Namibia President Death: ನಮೀಬಿಯಾ ಅಧ್ಯಕ್ಷ ಗೇನ್​ಗೋಬ್ ನಿಧನ

|

Updated on: Feb 04, 2024 | 10:38 AM

ನಮೀಬಿಯಾ ಅಧ್ಯಕ್ಷ ಹೇಗ್ ಗೇನ್​ಗೋಬ್ ಭಾನುವಾರ ಮುಂಜಾನೆ ಕ್ಯಾನ್ಸರ್​ನಿಂದ ನಿಧನರಾಗಿದ್ದಾರೆ. 2014ರಲ್ಲಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ತಾವು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿರುವುದಾಗಿ ಸಾರ್ವಜನಿಕರಿಗೆ ತಿಳಿಸಿದ್ದರು. ಮುಂದಿನ ವರ್ಷ ಅವರು ಅಧ್ಯಕ್ಷರಾದರು.

Namibia President Death: ನಮೀಬಿಯಾ ಅಧ್ಯಕ್ಷ ಗೇನ್​ಗೋಬ್ ನಿಧನ
ಗೇನ್​ಗೋಬ್
Follow us on

ನಮೀಬಿಯಾ ಅಧ್ಯಕ್ಷ ಹೇಗ್ ಗೇನ್​ಗೋಬ್(Hage Geingob) ಭಾನುವಾರ ಮುಂಜಾನೆ ಕ್ಯಾನ್ಸರ್​ನಿಂದ ನಿಧನರಾಗಿದ್ದಾರೆ. ಹೇಗ್ ಕಳೆದ ಕೆಲವು ವಾರಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಕಳೆದ ತಿಂಗಳ ಕೊನೆಯಲ್ಲಿ ಅವರು ಸಾಮಾನ್ಯ ವೈದ್ಯಕೀಯ ತಪಾಸಣೆಯ ನಂತರ ಚಿಕಿತ್ಸೆಗಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಹೋಗುವುದಾಗಿ ಹೇಳಿದ್ದರು. ಗೇನ್​ಗೋಬ್ ವಿಂಡ್‌ಹೋಕ್‌ನಲ್ಲಿರುವ ಲೇಡಿ ಪೊಹಂಬಾ ಆಸ್ಪತ್ರೆಯಲ್ಲಿ ಹೇಜ್ ಗೀಂಗೊಬ್ ನಿಧನರಾದರು.

2014ರಲ್ಲಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ತಾವು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿರುವುದಾಗಿ ಸಾರ್ವಜನಿಕರಿಗೆ ತಿಳಿಸಿದ್ದರು. ಮುಂದಿನ ವರ್ಷ ಅವರು ಅಧ್ಯಕ್ಷರಾದರು.
ಈ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ದೇಶದಲ್ಲಿ ಅಧ್ಯಕ್ಷೀಯ ಮತ್ತು ಸಂಸದೀಯ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಇದರಿಂದ ಸ್ಥಳೀಯ ಜನರು ಹಾಗೂ ಹಲವು ಗಣ್ಯರು ಹೇಗ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

1990 ರಲ್ಲಿ ಸ್ವಾಪೋ ಪಕ್ಷವು ನಮೀಬಿಯಾದಲ್ಲಿ ಸ್ವಾತಂತ್ರ್ಯದ ನಂತರ ಅಧಿಕಾರದಲ್ಲಿದೆ. ಈಗ ಆ ಪಕ್ಷದ ಅಧ್ಯಕ್ಷರು ನಿಧನರಾದ ಕಾರಣ ಅವರ ಸ್ಥಾನಕ್ಕೆ ನಂದಿ-ನೈತ್ವಾ ಅವರನ್ನು ಆಯ್ಕೆ ಮಾಡಲಾಯಿತು. ಅವರು ಪ್ರಸ್ತುತ ನಮೀಬಿಯಾದ ಉಪ ಪ್ರಧಾನ ಮಂತ್ರಿಯಾಗಿದ್ದು, ಅವರು ಗೆದ್ದರೆ, ಅವರು ದೇಶದ ಮೊದಲ ಮಹಿಳಾ ಅಧ್ಯಕ್ಷರಾಗುತ್ತಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:31 am, Sun, 4 February 24