ಗ್ರೀಸ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ: ವಿಮಾನ ನಿಲ್ದಾಣದಲ್ಲಿ ಭಾರತೀಯರಿಂದ ಅದ್ಧೂರಿ ಸ್ವಾಗತ

|

Updated on: Aug 25, 2023 | 2:23 PM

ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರ ಆಹ್ವಾನದ ಮೇರೆಗೆ ಇಂದು (ಆ.25) ಗ್ರೀಸ್‌ಗೆ ಭೇಟಿ ನೀಡಿದ್ದಾರೆ. 40 ವರ್ಷಗಳ ನಂತರ ಭಾರತದ ಪ್ರಧಾನಿ ಗ್ರೀಸ್‌ಗೆ ಭೇಟಿ ನೀಡಿದ್ದು, ಗ್ರೀಸ್​ನಲ್ಲಿರುವ ಭಾರತೀಯರ ಜತೆಗೆ ಮೋದಿ ಅವರು ಸಂವಾದ ನಡೆಸಲಿದ್ದಾರೆ.

ಗ್ರೀಸ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ: ವಿಮಾನ ನಿಲ್ದಾಣದಲ್ಲಿ ಭಾರತೀಯರಿಂದ ಅದ್ಧೂರಿ ಸ್ವಾಗತ
ಪ್ರಧಾನಿ ಮೋದಿ ಗ್ರೀಕ್​​ ಭೇಟಿ
Follow us on

ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಮುಗಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ (Kyriakos Mitsotakis) ಅವರ ಆಹ್ವಾನದ ಮೇರೆಗೆ ಇಂದು (ಆ.25) ಗ್ರೀಸ್‌ಗೆ ಭೇಟಿ ನೀಡಿದ್ದಾರೆ. 40 ವರ್ಷಗಳ ನಂತರ ಭಾರತದ ಪ್ರಧಾನಿ ಗ್ರೀಸ್‌ಗೆ ಭೇಟಿ ನೀಡಿದ್ದು, ಗ್ರೀಸ್​ನಲ್ಲಿರುವ ಭಾರತೀಯರ ಜತೆಗೆ ಮೋದಿ ಅವರು ಸಂವಾದ ನಡೆಸಲಿದ್ದಾರೆ. ಇನ್ನು ಪ್ರಧಾನಿ ಮೋದಿ ಅವರನ್ನು ಅದ್ಧೂರಿಯಲ್ಲಿ ಭಾರತೀಯರು ಸ್ವಾಗತಿಸಿದ್ದರು. ಪ್ರಧಾನಿ ಮೋದಿ ಅವರು ಭಾರತ ಮತ್ತು ಗ್ರೀಸ್ ನಾಗರಿಕತೆಯ ಸಂಬಂಧಗಳನ್ನು ಒಗ್ಗೂಡಿಸಲು ಮತ್ತು ಇತ್ತೀಚಿನ ವರ್ಷಗಳಲ್ಲಿ ಸಮುದ್ರ ಸಾರಿಗೆ, ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆಗಳು ಮತ್ತು ಸಮುದಾಯಗಳ ನಡುವಿನ ಸಂಬಂಧವನ್ನು ಬಲಪಡಿಸುವ ಸಲುವಾಗಿ ಈ ಭೇಟಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಆಫ್ರಿಕಾದಿಂದ ಗ್ರೀಸ್​​ನ ಅಥೆನ್ಸ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಗ್ರೀಕ್ ವಿದೇಶಾಂಗ ಸಚಿವ ಜಾರ್ಜ್ ಗೆರಾಪೆಟ್ರಿಟಿಸ್ ಮತ್ತು ಅಸಖ್ಯಾಂತ ಭಾರತೀಯರು ಸ್ವಾಗತಿಸಿದರು.

ಇನ್ನು ಪ್ರಧಾನಿ ಮೋದಿ ಅವರು ಅಥೆನ್ಸ್‌ ವಿಮಾನ ನಿಲ್ದಾಣದಲ್ಲಿ ಭಾರತೀಯರು ಸ್ವಾಗತಿಸಿದ ಪರಿಯನ್ನು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಭಾರತ-ಗ್ರೀಸ್ ಸ್ನೇಹವನ್ನು ಗಾಢಗೊಳಿಸುವ ಉದ್ದೇಶದಿಂದ ಗ್ರೀಸ್​​ಗೆ ಭೇಟಿ ನೀಡಿದ್ದೇನೆ. ನಾನು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದೇನೆ ಮತ್ತು ಇಲ್ಲಿರುವ (ಗ್ರೀಸ್​​) ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದೇನೆ ಎಂದು ಟ್ವೀಟ್​​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:Pಭಾರತದ ತ್ವರಿತಗತಿ ಅಭಿವೃದ್ಧಿ ಅರ್ಥಮಾಡಿಕೊಳ್ಳಲು ಇಡೀ ವಿಶ್ವ ಉತ್ಸುಕವಾಗಿದೆ: ಪ್ರಧಾನಿ ನರೇಂದ್ರ ಮೋದಿ

ಇನ್ನು ಪ್ರಧಾನಿ ಮೋದಿ ಅವರ ಗ್ರೀಸ್​​ ಭೇಟಿಯನ್ನು ಎದುರು ನೋಡುತ್ತಿದ್ದ ಭಾರತೀಯರು, ಮೋದಿ ನಿಲ್ದಾಣಕ್ಕೆ ಬರುತ್ತಿದ್ದಂತೆ, ಭಾರತ್​​ ಮಾತ ಕೀ ಜೈ ಎಂಬ ಘೋಷಣೆಯನ್ನು ಕೂಗುತ್ತಾ ಸಂತೋಷದಿಂದ ಸ್ವಾಗತಿಸಿದರು. ಇನ್ನು ಪ್ರಧಾನಿ ಮೋದಿ ಭೇಟಿ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಭಾರತೀಯರೊಬ್ಬರು, ಮೋದಿ ಅವರು ಇಲ್ಲಿಗೆ ಬಂದಿರುವುದು ನಮಗೆ ತುಂಬಾ ಸಂತೋಷವಾಗಿದೆ. ಪ್ರಧಾನಿಯವರ ಗ್ರೀಸ್ ಭೇಟಿಯು ಈ ದೇಶದ ಹೆಸರನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್​​​

ಒಂದು ದಿನದ ಮಟ್ಟಿಗೆ ಗ್ರೀಸ್​​ಗೆ ಭೇಟಿ ನೀಡಿದ್ದ ಮೋದಿ ಅವರು ಅಥೆನ್ಸ್‌ನಲ್ಲಿರುವ ಗ್ರಾಂಡೆ ಬ್ರೆಟಾಗ್ನೆ ಹೋಟೆಲ್​​ಗೆ ಆಗಮಿಸಿ, ಭಾರತೀಯ ಸಮುದಾಯದ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ಇನ್ನು ಭಾರತೀಯ ಮತ್ತು ಗ್ರೀಸ್​​​ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದು, ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ 

Published On - 1:32 pm, Fri, 25 August 23