ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ಇಟ್ಟ ಪಾಕಿಸ್ತಾನ ಸರ್ಕಾರ; ಬಂಗಲೆ ಬಿಟ್ಟ ಇಮ್ರಾನ್ ಖಾನ್​

ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ಇಟ್ಟ ಪಾಕಿಸ್ತಾನ ಸರ್ಕಾರ; ಬಂಗಲೆ ಬಿಟ್ಟ ಇಮ್ರಾನ್ ಖಾನ್​
ಪಾಕಿಸ್ತಾನ ಪ್ರಧಾನಿಯ ಸರ್ಕಾರಿ ಬಂಗಲೆ

ಪಾಕ್​ನಲ್ಲಿ ವಸಹಾತುಶಾಹಿ ಸಂಸ್ಕೃತಿ ಹೋಗಲಾಡಿಸಲು ಮತ್ತು ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಾಜ್ಯಪಾಲರುಗಳು ಇನ್ನುಮುಂದೆ ರಾಜಭವನಗಳಲ್ಲಿ ವಾಸಿಸುವಂತಿಲ್ಲ ಎಂದೂ ಸರ್ಕಾರ ಹೇಳಿತ್ತು.

TV9kannada Web Team

| Edited By: Lakshmi Hegde

Aug 04, 2021 | 11:28 AM

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ (Imran Khan) ​ರ ಸರ್ಕಾರಿ ನಿವಾಸವೀಗ ಬಾಡಿಗೆಗೆ ಇದೆ..! ಈ ನಿವಾಸ ಇಸ್ಲಮಾಬಾದ್​​ನ ರೆಡ್ ಝೋನ್​ ಏರಿಯಾದಲ್ಲಿದೆ. ಹಾಗೇ ಇದನ್ನು ಬಾಡಿಗೆಗೆ ಕೊಡುವ ಬಗ್ಗೆ ​ ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟಟ್​​ನಲ್ಲಿ ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನ ಸರ್ಕಾರ (Pakistan government) ಕ್ಕೀಗ ಹಣದ ಕೊರತೆ (Shortage Of Money) ತೀವ್ರವಾಗಿದೆ. ಅದನ್ನು ನೀಗಿಸಲು, ಆದಾಯದ ಮೂಲವಾಗಿ ಈ ಸರ್ಕಾರಿ ನಿವಾಸವನ್ನು ಬಾಡಿಗೆಗೆ ಕೊಡಲಾಗುವುದು ಎಂದು ಕ್ಯಾಬಿನೆಟ್​ ತಿಳಿಸಿದೆ. ಅಷ್ಟಕ್ಕೂ ಬಾಡಿಗೆಗೆ ಕೊಡುತ್ತಿರುವುದು ಇನ್ಯಾರೋ ಉಳಿದುಕೊಳ್ಳಲು ಅಲ್ಲ. ಸಾಂಸ್ಕೃತಿಕ, ಫ್ಯಾಷನ್, ಶೈಕ್ಷಣಿಕ ಸೇರಿ ಇನ್ಯಾವುದೇ ತೆರನಾದ ಸಮಾರಂಭಗಳನ್ನು ನಡೆಸಲು ಬಾಡಿಗೆ ಕೊಡಲಾಗುವುದು ಎಂದೂ ಹೇಳಿದೆ.

ಹೀಗೆ ಯಾವುದೇ ಸಮಾರಂಭಗಳನ್ನು ನಡೆಸಲು, ಪ್ರಧಾನಿ ಇಮ್ರಾನ್​ ಖಾನ್​ ನಿವಾಸವನ್ನು ಬಾಡಿಗೆ ಕೊಡುವ ಸಂದರ್ಭದಲ್ಲಿ ಅಲ್ಲಿನ ಶಿಸ್ತು-ಶಿಷ್ಟಾಚಾರಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು, ನಿರ್ವಹಣೆ ಮಾಡಲು ಎರಡು ಸಮಿತಿಯನ್ನು ರಚಿಸಲಾಗಿದೆ ಎಂದೂ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಮಂತ್ರಿ ಇಮ್ರಾನ್​ ಖಾನ್​ರ ಸರ್ಕಾರಿ ನಿವಾಸವನ್ನು ಅತ್ಯಾಧುನಿಕ ಶಿಕ್ಷಣ ಸಂಸ್ಥೆಯನ್ನಾಗಿ ಮಾರ್ಪಾಡಿಸುವ ಯೋಜನೆ ಇದೆ ಎಂದು ಮೊದಲ ಬಾರಿಗೆ 2019ರ ಆಗಸ್ಟ್​​ನಲ್ಲಿ, ಪಾಕಿಸ್ತಾನ ತೆಹ್ರೀಕ್​-ಇ-ಇನ್​ಸಾಫ್​ ಸರ್ಕಾರ ಹೇಳಿತ್ತು.

ಹಾಗೇ, ಪಾಕ್​ನಲ್ಲಿ ವಸಹಾತುಶಾಹಿ ಸಂಸ್ಕೃತಿ ಹೋಗಲಾಡಿಸಲು ಮತ್ತು ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಾಜ್ಯಪಾಲರುಗಳು ಇನ್ನುಮುಂದೆ ರಾಜಭವನಗಳಲ್ಲಿ ವಾಸಿಸುವಂತಿಲ್ಲ ಎಂದೂ ಸರ್ಕಾರ ಹೇಳಿತ್ತು. ಅದೇ ಸಮಯದಲ್ಲಿ ಇಮ್ರಾನ್ ಖಾನ್​ ಕೂಡ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದು, ಇಸ್ಲಮಾಬಾದ್​ನಲ್ಲಿರುವ ಬನಿ ಗಾಲಾದಲ್ಲಿರುವ ತಮ್ಮ ಮನೆಗೆ ಶಿಫ್ಟ್ ಆಗಿದ್ದರು. ಇನ್ನೊಂದು ಆಸಕ್ತಿದಾಯಕ ವಿಚಾರವೆಂದರೆ 2019ರಲ್ಲಿ, ಬಿಗ್ರೇಡಿಯರ್​ ವಾಸೀಮ್​ ಇಫ್ರಿಕಾರ್​ ಚೀಮಾ ಅವರ ಮಗಳ ಮದುವೆಗೆ ಇಮ್ರಾನ್​ ಸರ್ಕಾರಿ ಬಂಗಲೆಯನ್ನು ಬಾಡಿಗೆಗೆ ನೀಡಲಾಗಿತ್ತು. ಆ ಮದುವೆಯಲ್ಲಿ ಇಮ್ರಾನ್​ ಖಾನ್​ ಕೂಡ ಪಾಲ್ಗೊಂಡಿದ್ದರು. ಇನ್ನು ಈ ಬಂಗಲೆಗೆ ನಿರ್ವಹಣೆಗೇ ಏನಿಲ್ಲವೆಂದರೆ 470 ಮಿಲಿಯಲ್ ರೂಪಾಯಿ ಖರ್ಚಾಗುತ್ತದೆ. ಹಾಗಾಗಿ ಅವರು ನಿವಾಸ ತೊರೆದಿದ್ದಾರೆ ಎಂದು ಪಾಕಿಸ್ತಾನದ ಶಿಕ್ಷಣ ಸಚಿವ ಶಫ್ಕತ್ ಮೆಹಮೂದ್ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಧ್ಯಪ್ರದೇಶದಲ್ಲಿ ಭೀಕರ ಪ್ರವಾಹ; ನೋಡನೋಡುತ್ತಲೇ ಕೊಚ್ಚಿ ಹೋದ ಸೇತುವೆ

ಏಕಕಾಲಕ್ಕೆ ಅನೇಕ ಸ್ತ್ರೀಯರ ಜೊತೆ ಲೈಂಗಿಕ ಕ್ರಿಯೆ, ಪತ್ನಿಗೆ ಥಳಿತ; ಹನಿ ಸಿಂಗ್​ ಕರ್ಮಕಾಂಡದ ಪೂರ್ತಿ ಲಿಸ್ಟ್​ ಇಲ್ಲಿದೆ

Pakistan Government decided to put the Prime Minister Imran Khan’s resident for rent

Follow us on

Related Stories

Most Read Stories

Click on your DTH Provider to Add TV9 Kannada