ಪಾಕಿಸ್ತಾನದಲ್ಲಿದ್ದ ಸಿದ್ಧಿವಿನಾಯಕ ದೇಗುಲ ಧ್ವಂಸ; ವಿಗ್ರಹವನ್ನು ತೆಗೆದು, ಸುಟ್ಟ ಗುಂಪು

| Updated By: Lakshmi Hegde

Updated on: Aug 05, 2021 | 3:29 PM

Hindu Temple: ಪಂಜಾಬ್​ ಪ್ರಾಂತ್ಯದ ರಹೀಮ್​ ಖಾನ್ ಯಾರ್​ ಖಾನ್​ ಜಿಲ್ಲೆಯಲ್ಲಿರುವ, ಭೋಂಗ್​ ನಗರದಲ್ಲಿ ಈ ಸಿದ್ಧಿವಿನಾಯಕ ದೇವಸ್ಥಾನ ಇತ್ತು.

ಪಾಕಿಸ್ತಾನದಲ್ಲಿದ್ದ ಸಿದ್ಧಿವಿನಾಯಕ ದೇಗುಲ ಧ್ವಂಸ; ವಿಗ್ರಹವನ್ನು ತೆಗೆದು, ಸುಟ್ಟ ಗುಂಪು
ದೇಗುಲ ಧ್ವಂಸ
Follow us on

ದೆಹಲಿ: ಪಾಕಿಸ್ತಾನ (Pakistan) ದಲ್ಲಿ ಹಿಂದೂ ದೇವಾಲಯ (Hindu Temple) ಗಳನ್ನು ನಾಶಗೊಳಿಸುವುದು ಹೊಸದಲ್ಲ. ಇದೀಗ ಮತ್ತೊಂದು ಸಿದ್ಧಿವಿನಾಯಕ ದೇವಸ್ಥಾನವನ್ನು ಮುಸ್ಲಿಮರ ಗುಂಪೊಂದು ಧ್ವಂಸಗೊಳಿಸಿದ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದೆ. ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿರುವ ದೇಗುಲ ಇದಾಗಿದ್ದು, ಇಲ್ಲಿದ್ದ ದೇವರ ವಿಗ್ರಹವನ್ನು ಅಪವಿತ್ರಗೊಳಿಸಿದ್ದಲ್ಲೆ, ಅದನ್ನು ಭಾಗಶಃ ಸುಟ್ಟುಹಾಕಲಾಗಿದೆ.

ರಹೀಮ್​ ಖಾನ್ ಯಾರ್​ ಖಾನ್​ ಜಿಲ್ಲೆಯಲ್ಲಿರುವ, ಭೋಂಗ್​ ನಗರದಲ್ಲಿ ಈ ಸಿದ್ಧಿವಿನಾಯಕ ದೇವಸ್ಥಾನ ಇತ್ತು. ಲಾಹೋರ್​​​ನಲ್ಲಿರುವ ಮುಸ್ಲಿಮರಿಗೆ ಸಂಬಂಧಪಟ್ಟ ಸಂಸ್ಥೆಯನ್ನೊಂದು ನಾಶಗೊಳಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಹೀಗೆ ಸಿದ್ಧಿವಿನಾಯಕ ದೇಗುಲ ನಾಶಗೊಳಿಸಿದ್ದಾಗಿ ಆ ಗುಂಪು ಹೇಳಿಕೊಂಡಿದೆ. ಈ ಸಂಸ್ಥೆಯನ್ನು ಧ್ವಂಸ ಮಾಡಿದ ವಿಡಿಯೋ ವೈರಲ್​ ಆದ ಬೆನ್ನಲ್ಲೇ, ಭೋಂಗ್​ ​​ನಗರದ ಜನರು ರೊಚ್ಚಿಗೆದ್ದಿದ್ದಾರೆ. ಕೈಯಲ್ಲಿ ಕಬ್ಬಿಣದ ರಾಡ್​, ಕೋಲು, ಕಲ್ಲುಗಳನ್ನು ಹಿಡಿದುಕೊಂಡು ಸಿದ್ಧಿವಿನಾಯಕ ದೇಗುಲಕ್ಕೆ ನುಗ್ಗಿ, ಎಲ್ಲವನ್ನೂ ಹಾಳುಗೆಡವಿದ್ದಾರೆ.

ಇನ್ನು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಪಾಕಿಸ್ತಾನ ರೇಂಜರ್ಸ್​​ನ್ನು ರಕ್ಷಣೆಗೆ ನಿಯೋಜಿಸಲಾಗಿದೆ. ದೇಗುಲ ಇರುವ ಸುತ್ತಮುತ್ತ 100 ಹಿಂದೂ ಕುಟುಂಬಗಳು ಇದ್ದು, ಅವರೀಗ ಅಪಾಯದಲ್ಲಿದ್ದಾರೆ. ಎಲ್ಲ ರೀತಿಯ ಭದ್ರತಾ ಕ್ರಮಗಳನ್ನೂ ವಹಿಸಲಾಗಿದೆ ಎಂದೂ ಸ್ಥಳೀಯ ಸರ್ಕಾರ ತಿಳಿಸಿದೆ. ಇನ್ನು ವಿಡಿಯೋ ಶೇರ್​ ಮಾಡಿಕೊಂಡಿರುವ ಪಾಕಿಸ್ತಾನ ತೆಹ್ರೀಕ್​ ಐ ಇನ್​ಸಾಫ್​ ಪಕ್ಷದ ಸಂಸದ ಡಾ. ರಮೇಶ್​ ಕುಮಾರ್ ವಂಕ್ವಾನಿ, ದಯವಿಟ್ಟು ದೇಗುಲ ಧ್ವಂಸಗೊಳಿಸುತ್ತಿರುವುದನ್ನು ತಡೆಯಿರಿ. ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Tokyo Olympics: ಇದು ಐತಿಹಾಸಿಕ ಕ್ಷಣ ಪ್ರತಿಯೊಬ್ಬ ಭಾರತೀಯನ ನೆನಪಲ್ಲಿ ಉಳಿಯುವಂತಹ ದಿನ: ಪ್ರಧಾನಿ ಮೋದಿ

‘ಮೆಂತ್ಯೆ ಸೊಪ್ಪಿನ ಸ್ಪೆಷಲ್​ ಬಜ್ಜಿ‘ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ರುಚಿ ಸವಿಯಿರಿ

Published On - 9:44 am, Thu, 5 August 21