ಭಾರತ-ಪಾಕಿಸ್ತಾನ ಈಗಾಗಲೇ 75 ವರ್ಷಗಳನ್ನು ವ್ಯರ್ಥ ಮಾಡಿದೆ, ಮುಂದಿನ 75 ವರ್ಷ ಹಾಗಾಗುವುದು ಬೇಡ: ನವಾಜ್ ಷರೀಫ್​

|

Updated on: Oct 18, 2024 | 8:43 AM

ಶಾಂಘೈ ಸಹಕಾರ ಶೃಂಗ (ಎಸ್‌ಇ ಒ) ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪಾಕಿಸ್ತಾನ ಭೇಟಿಯ ಬಳಿಕ ಉಭಯ ದೇಶಗಳ ಸಂಬಂಧಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೊಂದು ಸಕಾರಾತ್ಮಕ ಬದಲಾವಣೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವೂ ಈ ಬಗ್ಗೆ ವಿಶೇಷ ಒಲವು ತೋರಿದೆ. ಮೋದಿ ಪಾಕಿಸ್ತಾನಕ್ಕೆ ಬಂದಿದ್ದರೆ ಖುಷಿಯಾಗುತ್ತಿತ್ತು ಎಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಈಗಾಗಲೇ 75 ವರ್ಷಗಳನ್ನು ವ್ಯರ್ಥ ಮಾಡಿದೆ, ಮುಂದಿನ 75 ವರ್ಷ ಹಾಗಾಗುವುದು ಬೇಡ: ನವಾಜ್ ಷರೀಫ್​
ನವಾಜ್ ಷರೀಫ್​
Follow us on

ಭಾರತ-ಪಾಕಿಸ್ತಾನ ಈಗಾಗಲೇ 75 ವರ್ಷಗಳನ್ನು ವ್ಯರ್ಥ ಮಾಡಿವೆ, ಮುಂದಿನ 75 ವರ್ಷಗಳು ಹೀಗಾಗದಿರಲಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಂಬಂಧಗಳು ಕೊನೆಗೊಂಡಿವೆ. ಬಡತನದಿಂದ ಬಳಲುತ್ತಿರುವ ನೆರೆಯ ದೇಶವು ಪ್ರಧಾನಿ ನರೇಂದ್ರ ಮೋದಿಯವರಿಂದ ಉಭಯ ದೇಶಗಳ ನಡುವೆ ಮತ್ತೆ ಸೌಹಾರ್ದತೆ ಮೂಡಲಿ, ಸಂಬಂಧ ಸುಧಾರಿಸಲಿ ಎಂದು ಬಯಸಿದೆ.

ಎಸ್ ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ತೆರಳಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿಯ ನಂತರ, ಮಾಜಿ ಪ್ರಧಾನಿ ನವಾಜ್ ಷರೀಫ್, ಎರಡೂ ಕಡೆಯಿಂದ ಕೊರತೆಗಳಿವೆ ಆದರೆ ಮತ್ತೆ ಸ್ನೇಹಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂದು ಹೇಳಿದರು.

ಇದು ಆರಂಭವಷ್ಟೇ. ಭಾರತ ಮತ್ತು ಪಾಕಿಸ್ತಾನ ಹಿಂದಿನದನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸುತ್ತವೆ ಎನ್ನುವ ನಂಬಿಕೆ ಇದೆ. ಪ್ರಧಾನಿ ಮೋದಿ ಇಲ್ಲಿಗೆ ಬರಬೇಕೆಂದು ಬಯಸಿದ್ದೆ, ವಿದೇಶಾಂಗ ಸಚಿವ ಜೈಶಂಕರ್ ಇಲ್ಲಿಗೆ ಬಂದಿದ್ದು ಹೊಸ ಆರಂಭಕ್ಕೆ ನಾಂದಿ ಹಾಡಿರುವುದು ಸಂತಸ ತಂದಿದೆ ಎಂದು ನವಾಜ್ ಷರೀಫ್ ಹೇಳಿದ್ದಾರೆ.

ಸದ್ಯಕ್ಕೆ ಯಾವುದೇ ರೀತಿಯ ವಿವಾದವನ್ನು ಬದಿಗಿಟ್ಟು ಸಕಾರಾತ್ಮಕ ಅಂಶಗಳನ್ನು ಮಾತ್ರ ಪ್ರಸ್ತಾಪಿಸಿ, ನಾವು ಈಗ ಸಕಾರಾತ್ಮಕ ಹೆಜ್ಜೆಗಳನ್ನು ಇಡಬೇಕಾಗಿದೆ, ಹೊಸದೊಂದು ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ:ಪಾಕಿಸ್ತಾನದ ನೆಲದಲ್ಲಿ ಉಗ್ರವಾದದ ವಿರುದ್ಧ ಗುಡುಗಿದ ಜೈಶಂಕರ್

ಭಾರತ ಮತ್ತು ಪಾಕಿಸ್ತಾನ ಎರಡೂ ಈಗ ವ್ಯಾಪಾರ, ಹವಾಮಾನ ಬದಲಾವಣೆ, ವ್ಯಾಪಾರ, ಉದ್ಯಮ, ಕ್ರೀಡೆ ಇತ್ಯಾದಿಗಳಲ್ಲಿ ಮುಂದುವರಿಯಬಹುದು ಎಂದು ನವಾಜ್ ಷರೀಫ್ ಹೇಳಿದರು. ವಾಜಪೇಯಿ ಅವರೊಂದಿಗಿನ ಅವರ ಭೇಟಿ ಮತ್ತು ಅವರಿಬ್ಬರೂ ಉತ್ತಮ ಬಾಂಧವ್ಯಕ್ಕೆ ಹೇಗೆ ಅಡಿಪಾಯ ಹಾಕಿದರು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ನಾವು ಎಲ್ಲಿ ಬಿಟ್ಟೆವೋ ಅಲ್ಲಿಂದ ಆರಂಭಿಸಬೇಕು ಎಂದು ನವಾಜ್ ಷರೀಫ್ ಹೇಳಿದ್ದಾರೆ. ಕಳೆದ 75 ವರ್ಷಗಳು ಹೀಗೆಯೇ ಕಳೆದವು. ಇನ್ನು 75 ವರ್ಷ ವ್ಯರ್ಥ ಮಾಡಬೇಡಿ. ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಪ್ರಕ್ರಿಯೆಯನ್ನು ಪುನರಾರಂಭಿಸುವ ಮಹತ್ವ ಒತ್ತಿ ಹೇಳಿದ ನವಾಜ್ ಷರೀಫ್, ಅದು ಹಳಿ ತಪ್ಪಲು ಬಿಡಬಾರದು ಎಂದು ಹೇಳಿದರು. ನಮ್ಮ ಆರಂಭದ ಎಳೆಗಳನ್ನು ಬಿಡಬಾರದು ಎಂದು ಷರೀಫ್ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ದಶಕಗಳ ಬಗೆಹರಿಯದ ಸಮಸ್ಯೆಯನ್ನು ಅವರು ಹೇಳಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ