ಬಲೂನ್ ಸ್ಫೋಟದಲ್ಲಿ ನೇಪಾಳದ ಉಪ ಪ್ರಧಾನಿಗೆ ಸುಟ್ಟ ಗಾಯ; ಆಸ್ಪತ್ರೆಗೆ ದಾಖಲು

ಕಾರ್ಯಕ್ರಮವೊಂದರಲ್ಲಿ ಬಲೂನ್​ಗಳನ್ನು ಹಾರಿಬಿಡುವಾಗ ಬಲೂನ್ ಸ್ಫೋಟಗೊಂಡು ನೇಪಾಳದ ಉಪ ಪ್ರಧಾನಿ ಬಿಷ್ಣು ಪ್ರಸಾದ್ ಪೌಡೆಲ್ ಮತ್ತು ಪೋಖರ ಮೇಯರ್‌ ಧನರಾಜ್ ಆಚಾರ್ಯ ಅವರಿಗೆ ಸುಟ್ಟ ಗಾಯಗಳಾಗಿವೆ. ಅವರಿಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಇಂದು ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ.

ಬಲೂನ್ ಸ್ಫೋಟದಲ್ಲಿ ನೇಪಾಳದ ಉಪ ಪ್ರಧಾನಿಗೆ ಸುಟ್ಟ ಗಾಯ; ಆಸ್ಪತ್ರೆಗೆ ದಾಖಲು
Nepal Deputy Pm

Updated on: Feb 15, 2025 | 6:43 PM

ಕಠ್ಮಂಡು: ಇಂದು ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಲೂನ್ ಸ್ಫೋಟಗೊಂಡ ಕಾರಣದಿಂದಾಗಿ ನೇಪಾಳದ ಉಪ ಪ್ರಧಾನಿ ಮತ್ತು ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್ ಹಾಗೂ ಪೋಖರ ಮೆಟ್ರೋಪಾಲಿಟನ್ ಮೇಯರ್ ಧನರಾಜ್ ಆಚಾರ್ಯ ಅವರಿಗೆ ಸುಟ್ಟ ಗಾಯಗಳಾಗಿವೆ. ಇಂದು ಮಧ್ಯಾಹ್ನ ಪೋಖರ ಪ್ರವಾಸೋದ್ಯಮ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ನಡೆದ ಘಟನೆಯಲ್ಲಿ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಮೇಲೆ ಹಾರಿಸಲು ಸಿದ್ಧವಾಗಿದ್ದ ಬಲೂನ್‌ಗಳು ಪಟಾಕಿಯ ಬೆಂಕಿ ತಗುಲಿ ಸ್ಫೋಟಗೊಂಡವು.

ಉಪಪ್ರಧಾನಿ ಪೌಡೆಲ್ ಮತ್ತು ಮೇಯರ್ ಆಚಾರ್ಯ ಇಬ್ಬರನ್ನೂ ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೀರ್ತಿಪುರದ ಬರ್ನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ, ಇಂದಿನ ಸಮಾರಂಭದ ಸಂದರ್ಭದಲ್ಲಿ ಹೈಡ್ರೋಜನ್ ತುಂಬಿದ ಬಲೂನ್ ಪಟಾಕಿಯ ಬೆಂಕಿ ತಗುಲಿ ಸ್ಫೋಟಗೊಂಡಿತು. ಆಗ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: ನೇಪಾಳದ ಏಕೈಕ ಬಿಲಿಯನೇರ್ ಬಿನೋದ್ ಚೌಧರಿ; ನೂಡಲ್ ಕಂಪನಿ ಕಟ್ಟಿ ಗೆದ್ದ ನೇಪಾಳೀ


ನೇಪಾಳದ ಉಪಪ್ರಧಾನಿ ಪೌಡೆಲ್ ಅವರ ಕೈ ಮತ್ತು ಮುಖದ ಮೇಲೆ ಸುಟ್ಟಗಾಯಗಳು ಉಂಟಾಗಿವೆ. ಆದರೆ ಮೇಯರ್ ಆಚಾರ್ಯ ಅವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ