
ಆನೆ ಲದ್ದಿ ಕೊರೊನಾ ಸೋಂಕನ್ನು ಗುಣ ಮಾಡುತ್ತದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದೇ ತಡ,ಆನೆ ಲದ್ದಿಯನ್ನು ಕೊಂಡುಕೊಳ್ಳಲು ಜನ ಮುಗಿಬಿದ್ದಿರುವ ಘಟನೆ ನಡೆದಲ್ಲಿ ನಮೀಬಿಯಾದಲ್ಲಿ ನಡೆದಿದೆ.
ಕೊರೊನಾ ಸೋಂಕಿಗೆ ಪ್ರಸ್ತುತ ಯಾವುದೇ ಲಸಿಕೆ ಇಲ್ಲ. ಹಾಗಾಗಿ ಯಾರೂ ಈ ಸುಳ್ಳು ವದಂತಿ ಕಿವಿ ಕೊಡಬೇಡಿ ಎಂದು ನಮೀಬಿಯಾದ ಆರೋಗ್ಯ ಸಚಿವ ಕಲುಂಬಿ ಶಂಗುಲಾ ಹೇಳಿದ್ದಾರೆ.
ಜೊತೆಗೆ ಕೆಲವು ಸಾಂಪ್ರದಾಯಿಕ ವೈದ್ಯರು ಆನೆ ಸಗಣಿ ತಲೆನೋವು, ಹಲ್ಲುನೋವಿಗೆ ಚಿಕಿತ್ಸೆ ನೀಡುವ ಗುಣಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಆದರೆ ಇದು COVID-19 ಅನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವುದು ಹೊಸ ಪ್ರವೃತ್ತಿಯಾಗಿದೆ. ಈ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಯಾರೂ ಈ ವದಂತಿಗೆ ಕಿವಿ ಕೊಡಬೇಡಿ ಎಂದಿದ್ದಾರೆ.
Published On - 11:29 am, Wed, 19 August 20