria Police
ಸುಷ್ಮಾ ಚಕ್ರೆ
|

Updated on:Jun 10, 2025 | 4:46 PM

Share

ನವದೆಹಲಿ, ಜೂನ್ 10: ಆಸ್ಟ್ರಿಯಾದ ಗ್ರಾಜ್ (Graz School Attack) ನಗರದ ಮಾಧ್ಯಮಿಕ ಶಾಲೆಯಲ್ಲಿ ಇಂದು ನಡೆದ ಗುಂಡಿನ ದಾಳಿಯಲ್ಲಿ (Firing)  8 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಘಟನೆಯನ್ನು “ಭಯಾನಕ ದುರಂತ” ಎಂದು ಬಣ್ಣಿಸಿರುವ ನಗರದ ಮೇಯರ್ ಗುಂಡು ಹಾರಿಸಿದ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ಬಿಬಿಸಿಯ ವರದಿಯ ಪ್ರಕಾರ, ಗ್ರಾಜ್​ ನಗರದ ಡ್ರೀಯರ್‌ಸ್ಚುಟ್ಜೆಂಗಾಸ್ಸೆ ಪ್ರೌಢಶಾಲೆಯಲ್ಲಿ ಸಾವನ್ನಪ್ಪಿದವರಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಸೇರಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಗುಂಡಿನ ದಾಳಿ ನಡೆಸಿದ ನಂತರ ಶಾಲೆಯಲ್ಲಿ ವಿಶೇಷ ಪಡೆಗಳನ್ನು ನಿಯೋಜಿಸಲಾಯಿತು. ಡ್ರೈಯರ್‌ಸ್ಚುಟ್ಜೆಂಗಾಸ್ಸೆ ಪ್ರದೇಶದ ಬಳಿ ಸಮಚರಿಸದಂತೆ ಸಾರ್ವಜನಿಕರಿಗೆ ತಿಳಿಸಲಾಯಿತು.

ಇದನ್ನೂ ಓದಿ: Russia-Ukraine War: ಯುದ್ಧ ಶುರುವಾದಾಗಿನಿಂದ ಅತಿ ದೊಡ್ಡ ದಾಳಿ; ರಾತ್ರೋರಾತ್ರಿ ಉಕ್ರೇನ್ ಮೇಲೆ 479 ಡ್ರೋನ್ ಹಾರಿಸಿದ ರಷ್ಯಾ

ಗ್ರಾಜ್‌ನ BORG ಡ್ರೀಯರ್‌ಸ್ಚುಟ್ಜೆಂಗಾಸ್ಸೆಯಲ್ಲಿ ನಡೆದ ಶಾಲಾ ಗುಂಡಿನ ದಾಳಿಯಲ್ಲಿ 8 ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದನ್ನು ಅಧಿಕಾರಿಗಳು ಇತ್ತೀಚಿನ ಆಸ್ಟ್ರಿಯನ್ ಇತಿಹಾಸದಲ್ಲಿ ಅತ್ಯಂತ ದುರಂತ ಘಟನೆಗಳಲ್ಲಿ ಒಂದೆಂದು ಕರೆದಿದ್ದಾರೆ.

ದೇಶದ ಎರಡನೇ ಅತಿದೊಡ್ಡ ನಗರವಾದ ಗ್ರಾಜ್‌ನಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದಾಳಿ ಸಂಭವಿಸಿದೆ. ಪೊಲೀಸರು ಶೀಘ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬಳಿಕ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಶಂಕಿತ ಶೂಟರ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಎಂದು ಹೇಳಲಾಗಿದೆ. ಅವನು ಕೂಡ ಸಾವನ್ನಪ್ಪಿದ್ದಾನೆ. ಆತ ತನ್ನ ಪ್ರಾಣವನ್ನು ತೆಗೆದುಕೊಳ್ಳುವ ಮೊದಲು ಹಲವಾರು ಬಂದೂಕುಗಳನ್ನು ಬಳಸಿ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ನಂತರ ಕಟ್ಟಡದೊಳಗಿನ ಟಾಯ್ಲೆಟ್​​ನಲ್ಲಿ ಅವನ ದೇಹವು ಪತ್ತೆಯಾಗಿದೆ.

ಇದನ್ನೂ ಓದಿ: ಸಿಂಗಾಪುರ ಹಡಗಿನಲ್ಲಿ ಅಗ್ನಿ ಅವಘಡ: ಭಾರತೀಯ ನೌಕಾಪಡೆಯಿಂದ ರಕ್ಷಣೆ, ಗಾಯಾಳುಗಳು ಮಂಗಳೂರಿಗೆ ಶಿಫ್ಟ್​

ಈ ಘಟನೆಯು ಸುಮಾರು 3,00,000 ನಿವಾಸಿಗಳ ನೆಲೆಯಾದ ಗ್ರಾಜ್ ನಗರವನ್ನು ಆಘಾತಗೊಳಿಸಿದೆ. 2015ರಲ್ಲಿ ಈ ನಗರದಲ್ಲಿ ನಡೆದ ಮಾರಕ ಗಲಭೆಯ 10ನೇ ವಾರ್ಷಿಕೋತ್ಸವದ ಕೆಲವೇ ದಿನಗಳ ಮೊದಲು ಈ ದಾಳಿ ನಡೆದಿದೆ. ಈ ದಾಳಿಯು ಆಸ್ಟ್ರಿಯಾದ ಇತ್ತೀಚಿನ ಇತಿಹಾಸದಲ್ಲಿ ಶಾಲಾ ಗುಂಡಿನ ದಾಳಿಗಳಲ್ಲಿ ಬಹಳ ದೊಡ್ಡದಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:39 pm, Tue, 10 June 25