ಅಮೆರಿಕಾದಲ್ಲಿ ಕೊವಿಡ್ ಸಾವುಗಳು ಹೆಚ್ಚುತ್ತಿರುವುದಕ್ಕೆ ಟ್ರಂಪ್ ಹುಚ್ಚು ಧೋರಣೆಗೆ ಕಾರಣವೇ?

ಪ್ರಸಕ್ತ ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಕೊವಿಡ್-19 ನಿಯಂತ್ರಿಸುವಲ್ಲಿ ತಮ್ಮ ಸರಕಾರದಿಂದ ಆಗಿರುವ ವೈಫಲ್ಯ ಮುಳುವಾಗುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ. ಆಘಾತಕಾರಿ ಸಂಗತಿಯೆಂದರೆ, ಕೊರೊನಾ ವೈರಸ್ ಅಮೆರಿಕಾದಲ್ಲಿ ಹಬ್ಬಲಾರಂಭಿಸಿದ ದಿನದಿಂದ ಇಂದಿನ ಗಂಭೀರ ಸ್ಥಿತಿ ತಲುಪುವವರೆಗೂ ಟ್ರಂಪ್ ಅದನ್ನು ಕಡೆಗಾಣಿಸುತ್ತಲೇ ಇದ್ದಾರೆ. ಸೋಂಕಿನ ಪ್ರಾಥಮಿಕ ಹಂತದಿಂದಲೂ ಅದೊಂದು ಸಾಮಾನ್ಯ ನೆಗಡಿಯಂಥ ರೋಗ ಎನ್ನುತ್ತಾ ಉಡಾಫೆ ಮಾಡಿದರು. ನಿಮಗೆ ಗೊತ್ತಿರಬಹುದು, ಅವರು ತೀರ ಇತ್ತೀಚಿನವರೆಗೆ ಮಾಸ್ಕ್ ಕೂಡ ಧರಿಸುತ್ತಿರಲಿಲ್ಲ! ಸಾವುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಾಗಲೂ […]

ಅಮೆರಿಕಾದಲ್ಲಿ ಕೊವಿಡ್ ಸಾವುಗಳು ಹೆಚ್ಚುತ್ತಿರುವುದಕ್ಕೆ ಟ್ರಂಪ್ ಹುಚ್ಚು ಧೋರಣೆಗೆ ಕಾರಣವೇ?
ಡೊನಾಲ್ಡ್​ ಟ್ರಂಪ್ (ಸಂಗ್ರಹ ಚಿತ್ರ)
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 19, 2020 | 7:40 PM

ಪ್ರಸಕ್ತ ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಕೊವಿಡ್-19 ನಿಯಂತ್ರಿಸುವಲ್ಲಿ ತಮ್ಮ ಸರಕಾರದಿಂದ ಆಗಿರುವ ವೈಫಲ್ಯ ಮುಳುವಾಗುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ.

ಆಘಾತಕಾರಿ ಸಂಗತಿಯೆಂದರೆ, ಕೊರೊನಾ ವೈರಸ್ ಅಮೆರಿಕಾದಲ್ಲಿ ಹಬ್ಬಲಾರಂಭಿಸಿದ ದಿನದಿಂದ ಇಂದಿನ ಗಂಭೀರ ಸ್ಥಿತಿ ತಲುಪುವವರೆಗೂ ಟ್ರಂಪ್ ಅದನ್ನು ಕಡೆಗಾಣಿಸುತ್ತಲೇ ಇದ್ದಾರೆ. ಸೋಂಕಿನ ಪ್ರಾಥಮಿಕ ಹಂತದಿಂದಲೂ ಅದೊಂದು ಸಾಮಾನ್ಯ ನೆಗಡಿಯಂಥ ರೋಗ ಎನ್ನುತ್ತಾ ಉಡಾಫೆ ಮಾಡಿದರು. ನಿಮಗೆ ಗೊತ್ತಿರಬಹುದು, ಅವರು ತೀರ ಇತ್ತೀಚಿನವರೆಗೆ ಮಾಸ್ಕ್ ಕೂಡ ಧರಿಸುತ್ತಿರಲಿಲ್ಲ!

ಸಾವುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಾಗಲೂ ಟ್ರಂಪ್ ನಿರ್ಲಕ್ಷ್ಯದ ಮಾತುಗಳನ್ನಾಡುವುದು ಬಿಡಲಿಲ್ಲ. ಅವರ ವಿರೋಧಿಗಳು ಅದರಲ್ಲೂ ವಿಶೇಷವಾಗಿ ಚುನಾವಣೆಯಲ್ಲಿ ಅವರ ಪ್ರತಿಸ್ಫರ್ಧಿಗಳಾಗಿರುವ ಡೆಮೊಕ್ರಾಟಿಕ್ ಪಕ್ಷದ ಜೊ ಬಿಡೆನ್ ಹಾಗೂ ಭಾರತೀಯ ಮೂಲದ ಕಮಲ ಹ್ಯಾರಿಸ್ ಮತ್ತು ಮಾಜಿ ಅದ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಷೆಲ್ ಒಬಾಮಾ ಸತತವಾಗಿ ಟೀಕಿಸುತ್ತಾ ಮುಸುಡಿಗೆ ತಿವಿದರೂ ಟ್ರಂಪ್ ತಮ್ಮ ಹುಚ್ಚು ಧೋರಣೆಯನ್ನು ಬದಲಿಸಲಿಲ್ಲ.

ಕೊನೆಗೊಮ್ಮೆ, ಕೊವಿಡ್ ಸಂಬಂಧಿತ ಸಾವಿನ ಸಂಖ್ಯೆ ಲಕ್ಷ ದಾಟದು ಅಂತ ಹೇಳಿ ದೇಶದ ನಾಗರಿಕರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಟ್ರಂಪ್ ಮಾಡಿದರು. ಆದರೀಗ ಅದು ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಇವತ್ತು ಅಂದರೆ, ಬುಧವಾರದಂದು ಅಮೆರಿಕಾದಲ್ಲಿ ಕೊವಿಡ್​ಗೆ ಸಂಬಂಧಿಸಿದ ಸಾವುಗಳ ಸಂಖ್ಯೆ 1,75,000 ದಾಟಿದೆ. ನಾಳೆ ಟ್ರಂಪ್ ಸಾವಿನ ಸಂಖ್ಯೆ 2 ಲಕ್ಷ ದಾಟದು ಎಂದು ಹೇಳಿದರೂ ಆಶ್ಚರ್ಯಪಡಬೇಕಿಲ್ಲ. 

ಸುಮಾರು 33 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಅರ್ಧ ಕೋಟಿಗೂ ಹೆಚ್ಚು ಜನ, ನಿಖರವಾಗಿ ಹೇಳುವುದಾದರೆ, 56, 56, 204 ಸೋಂಕಿಗೊಳಗಾಗಿದ್ದು, ಅವರಲ್ಲಿ 30 ಲಕ್ಷಕ್ಕಿಂತ ಜಾಸ್ತಿ ಮಂದಿ ಗುಣಮುಖರಾಗಿದ್ದಾರೆ. 

ಅಂದಹಾಗೆ, ವಿಶ್ವದಲ್ಲಿ ಕೊವಿಡ್-19 ಪ್ರಕಣಗಳ ಸಂಖ್ಯೆ 22 ಕೋಟಿಗೂ ಮೀರಿದ್ದು, 7,84,876 ಜನ ಬಲಿಯಾಗಿದ್ದಾರೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ