ನೇಪಾಳದ ಏಕೈಕ ಬಿಲಿಯನೇರ್ ಬಿನೋದ್ ಚೌಧರಿ; ನೂಡಲ್ ಕಂಪನಿ ಕಟ್ಟಿ ಗೆದ್ದ ನೇಪಾಳೀ

One billionaire from Nepal: ವಿಶ್ವಾದ್ಯಂತ ಕನಿಷ್ಠ ಒಂದು ಬಿಲಿಯನ್ ಡಾಲರ್​ಗಿಂತ ಹೆಚ್ಚು ಆಸ್ತಿ ಹೊಂದಿದ ಕುಬೇರರ ಸಂಖ್ಯೆ 2,800ಕ್ಕೂ ಹೆಚ್ಚಿದೆ. ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಭಾರತದ 200 ಮಂದಿ ಇದ್ದಾರೆ. ನೇಪಾಳದ ಏಕೈಕ ವ್ಯಕ್ತಿ ಸ್ಥಾನ ಪಡೆದಿದ್ದಾರೆ. ಬಿನೋದ್ ಚೌಧರಿ ಈ ಸಾಧನೆ ಮಾಡಿದ ಏಕೈಕ ನೇಪಾಳಿಗ. ಇವರು ಸ್ಥಾಪಿಸಿದ ವಾಯ್ ವಾಯ್ ನೂಡಲ್ಸ್ ಬ್ರ್ಯಾಂಡ್ ನೇಪಾಳ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಬೇರೂರಿದೆ.

ನೇಪಾಳದ ಏಕೈಕ ಬಿಲಿಯನೇರ್ ಬಿನೋದ್ ಚೌಧರಿ; ನೂಡಲ್ ಕಂಪನಿ ಕಟ್ಟಿ ಗೆದ್ದ ನೇಪಾಳೀ
ಬಿನೋದ್ ಚೌಧರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2024 | 6:12 PM

ನವದೆಹಲಿ, ಅಕ್ಟೋಬರ್ 22: ವಿಶ್ವದಲ್ಲಿ ಬಿಲಿಯನೇರ್​ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಸಿರಿವಂತರ ಸಂಪತ್ತೂ ಕೂಡ ಗಣನೀಯವಾಗಿ ಏರಿಕೆ ಆಗುತ್ತಿದೆ. ಫೋರ್ಬ್ಸ್ ಬಿಲಿಯನೇರ್​ಗಳ ರಿಯಲ್ ಟೈಮ್ ಪಟ್ಟಿಯಲ್ಲಿ ಒಂದು ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವವ ಸಂಖ್ಯೆ 2,800ಕ್ಕೂ ಹೆಚ್ಚಿದೆ. ಇದರಲ್ಲಿ ಅಮೆರಿಕದವರ ಸಂಖ್ಯೆಯೇ 813 ಇದೆ. ಭಾರತದ 200 ಜನರು ಬಿಲಿಯನೇರ್​ಗಳ ಪಟ್ಟಿಗೆ ಸೇರಿದ್ದಾರೆ. ಅತಿಹೆಚ್ಚು ಬಿಲಿಯನೇರ್​ಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ ಮತ್ತು ಭಾರತ ಟಾಪ್-3 ದೇಶಗಳೆನಿಸಿವೆ. ಭಾರತೀಯ ಉಪಖಂಡದಲ್ಲಿ ಭಾರತ ಬಿಟ್ಟರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನೇಪಾಳ ಮಾತ್ರವೇ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ, ಭೂತಾನ್ ಇತ್ಯಾದಿ ದೇಶಗಳಲ್ಲಿ ಒಬ್ಬರೂ ಬಿಲಿಯನೇರ್​ಗಳಿಲ್ಲ.

ನೇಪಾಳದ ಏಕೈಕ ಬಿಲಿಯನೇರ್ ಬಿನೋದ್ ಚೌಧರಿ

ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಬಿಲಿಯನೇರ್ ಬಿನೋದ್ ಚೌಧರಿ. ಇವರ ಬಳಿ ಇರುವ ಆಸ್ತಿಮೌಲ್ಯ 1.8 ಬಿಲಿಯನ್ ಡಾಲರ್. ವಾಯ್ ವಾಯ್ ನೂಡಲ್ಸ್ ಎಂಬ ಕಂಪನಿ ಕಟ್ಟಿ ಅಗಾಧವಾಗಿ ಬೆಳೆಸಿದ್ದಾರೆ ಇವರು.

ಕಠ್ಮಂಡುವಿನ ಖ್ಯಾತ ಬಿಸಿನೆಸ್ ಫ್ಯಾಮಿಲಿಯಲ್ಲಿ ಜನಿಸಿದ ಬಿನೋದ್ ಚೌಧರಿ, ಭಾರತದಲ್ಲಿ ಸಿಎ ಓದಲು ಬಯಸಿದ್ದರಾದರೂ ತಮ್ಮ ತಂದೆಯ ಅನಾರೋಗ್ಯ ಕಾರಣಕ್ಕೆ ಬಹಳ ಬೇಗನೇ ಫ್ಯಾಮಿಲಿ ಬಿಸಿನೆಸ್ ನಿರ್ವಹಣೆಗೆ ಇಳಿಯಬೇಕಾಯಿತು. ನೂಡಲ್ಸ್ ಮಾತ್ರವಲ್ಲ, ವಿವಿಧ ಬಿಸಿನೆಸ್​ಗಳನ್ನು ಅವರು ನಡೆಸಿದ್ದಾರೆ.

ಇದನ್ನೂ ಓದಿ: ಎಚ್​​ಎಸ್​ಬಿಸಿ 160 ವರ್ಷ ಇತಿಹಾಸದಲ್ಲಿ ಸಿಎಫ್​ಒ ಆದ ಮೊದಲ ಮಹಿಳೆ; ಭಾರತ ಮೂಲದ ಕೌರ್ ಹೊಸ ಇತಿಹಾಸ

ವಾಯ್ ವಾಯ್ ನೂಡಲ್ಸ್ ಆರಂಭವಾಗಿದ್ದು ಹೀಗೆ…

ಬಿನೋದ್ ಚೌಧರಿ ಒಮ್ಮೆ ಥಾಯ್ಲೆಂಡ್ ಪ್ರವಾಸಕ್ಕೆ ಹೋದಾಗ ಅಲ್ಲಿ ಇನ್ಸ್​ಟೆಂಟ್ ನೂಡಲ್ಸ್ ಜನಪ್ರಿಯವಾಗಿರುವುದನ್ನು ಗಮನಿಸಿದ್ದಾರೆ. ಆಗ ಅವರಿಗೆ ನೇಪಾಳದಲ್ಲೂ ಇನ್ಸ್​ಟೆಂಟ್ ನೂಡಲ್ಸ್ ಪರಿಚಯಿಸುವ ಐಡಿಯಾ ಹೊಳೆಯಿತು. ಆಗಲೇ ಸ್ಥಾಪನೆಯಾಗಿದ್ದು ವಾಯ್ ವಾಯ್ ನೂಡಲ್ಸ್ (Wai Wai Noodles). ಈ ನೂಡಲ್ಸ್ ತನ್ನ ರುಚಿ ಹಾಗೂ ವೈವಿಧ್ಯತೆಯಿಂದಾಗಿ ಬಹಳ ಬೇಗ ಖ್ಯಾತವಾಗಿದೆ. ಭಾರತೀಯ ಮಾರುಕಟ್ಟೆಯಲ್ಲೂ ಇದು ಜನಪ್ರಿಯವಾಗಿದೆ. ನೂಡಲ್ಸ್ ಮಾರುಕಟ್ಟೆಯಲ್ಲಿ ಮ್ಯಾಗಿ ಪ್ರಾಬಲ್ಯ ಇದ್ದರೂ ವಾಯ್ ವಾಯ್ ಬ್ರ್ಯಾಂಡ್ ಕೂಡ ಗಟ್ಟಿಯಾಗಿ ತಳವೂರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ