ಮ್ಯಾನ್ಮಾರ್‌ನಲ್ಲಿ ಸೇನಾ ಕ್ರಾಂತಿ.. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಬಂಧನ
ಪ್ರಜಾಪ್ರಭುತ್ವದಿಂದ ಚುನಾಯಿತರಾದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂಕಿ ಸೇರಿ ಕೆಲವರನ್ನು ಮಿಲಿಟರಿ ಬಂಧಿಸಿದ್ದು ಮ್ಯಾನ್ಮಾರ್‌ನ ಮಿಲಿಟರಿ ಒಂದು ವರ್ಷದ ಅವಧಿಗೆ ತುರ್ತು ಪರಿಸ್ಥಿತಿ ಹೇರಿದೆ.
ಯಾಂಗೊನ್: ಮ್ಯಾನ್ಮಾರ್‌ನಲ್ಲಿ ಸೇನಾ ಕ್ರಾಂತಿ ನಡೆದಿದೆ. ಚುನಾವಣೆಯಲ್ಲಿ ಚುನಾಯಿತರಾಗಿದ್ದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಲಾಗಿದೆ. ದೇಶದಲ್ಲಿ ಒಂದು ವರ್ಷದ ಅವಧಿಗೆ ತುರ್ತು ಪರಿಸ್ಥಿತಿ ಹೇರಲಾಗಿದೆ. ಈಗಾಗಲೇ ಜನಾಂಗೀಯ ಹಿಂಸೆಯಿಂದ ತತ್ತರಿಸಿದ್ದ ಮ್ಯಾನ್ಮಾರ್‌ನಲ್ಲಿ ಶಾಂತಿ ಸ್ಥಾಪನೆ ಯತ್ನಕ್ಕೆ ಹಿನ್ನಡೆಯಾದಂತೆ ಆಗಿದೆ.
“ಚುನಾವಣಾ ವಂಚನೆಗೆ” ಪ್ರತಿಕ್ರಿಯೆಯಾಗಿ, ಮಿಲಿಟರಿ ಮುಖ್ಯಸ್ಥ ಮಿನ್ ಆಂಗ್ ಹ್ಲೇಂಗ್‌ಗೆ ಅಧಿಕಾರವನ್ನು ಹಸ್ತಾಂತರಿಸಿ ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಮ್ಯಾನ್ಮಾರ್‌ನ ಸೇನೆಯು ತಿಳಿಸಿದೆ ಎಂದು ಮಿಲಿಟರಿ ಒಡೆತನದ ದೂರದರ್ಶನ ಕೇಂದ್ರವೊಂದರ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
Budget 2021 LIVE: ಇಂದು ಕೇಂದ್ರ ಬಜೆಟ್.. ಸೊರಗಿರುವ ಆರ್ಥಿಕತೆಗೆ ನಿರ್ಮಲಾ ನೀಡಲಿದ್ದಾರಾ ಮದ್ದು?
Published On - 9:12 am, Mon, 1 February 21